6 ಇಂಚಿಗಿಂತ ಕಡಿಮೆ ಡಿಸ್‌ಪ್ಲೇಯ ಈ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ಗಮನಿಸಿ!

|

ಬಬಹುನಿರೀಕ್ಷಿತ ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ (Asus Zenfone 9) ಅಧಿಕೃತವಾಗಿ ಜಾಗತಿಕವಾಗಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕಾಂಪ್ಯಾಕ್ಟ್‌ ಫ್ಲ್ಯಾಗ್‌ಶಿಪ್ ಮಾದರಿಯನ್ನು ಹೊಂದಿದ್ದು, ಕೆಲವೊಂದು ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಫೊನ್ ಸ್ನಾಪ್‌ಡ್ರಾಗನ್ 8+ ಜೆನ್‌ 1 ಚಿಪ್‌ಸೆಟ್ ಪ್ರೊಸೆಸರ್‌ ಜೊತೆಗೆ 16GB RAM ಸಾಮರ್ಥ್ಯದ ವೇರಿಯಂಟ್‌ ಆಯ್ಕೆ ಒಳಗೊಂಡಿರುವುದು ಆಕರ್ಷಕ ಎನಿಸಿದೆ.

ಸ್ಟೋರೇಜ್‌

ಹೌದು, ಆಸುಸ್‌ ಸಂಸ್ಥೆಯು ನೂತನವಾಗಿ 'ಆಸುಸ್‌ ಜೆನ್‌ಫೋನ್‌ 9' ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಫೋನ್ ಮೂರು ವೇರಿಯಂಟ್‌ ಮಾದರಿಗಳ ಆಯ್ಕೆ ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB/128 GB, 8GB/256 GB ಮತ್ತು 16GB/256 GB ಸ್ಟೋರೇಜ್‌ ಆಗಿವೆ. ಹಾಗೆಯೇ ಈ ಫೋನ್ ಮಿಡ್‌ನೈಟ್ ಬ್ಲ್ಯಾಕ್, ಸ್ಟಾರಿ ಬ್ಲೂ, ಸನ್‌ಸೆಟ್ ರೆಡ್ ಮತ್ತು ಮೂನ್‌ಲೈಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಕ್ಯಾಮೆರಾ

6 ಇಂಚಿಗಿಂತ ಕಡಿಮೆ ಡಿಸ್‌ಪ್ಲೇ ರಚನೆಯನ್ನು ಹೊಂದಿರುವ ಈ ಕಂಪ್ಯಾಕ್ಟ್‌ ಸ್ಮಾರ್ಟ್‌ಫೋನ್‌ ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಹಾಗೆಯೇ ಆಕರ್ಷಕ ಡಿಸೈನ್‌ ಹಾಗೂ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗಾದರೇ ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನಿನ ಕೆಲವು ಫೀಚರ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ರಚನೆ ಮತ್ತು ಡಿಸೈನ್‌

ರಚನೆ ಮತ್ತು ಡಿಸೈನ್‌

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ ಲೋಹದ ಚೌಕಟ್ಟು, ಫ್ಲಾಟ್ ಬ್ಯಾಕ್ ಮತ್ತು ಅಂಚುಗಳನ್ನು ಹೊಂದಿದ್ದು, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಸಂವೇದಕವನ್ನು ಪವರ್ ಬಟನ್‌ನಲ್ಲಿಯೇ ಸಂಯೋಜಿಸಲಾಗಿದೆ.

ಡಿಸ್‌ಪ್ಲೇ ರೆಸಲ್ಯೂಶನ್

ಡಿಸ್‌ಪ್ಲೇ ರೆಸಲ್ಯೂಶನ್

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ 5.9 ಇಂಚಿನ SAMOLED ಡಿಸ್‌ಪ್ಲೇ ಜೊತೆಗೆ FHD+ ರೆಸಲ್ಯೂಶನ್ ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ದರಕ್ಕೆ ಬೆಂಬಲ ಪಡೆದಿದೆ. ಈ ಫೋನಿನ ಡಿಸ್‌ಪ್ಲೇ ಬೆಂಬಲಿಸುವ ಗರಿಷ್ಠ ಹೊಳಪು 1100nits ಆಗಿದೆ.

ಪ್ರೊಸೆಸರ್‌ ಪವರ್

ಪ್ರೊಸೆಸರ್‌ ಪವರ್

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ TSMC ಯ 4nm ನೋಡ್‌ನಲ್ಲಿ ನಿರ್ಮಿಸಲಾದ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8+ ಜೆನ್‌ 1 SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್ ಇದೆ. ಜೊತೆಗೆ 8GB/128GB, 8GB/256GB ಮತ್ತು 16GB/256GB ಸ್ಟೋರೇಜ್‌ ಆಂತರೀಕ ಸಂಗ್ರಹದ ಆಯ್ಕೆಗಳಿವೆ.

