ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ ಅನಾವರಣ! ವಿಶೇಷತೆ ಏನು?

|

ಟೆಕ್‌ ಮಾರುಕಟ್ಟೆಯಲ್ಲಿ ಆಸುಸ್‌ ಕಂಪೆನಿ ತನ್ನ ಗೇಮಿಂಗ್‌ ಡಿವೈಸ್‌ಗಳಿಗೆ ಹೆಸರುವಾಸಿಯಾಗಿದೆ. ಗೇಮಿಂಗ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಕೂಡ ಮಾರುಕಟ್ಟೆಯಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ ಅನ್ನು ಅನಾವರಣಗೊಳಿಸಿದೆ. ಇನ್ನು ಈ ಗೇಮಿಂಗ್‌ ಮಾನಿಟರ್‌ ಅನ್ನು ಎನ್ವಿಡಿಯಾ ಜಿ-ಸಿಂಕ್ ಡಿಸ್‌ಪ್ಲೇ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸಲಾಗಿದೆ.

 ಆಸುಸ್‌ ROG ಸ್ವಿಫ್ಟ್ 500Hz

ಹೌದು, ಆಸುಸ್‌ ಕಂಪೆನಿ ಹೊಸ ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಗೇಮಿಂಗ್‌ ಮಾನಿಟರ್‌ 500Hz ರಿಫ್ರೆಶ್ ರೇಟ್‌ ಅನ್ನು ನೀಡುತ್ತದೆ. ಇದು ಸಿಸ್ಟಮ್ ಲೇಟೆನ್ಸಿಯನ್ನು ಕಡಿಮೆ ಮಾಡಲು ಎನ್‌ವಿಡಿಯಾ ರಿಫ್ಲೆಕ್ಸ್ ವಿಶ್ಲೇಷಕವನ್ನು ಹೊಂದಿದೆ. ಇದಲ್ಲದೆ, ಎಸ್ಪೋರ್ಟ್ಸ್ ಉತ್ಸಾಹಿಗಳಿಗೆ, ಇದು ಎಸ್ಪೋರ್ಟ್ಸ್ ವೈಬ್ರೆನ್ಸ್ ಮೋಡ್ ಅನ್ನು ಕೂಡ ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಗೇಮಿಂಗ್‌ ಮಾನಿಟರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್

ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ 1,920 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 24.1 ಇಂಚಿನ ಫುಲ್‌ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 16:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೂರು-ಬದಿಯ ಫ್ರೇಮ್‌ಲೆಸ್ ಡಿಸ್ಪ್ಲೇ ಆಗಿದ್ದು, 500Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇನ್ನು ಈ ಗೇಮಿಂಗ್‌ ಮಾನಿಟರ್‌ನಲ್ಲಿ ಆಸುಸ್‌ ಕಂಪೆನಿ Esports-TN ಪ್ಯಾನೆಲ್ (E-TN) ತಂತ್ರಜ್ಞಾನವನ್ನು ಪ್ಯಾಕ್ ಮಾಡಿದೆ. ಇದು ಪ್ರಮಾಣಿತ TN LCD ಡಿಸ್‌ಪ್ಲೇಗಳಿಗಿಂತ 60% ಕಡಿಮೆ ರೆಸ್ಪಾನ್ಸ್‌ ಟೈಂ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಮಾನಿಟರ್

ಇನ್ನು ಈ ಹೊಸ ಗೇಮಿಂಗ್ ಮಾನಿಟರ್ ಎನ್ವಿಡಿಯಾದ ಜಿ-ಸಿಂಕ್ ವೇರಿಯಬಲ್ ರಿಫ್ರೆಶ್ ರೇಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಎನ್ವಿಡಿಯಾದ ರಿಫ್ಲೆಕ್ಸ್ ವಿಶ್ಲೇಷಕವನ್ನು ಹೊಂದಿದೆ.ಹಾಗೆಯೇ ಹೆಚ್ಚಿನ ರೆಸ್ಪಾನ್ಸ್‌ ಫ್ರೇಮ್ ವಿತರಣೆಯನ್ನು ಅತ್ಯುತ್ತಮವಾಗಿಸಲು ಗೇಮ್‌ಗಳನ್ನು ಅನುಮತಿಸುತ್ತದೆ. ಇದಲ್ಲದೆ, ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ ವಿಶೇಷವಾಗಿ ಸ್ಪೋರ್ಟ್ಸ್ ಗೇಮಿಂಗ್‌ಗಾಗಿ ಟ್ಯೂನ್ ಮಾಡಲಾದ ಎಸ್‌ಪೋರ್ಟ್ಸ್ ವೈಬ್ರೆನ್ಸ್ ಮೋಡ್‌ ಅನ್ನು ಕೂಡ ಒಳಗೊಂಡಿದೆ.

ಇನ್ನು ಆಸುಸ್‌ ROG ಸ್ವಿಫ್ಟ್ 500Hz ಗೇಮಿಂಗ್ ಮಾನಿಟರ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡಿಸ್‌ಪ್ಲೇ ಪೋರ್ಟ್ 1.4, HDMI 2.0 ಪೋರ್ಟ್, ಎರಡು USB 3.2 ಪೋರ್ಟ್‌ಗಳು ಮತ್ತು ಇಯರ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಸದ್ಯ ಈ ಹೊಸ ಗೇಮಿಂಗ್‌ ಮಾನಿಟರ್‌ ಬೆಲೆ ಹಾಗೂ ಲಭ್ಯತೆಯ ವಿವರ ಹಾಗೂ ಹೆಚ್ಚಿನ ವಿಶೇಷತೆಗಳ ಬಗ್ಗೆ ಇನ್ನು ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಆಸುಸ್‌

ಇನ್ನು ಆಸುಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಆಸುಸ್‌ 8z ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದು 5.9 ಇಂಚಿನ ಫುಲ್‌ HD+ ಸ್ಯಾಮ್‌ಸಂಗ್‌ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ IMX686 ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೋನಿ IMX363 ಸೆನ್ಸಾರ್ ಜೊತೆಗೆ f/2.2 ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇದಲ್ಲದೆ 12 ಮೆಗಾ ಪಿಕ್ಸೆಲ್ ಸೋನಿ IMX663 ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ ಫೇಸ್-ಡಿಟೆಕ್ಷನ್ ಆಟೋಫೋಕಸ್ ಲೆನ್ಸ್ ಹೊಂದಿದೆ.ಆಸುಸ್‌ 8z ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ, ಇದು 30W ವೇಗದ ಚಾರ್ಜಿಂಗ್ ಮತ್ತು ಕ್ವಿಕ್ ಚಾರ್ಜ್ 4.0 ಮತ್ತು ಪವರ್ ಡೆಲಿವರಿ ಬೆಂಬಲವನ್ನು ಬೆಂಬಲಿಸುತ್ತದೆ.

Best Mobiles in India

Read more about:
English summary
Asus ROG Swift 500Hz Gaming Monitor With Esports Vibrance Mode Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X