ಆಸ್ಟೀರಿಯಾ: ಕ್ಲೌಡ್-ಆಧಾರಿತ ಡ್ರೋನ್ ಕಾರ್ಯಾಚರಣೆಯ ವೇದಿಕೆ ’ಸ್ಕೈಡೆಕ್’ ಅನ್ನು ಆರಂಭಿಸಲಿದೆ

|

ಭಾರತದ ಡ್ರೋನ್ ತಯಾರಕ ಮತ್ತು ಪರಿಹಾರಗಳ ಪೂರೈಕೆದಾರ ಸಂಸ್ಥೆಯಾದ ಆಸ್ಟೀರಿಯಾ ಏರೋಸ್ಪೇಸ್, ಡ್ರೋನ್ ಕಾರ್ಯಾಚರಣೆಗಳ ಸಮಗ್ರ ವೇದಿಕೆ ಸ್ಕೈಡೆಕ್ ಅನ್ನು ಪ್ರಾರಂಭಿಸಿದೆ. ಸ್ಕೈಡೆಕ್ ಎಂಬುದು ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ವೇದಿಕೆಯಾಗಿದ್ದು ಕೃಷಿ, ಸರ್ವೆ, ಕೈಗಾರಿಕಾ ತಪಾಸಣೆ ಹಾಗೂ ಕಣ್ಗಾವಲು ಮತ್ತು ಭದ್ರತೆಯಂತಹ ಹಲವಾರು ಅಗತ್ಯಗಳಿಗಾಗಿ ಡ್ರೋನ್-ಆಸ್-ಎ-ಸರ್ವಿಸ್ (DaaS) ಪರಿಹಾರಗಳನ್ನು ಒದಗಿಸುತ್ತದೆ.

ಕ್ಲೌಡ್-ಆಧಾರಿತ ಡ್ರೋನ್ ಕಾರ್ಯಾಚರಣೆಯ ವೇದಿಕೆ ’ಸ್ಕೈಡೆಕ್’ ಅನ್ನು ಆರಂಭಿಸಲಿದೆ

ಡ್ರೋನ್ ಫ್ಲೀಟ್ ನಿರ್ವಹಣೆ, ಡ್ರೋನ್ ಹಾರಾಟಗಳ ನಿಗದಿ ಮತ್ತು ಕಾರ್ಯಗತಗೊಳಿಸುವಿಕೆ, ಡೇಟಾ ಸಂಸ್ಕರಣೆ ಹಾಗೂ ಡ್ರೋನ್‌ಗಳನ್ನು ಬಳಸಿ ಸೆರೆಹಿಡಿಯಲಾದ ವೈಮಾನಿಕ ಡೇಟಾದ ವಿಶುಯಲೈಸೇಶನ್ ಮತ್ತು ಎಐ-ಆಧಾರಿತ ವಿಶ್ಲೇಷಣೆಗಾಗಿ ಏಕೀಕೃತ ಡ್ಯಾಶ್‌ಬೋರ್ಡ್ ಮತ್ತು ಸೇವೆಗಳನ್ನು ಸ್ಕೈಡೆಕ್ ಒದಗಿಸುತ್ತದೆ. ಸ್ಕೈಡೆಕ್ ಕಾರ್ಯಾಚರಣೆಯ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ, ಪಾಲುದಾರರ ನಡುವಿನ ಸಹಯೋಗವನ್ನು ಉತ್ತಮಪಡಿಸುತ್ತದೆ ಮತ್ತು ಹಲವು ಅಪ್ಲಿಕೇಶನ್‌ಗಳಲ್ಲಿ ಡ್ರೋನ್ ಕಾರ್ಯಕ್ರಮಗಳ ಬಳಕೆಗಾಗಿ ಸುರಕ್ಷಿತ ಮತ್ತು ಕೇಂದ್ರೀಕೃತ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ.

