ಆಸುಸ್‌ನಿಂದ ಫೋಲ್ಡೆಬಲ್‌ OLED ಲ್ಯಾಪ್‌ಟಾಪ್‌ ಅನಾವರಣ: ಫೀಚರ್ಸ್‌ ಏನು?

|

ಸ್ಮಾರ್ಟ್‌ಗ್ಯಾಜೆಟ್‌ ವಿಭಾಗದಲ್ಲಿ ಇತ್ತೀಚೆಗೆ ಫೋಲ್ಡೆಬಲ್‌ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿ ಹೆಚ್ಚಿನ ಜನಮನ್ನಣೆ ಪಡೆದಿವೆ. ಇದೇ ಸಾಲಿನಲ್ಲಿ ಈಗ ಲ್ಯಾಪ್‌ಟಾಪ್‌ನಲ್ಲೂ ಫೋಲ್ಡೆಬಲ್‌ ಫೀಚರ್ಸ್ ನೀಡಲಾಗಿದ್ದು, ಮೊದಲ ಬಾರಿಗೆ ಅದರಲ್ಲೂ ವಿಶ್ವದಲ್ಲೇ ಮೊದಲ ಮಡಿಸಬಹುದಾದ ಲ್ಯಾಪ್‌ಟಾಪ್ ಅನ್ನು ಆಸುಸ್‌ ತಯಾರು ಮಾಡಿದೆ. ಈ ಲ್ಯಾಪ್‌ಟಾಪ್‌ ಕೀಬೋರ್ಡ್ ಮತ್ತು ಟಚ್‌ಪ್ಯಾಡ್ ಫೀಚರ್ಸ್‌ ಪಡೆದಿದೆ.

ಫೋಲ್ಡೆಬಲ್‌

ಹೌದು, ಫೋಲ್ಡೆಬಲ್‌ (ಮಡಿಸಬಹುದಾದ) ಆಯ್ಕೆ ಇರುವ ಲ್ಯಾಪ್‌ಟಾಪ್‌ ಆಸುಸ್ ಜೆನ್ ಬುಕ್‌ 17 ಫೋಲ್ಡ್ OLED ಲ್ಯಾಪ್‌ಟಾಪ್ (Asus Zenbook 17 Fold OLED laptop) ಬಗ್ಗೆ ಘೋಷಣೆ ಮಾಡಲಾಗಿದ್ದು, ಮುಂಗಡ ಬುಕಿಂಗ್‌ ಬಗ್ಗೆ ಮಾಹಿತಿ ನೀಡಿದೆ. ಈ ಲ್ಯಾಪ್‌ಟಾಪ್ 17.3 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಈ ಟಚ್‌ಸ್ಕ್ರೀನ್ ಡಿಸ್‌ಪ್ಲೇ 70% ಕಡಿಮೆ ಹಾನಿಕಾರಕ ನೀಲಿ ಬೆಳಕನ್ನು ನೀಡಲಿದ್ದು, ಕಣ್ಣಿನ ರಕ್ಷಣೆಗೆ ಈ ಮೂಲಕ ಅದ್ಯತೆ ನೀಡಲಾಗಿದೆ. ಹಾಗಿದ್ರೆ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ? ಬೆಲೆ ಎಷ್ಟು?ಫೀಚರ್ಸ್‌ ಏನೇನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಲ್ಯಾಪ್‌ಟಾಪ್‌ 17.3 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಇದು 2560x1920 ಪಿಕ್ಸೆಲ್ ರೆಸಲ್ಯೂಶನ್‌ ಪಡೆದಿದೆ. ಅದರಲ್ಲೂ ಪ್ರಮುಖವಾಗಿ ಈ ಲ್ಯಾಪ್‌ಟಾಪ್‌ ಕಣ್ಣಿನ ರಕ್ಷಣೆಯನ್ನು ಗುರಿಯಾಗಿಸಿಕೊಂಡು 70% ಕಡಿಮೆ ಹಾನಿಕಾರಕ ನೀಲಿ ಬೆಳಕನ್ನು ನೀಡಲಿದೆ.