ಪವರ್ ಬಟನ್

ಪವರ್ ಬಟನ್

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನಿನ ಪವರ್ ಬಟನ್ ಸುತ್ತಲೂ ಟಚ್‌ಪ್ಯಾಡ್ ಇದೆ. ಇದರೊಂದಿಗೆ ನೋಟಿಫಿಕೇಶನ್‌ ಡ್ರಾಯರ್, ಕ್ಯಾಮೆರಾ, ಅಪ್ಲಿಕೇಶನ್ ಶಾರ್ಟ್‌ಕಟ್‌ಗಳು ಮತ್ತು ಮೀಡಿಯಾ ಕಂಟ್ರೋಲ್‌ ಸೇರಿದಂತೆ ಅನೇಕ ವಿಷಯಗಳನ್ನು ಮಾಡಬಹುದು.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ 4300 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ 30W ವೇಗದ ಚಾರ್ಜಿಂಗ್ ಸಪೋರ್ಟ್‌ ಸಹ ಇದೆ. ಇನ್ನು ಈ ಫೋನ್ IP68 ಧೂಳು ಮತ್ತು ನೀರಿನ ನಿರೋಧಕವಾಗಿದೆ.

ಕ್ಯಾಮೆರಾ ಸ್ಪೆಷಲ್‌

ಕ್ಯಾಮೆರಾ ಸ್ಪೆಷಲ್‌

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ 50 ಮೆಗಾ ಪಿಕ್ಸಲ್‌ IMX766 ಪ್ರಾಥಮಿಕ ಸೆನ್ಸಾರ್‌ ಪಡೆದಿದೆ. 6 ಆಕ್ಸಿಸ್ Gimbal ಸ್ಥಿರೀಕರಣ ಮತ್ತು EIS ಜೊತೆಗೆ ಡ್ಯುಯಲ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಹಿಂಭಾಗದಲ್ಲಿ 12 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್ ಕೋನ ಸೆನ್ಸಾರ್‌ ಅನ್ನು ಜೋಡಿಸಲಾಗಿದೆ. ಸೆಲ್ಫಿಗಳಿಗಾಗಿ 12 ಮೆಗಾ ಪಿಕ್ಸಲ್‌ ಸೋನಿ IMX663 ಸೆನ್ಸಾರ್‌ ನೀಡಲಾಗಿದೆ. ಮುಖ್ಯ ಕ್ಯಾಮೆರಾದೊಂದಿಗೆ 8K 24fps ವರೆಗೆ ರೆಕಾರ್ಡ್ ಮಾಡಬಹುದು.

ಕಲರ್‌ ಆಯ್ಕೆ

ಕಲರ್‌ ಆಯ್ಕೆ

ಆಸುಸ್‌ ಜೆನ್‌ಫೋನ್‌ 9 ಸ್ಮಾರ್ಟ್‌ಫೋನ್‌ 8GB/128GB ಸ್ಟೋರೇಜ್‌ನ ಬೇಸ್‌ ವೇರಿಯಂಟ್‌ ಬೆಲೆಯು EUR 799 (ಭಾರತದಲ್ಲಿ ಅಂದಾಜು 64,700ರೂ.) ಆಗಿದೆ. ಇನ್ನು ಈ ಫೋನ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಅವು ಕ್ರಮವಾಗಿ ಬಿಳಿ, ಕಪ್ಪು, ನೀಲಿ ಮತ್ತು ಕೆಂಪು ಆಗಿವೆ.

ಆಸುಸ್‌ 8z ಸ್ಮಾರ್ಟ್‌ಫೋನ್‌ ಫೀಚರ್ಸ್‌

ಆಸುಸ್‌ 8z ಸ್ಮಾರ್ಟ್‌ಫೋನ್‌ ಫೀಚರ್ಸ್‌

ಆಸುಸ್‌ ಸಂಸ್ಥೆಯು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿರುವ ಆಸುಸ್‌ 8z ಸ್ಮಾರ್ಟ್‌ಫೋನ್‌ ಆಕರ್ಷಕ ಎನಿಸಿದೆ. ಈ ಫೋನ್ 5.9 ಇಂಚಿನ ಫುಲ್‌ HD+ ಸ್ಯಾಮ್‌ಸಂಗ್‌ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್‌

ಆಸುಸ್‌ 8z ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ZenUI 8 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ.

ಡ್ಯುಯಲ್

ಆಸುಸ್‌ 8z ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ IMX686 ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೋನಿ IMX363 ಸೆನ್ಸಾರ್ ಜೊತೆಗೆ f/2.2 ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇದಲ್ಲದೆ 12 ಮೆಗಾ ಪಿಕ್ಸೆಲ್ ಸೋನಿ IMX663 ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಡ್ಯುಯಲ್ ಫೇಸ್-ಡಿಟೆಕ್ಷನ್ ಆಟೋಫೋಕಸ್ ಲೆನ್ಸ್ ಹೊಂದಿದೆ. ಅಲ್ಲದೇ ಆಸುಸ್‌ 8z ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ, ಇದು 30W ವೇಗದ ಚಾರ್ಜಿಂಗ್ ಮತ್ತು ಕ್ವಿಕ್ ಚಾರ್ಜ್ 4.0 ಮತ್ತು ಪವರ್ ಡೆಲಿವರಿ ಬೆಂಬಲವನ್ನು ಬೆಂಬಲಿಸುತ್ತದೆ.

Best Mobiles in India

English summary
Asus Zenfone 9: Let’s See Few Attractive Features of the Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X