ಕ್ಲೌಡ್-ಆಧಾರಿತ ಡ್ರೋನ್ ಕಾರ್ಯಾಚರಣೆಯ ವೇದಿಕೆ ’ಸ್ಕೈಡೆಕ್’ ಅನ್ನು ಆರಂಭಿಸಲಿದೆ

ಆಸ್ಟೀರಿಯಾ ಏರೋಸ್ಪೇಸ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದ ನೀಲ್ ಮೆಹ್ತಾ ಮಾತನಾಡಿ, 'ಡ್ರೋನ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನಿಯಮಗಳ ಇತ್ತೀಚಿನ ಉದಾರೀಕರಣ ಮತ್ತು DaaSಗೆ ಸರ್ಕಾರವು ನೀಡುತ್ತಿರುವ ಪ್ರೋತ್ಸಾಹವು ಉದ್ಯಮ ವಲಯಗಳಲ್ಲಿ ಡ್ರೋನ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಆಸ್ಟೀರಿಯಾ ಈಗಾಗಲೇ ಭಾರತದ ಪ್ರಮುಖ ಡ್ರೋನ್ ತಯಾರಕರಲ್ಲಿ ಒಂದಾಗಿದೆ. ಸ್ಕೈ‌ಡೆಕ್‌ ಅನ್ನು ಪರಿಚಯಿಸುವುದರೊಂದಿಗೆ, ನಾವು ಇಂದಿನ ಅಗತ್ಯವಾದ ಡ್ರೋನ್ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಕಾರ್ಯಾಚರಣೆಗಳ ಏಕೀಕೃತ ಪರಿಹಾರವನ್ನು ಒದಗಿಸುತ್ತಿದ್ದೇವೆ. ಸ್ಕೈಡೆಕ್ ವೈಮಾನಿಕ ಡೇಟಾವನ್ನು ರೂಪಿಸಲು ಡ್ರೋನ್‌ಗಳ ಬಳಕೆಯನ್ನು ಸರಳಗೊಳಿಸುತ್ತದೆ ಮತ್ತು ಡ್ರೋನ್ ಅಪ್ಲಿಕೇಶನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಸಶಕ್ತಗೊಳಿಸಲು ಆ ಡಿಜಿಟಲ್ ಡೇಟಾವನ್ನು ವ್ಯಾಪಾರದ ಒಳನೋಟಗಳಾಗಿ ಪರಿವರ್ತಿಸುತ್ತದೆ, ಎಂದು ಹೇಳಿದ್ದಾರೆ.

ಕ್ಲೌಡ್-ಆಧಾರಿತ ಡ್ರೋನ್ ಕಾರ್ಯಾಚರಣೆಯ ವೇದಿಕೆ ’ಸ್ಕೈಡೆಕ್’ ಅನ್ನು ಆರಂಭಿಸಲಿದೆ

ಕೃಷಿ ವಲಯಕ್ಕಾಗಿ, ಸ್ಕೈಡೆಕ್ ದತ್ತಾಂಶ ಮತ್ತು ಒಳನೋಟಗಳನ್ನು ಒದಗಿಸುತ್ತದೆ. ಬೆಳೆಯ ಗುಣಲಕ್ಷಣಗಳನ್ನು ನಿಖರವಾಗಿ ಅಳೆಯಲು, ಬೆಳೆಯ ಆರೋಗ್ಯವನ್ನು ನಿರ್ಣಯಿಸಲು ಮತ್ತು ಕೃಷಿ ಇನ್‌ಪುಟ್‌ಗಳನ್ನು ಸರಿಯಾದ ಮಟ್ಟದಲ್ಲಿಡಲು ಅವನ್ನು ಬಳಸಬಹುದಾಗಿದೆ. ನಿರ್ಮಾಣ ಮತ್ತು ಗಣಿಗಾರಿಕೆ ಉದ್ಯಮಗಳಿಗಾಗಿ, ಕಾರ್ಯಪ್ರಗತಿಯ ಮೇಲ್ವಿಚಾರಣೆಗಾಗಿ ಮತ್ತು ನಿಖರವಾದ ದಾಸ್ತಾನು ದಾಖಲೆಗಳನ್ನು ನಿರ್ವಹಿಸುವುದಕ್ಕಾಗಿ ನಿಖರವಾದ ಸೈಟ್ ಸಮೀಕ್ಷೆಗಳನ್ನು ರಚಿಸಲು ಸ್ಕೈಡೆಕ್ ಡ್ರೋನ್-ಆಧಾರಿತ ವೈಮಾನಿಕ ಡೇಟಾವನ್ನು ಬಳಸುತ್ತದೆ.

ತೈಲ ಮತ್ತು ಅನಿಲ, ಟೆಲಿಕಾಂ, ಹಾಗೂ ವಿದ್ಯುತ್ ಮತ್ತು ಉಪಯುಕ್ತತೆಗಳಂತಹ ಮಹತ್ವದ ಮೂಲಸೌಕರ್ಯ ಕ್ಷೇತ್ರಗಳಿಗಾಗಿ, ಪ್ರಿವೆಂಟಿವ್ ನಿರ್ವಹಣೆ, ಅಪಾಯಗಳ ಗುರುತಿಸುವಿಕೆ ಮತ್ತು ಬದಲಾವಣೆಗಳನ್ನು ದಾಖಲೀಕರಣಕ್ಕಾಗಿ ಸ್ವತ್ತುಗಳನ್ನು ಡಿಜಿಟೈಸ್ ಮಾಡಲು ಮತ್ತು ಪರಿಶೀಲಿಸಲು ಸ್ಕೈಡೆಕ್ ಡ್ರೋನ್‌ಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ವಿವಿಧ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸ್ವಾಮಿತ್ವ ಯೋಜನೆ, ಸ್ಮಾರ್ಟ್ ಸಿಟಿಗಳು, ಅಗ್ರಿಸ್ಟಾಕ್ ಮತ್ತಿತರ ಅಭಿವೃದ್ಧಿ ಯೋಜನೆಗಳಂತಹ ಉಪಕ್ರಮಗಳಲ್ಲಿ ಡ್ರೋನ್‌ ಫ್ಲೀಟ್‌ಗಳ ಯಶಸ್ವಿ ಅನುಷ್ಠಾನದಲ್ಲಿಯೂ ಸ್ಕೈಡೆಕ್ ನೆರವಾಗಬಲ್ಲದು.

Best Mobiles in India

English summary
Asteria launches cloud-based drone operation platform Skydeck.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X