ಪ್ರೊಸೆಸರ್‌ ಮಾಹಿತಿ

ಪ್ರೊಸೆಸರ್‌ ಮಾಹಿತಿ

ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i7 ಪ್ರೊಸೆಸರ್ ಶಕ್ತಿ ಪಡೆದಿದ್ದು, ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ. ಇದರ ಜೊತೆಗೆ 16GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಪಡೆದಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಲ್ಯಾಪ್‌ಟಾಪ್‌ನಲ್ಲಿ 75WH ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಆಗಿದ್ದು, ಇದು 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಡಿವೈಸ್‌ 1.4 ಎಂಎಂ ಕೀ ಪ್ರಯಾಣದೊಂದಿಗೆ ಮೃದುವಾದ ಕೀಬೋರ್ಡ್ ಅನ್ನು ನೀಡುತ್ತದೆ. ಹಾಗೆಯೇ ವಿಂಡೋಸ್ ಹಲೋ ಅನ್ನು ಬೆಂಬಲಿಸುವುದರ ಜೊತೆಗೆ 5 ಎಂಪಿ ಕ್ಯಾಮೆರಾ ಆಯ್ಕೆ ಪಡೆದಿದೆ. ಕನೆಕ್ಟಿವಿಟಿ ವಿಷಯದಲ್ಲಿ ಇದು ವಿವಿಧ ಆಯ್ಕೆಗಳನ್ನು ಪಡೆದುಕೊಂಡಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಬ್ಲೂಟೂತ್ ಕೀಬೋರ್ಡ್ ಮತ್ತು ಟಚ್‌ಪ್ಯಾಡ್ ಫೀಚರ್ಸ್‌ ಪಡೆದಿದ್ದು, ಫೋಲ್ಡ್‌ಬಲ್‌ ಆಯ್ಕೆ ಇರುವುದರಿಂದ ಇದನ್ನು ಬಳಕೆದಾರರು ಪಿಸಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆನ್-ಸ್ಕ್ರೀನ್ ಕೀಬೋರ್ಡ್, ಬುಕ್ ರೀತಿ ಸೇರಿದಂತೆ ಅನೇಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮುಂಗಡ ಬುಕಿಂಗ್‌ ಆಫರ್

ಮುಂಗಡ ಬುಕಿಂಗ್‌ ಆಫರ್

ಆಸುಸ್ ಕಂಪೆನಿ ವಿಶ್ವದಲ್ಲಿಯೇ ಮೊದಲ ಫೋಲ್ಡೆಬಲ್‌ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲಾಗಿದೆ. ಇದನ್ನು ಖರೀದಿ ಮಾಡಲು ಮುಂಗಡ ಬುಕಿಂಗ್‌ ಆಯ್ಕೆಯನ್ನು ನೀಡಲಾಗಿದ್ದು, ಯಾರು ಮುಂಗಡ ಬುಕಿಂಗ್‌ ಮಾಡಿರುತ್ತಾರೋ ಅವರು 2,84,290ರೂ. ಗಳಲ್ಲಿ ಇದನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇನ್ನಷ್ಟು ಆಫರ್‌ಗಳನ್ನೂ ಸಹ ನೀಡಲಾಗಿದ್ದು, 5,000ರೂ.ಗಳ ಕ್ಯಾಶ್‌ಬ್ಯಾಕ್ ಹಾಗೂ 40,700 ರೂ.ಗಳ ವರೆಗೆ ವಿನಿಮಯ ಕೊಡುಗೆ ಇದಕ್ಕೆ ಅನ್ವಯ ಆಗಲಿದೆ.

ಮುಂಗಡ ಬುಕಿಂಗ್‌

ಇದರ ಜೊತೆಗೆ ಮುಂಗಡ ಬುಕಿಂಗ್‌ ಮಾಡುವ ಗ್ರಾಹಕರಿಗೆ ಆಸುಸ್ 32,100ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು ನೀಡಲಿದೆ. ಇದಿಷ್ಟೇ ಅಲ್ಲದೆ ಲ್ಯಾಪ್‌ಟಾಪ್‌ ಹೆಚ್ಚಿನ 500GB ಇಂಟರ್ನಲ್‌ ಸ್ಟೋರೇಜ್‌ ಹಾಗೂ ವಾರಂಟಿ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ನ ಮೂಲ ದರ 3,29,990ರೂ. ಗಳಾಗಿದ್ದು, ನವೆಂಬರ್ 10 ರಿಂದ ಭಾರತದಲ್ಲಿ ಬುಕಿಂಗ್‌ ಆಯ್ಕೆ ಆರಂಭ ಆಗಲಿದೆ.

Best Mobiles in India

English summary
Smartphones with Foldable Selection have been launched as a lot of popularity. The Foldable laptop will now be launched from Asus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X