India

ಆಸುಸ್‌ ROG ಜೆಫೈರಸ್ M16 ಲ್ಯಾಪ್‌ಟಾಪ್‌ ಲಾಂಚ್‌! ವಿಶೇಷತೆ ಏನು?

|

ಆಸುಸ್‌ ROG ಕಂಪೆನಿ ಭಾರತದಲ್ಲಿ ಜನಪ್ರಿಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ಆಕರ್ಷಕ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಜೆಫೈರಸ್ M16 ಅನ್ನು ಬಿಡುಗಡೆ ಮಾಡಿದೆ. ಇದು ಗೇಮಿಂಗ್ ಲ್ಯಾಪ್‌ಟಾಪ್‌ ಆಗಿದ್ದು, 12 ನೇ ತಲೆಮಾರಿನ ಇಂಟೆಲ್‌ ಕೋರ್‌ i9-12900H CPU ಪ್ರೊಸೆಸರ್‌ ಹೊಂದಿದೆ. ಜೊತೆಗೆ ಎನ್‌ವಿಡಿಯಾ ಜಿಪೋರ್ಸ್‌ RTX 3080Ti ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಆಸುಸ್‌

ಹೌದು, ಆಸುಸ್‌ ಕಂಪೆನಿ ತನ್ನ ಎಂ ಸರಣಿಯಲ್ಲಿ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಜೆಫೈರಸ್ M16 ಅನ್ನು ಬಿಡುಗಡೆ ಮಾಡಿದೆ. ಇದು 32GBಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 48GB ಯ ಡ್ಯುಯಲ್-ಚಾನೆಲ್ DDR5 4800MHz ಮೆಮೊರಿಗೆ ಅಪ್‌ಗ್ರೇಡ್ ಕೂಡ ಮಾಡಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 16-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 500 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್

ಇನ್ನು ಈ ಲ್ಯಾಪ್‌ಟಾಪ್ 16 ಇಂಚಿನ ಡಿಸ್‌ಪ್ಲೇ ಹೊಂದಿದೆ. ಗೇಮಿಂಗ್ ಅನುಭವಕ್ಕಾಗಿ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್‌ನೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇ 94% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದು QHD ರೆಸಲ್ಯೂಶನ್ ಮತ್ತು 165Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಹೊಸ ಲ್ಯಾಪ್‌ಟಾಪ್ ROG ನೆಬ್ಯುಲಾ ಡಿಸ್‌ಪ್ಲೇ ಜೊತೆಗೆ ಪಾನ್‌ಟೋನ್‌ ಮೌಲ್ಯೀಕರಣ, 100% DCI-P3, 500 ನಿಟ್ಸ್‌ ಬ್ರೈಟ್‌ನೆಸ್‌ ಜೊತೆಗೆ ಡಾಲ್ಬಿ ವಿಷನ್‌ಗೆ ಬೆಂಬಲವನ್ನು ನೀಡಲಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ MUX ಸ್ವಿಚ್ ಬಳಕೆದಾರರಿಗೆ ಕಾರ್ಯಕ್ಷಮತೆ ಅಥವಾ ಬ್ಯಾಟರಿ ಅವಧಿಯನ್ನು ಗರಿಷ್ಠಗೊಳಿಸಲು GPU ಗಳ ನಡುವೆ ಬದಲಾಯಿಸಲು ಅನುಮತಿಸುತ್ತದೆ. ಇದಲ್ಲದೆ ಬಳಕೆದಾರರು ನೇರ GPU ಮೋಡ್‌ಗೆ ಬದಲಾಯಿಸುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ಲೆಟೆನ್ಸಿಯನ್ನು ಕಡಿಮೆ ಮಾಡಲಿದೆ. ಹಾಗೆಯೇ ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಯನ್ನು ಸರಾಸರಿ 5-10 ಪ್ರತಿಶತದಷ್ಟು ಹೆಚ್ಚಿಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ನ 90Wh ಬ್ಯಾಟರಿಯನ್ನು ಹೊಂದಿದ್ದು, 10 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ. ಇದು ಪೋರ್ಟಬಲ್ ಪವರ್ ಪ್ಯಾಕ್‌ಗಳಿಂದ ಚಾರ್ಜ್ ಮಾಡುವ ಆಯ್ಕೆಯೊಂದಿಗೆ ಟೈಪ್-ಸಿ ಪವರ್ ಡೆಲಿವರಿ 3.2 ಜೆನ್ 2 ಜೊತೆಗೆ ಥಂಡರ್‌ಬೋಲ್ಟ್ 4 ಅನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಆಸುಸ್‌ ROG ಜೆಫೈರಸ್ M16 ಲ್ಯಾಪ್‌ಟಾಪ್‌ ಇಂದಿನಿಂದ ಮಾರಾಟವಾಗಲಿದೆ. ASUS ಇ-ಶಾಪ್, Amazon ಮತ್ತು Flipkart ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇದು ವಿಜಯ್ ಸೇಲ್ಸ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಹೆಚ್ಚಿನವು ಸೇರಿದಂತೆ ಆಫ್‌ಲೈನ್ ಸ್ಟೋರ್‌ಗಳ ಮೂಲಕವೂ ಮಾರಾಟವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ 1,79,990ರೂ.ಗಳ ಆರಂಭಿಕ ಬೆಲೆಯೊಂದಿಗೆ ಬರುತ್ತದೆ. ಆದರೆ ಇದು RTX 3080Ti ಜೊತೆಗೆ ಉನ್ನತ-ವಿಶೇಷ ಆವೃತ್ತಿಗೆ 3,31,990ರೂ.ಬೆಲೆ ಪಡೆದುಕೊಂಡಿದೆ.

Most Read Articles
Best Mobiles in India

English summary
Asus ROG Zephyrus M16 launched with 165Hz refresh rate

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X