ಆಸೂಸ್‌ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಫೋನ್ ಬೆಲೆ ಇಳಿಕೆ!

|

ಭಾರತೀಯ ಟೆಕ್‌ ಮಾರುಕಟ್ಟೆಯಲ್ಲಿ ಅತ್ಯುತ್ತಮ ಹೆಸರುಗಳಿಸಿರುವ ಆಸೂಸ್‌ ಕಂಪನಿಯು ಇದೀಗ ಸುದ್ದಿಗೆ ಬಂದಿದೆ. ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಂದ, ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳವರೆಗೂ ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಗಳಿಸಿರುವ ಆಸೂಸ್‌ ಈಗ ಮತ್ತೆ ಗ್ರಾಹಕರಿಗೆ ಖುಷಿ ಸಮಾಚಾರವನ್ನು ತಿಳಿಸಿದೆ. ಅದೆನೆಂದರೇ ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್‌ ಎಂ1 ಬೆಲೆಯಲ್ಲಿ ಇಳಿಕೆ ಮಾಡಿದೆ.

ಆಸೂಸ್‌ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಫೋನ್ ಬೆಲೆ ಇಳಿಕೆ!

ಹೌದು, ಆಸೂಸ್‌ ಕಂಪನಿಯ ಜನಪ್ರಿಯ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ 7,999ರೂ.ಗಳಿಗೆ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ. ಆರಂಭದಲ್ಲಿ 10,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆಯಾಗಿದ್ದ ಈ ಫೋನ್ ಬೆಲೆ ಕಡಿತದಿಂದ 8,499ರೂ.ಗಳಿಗೆ ಲಭ್ಯವಿತ್ತು. ಆದ್ರೆ ಇದೀಗ ಮತ್ತೆ 500ರೂ. ಕಡಿತವಾಗಿದ್ದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ದೊರೆಯಲಿದೆ.

ಆಸೂಸ್‌ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಫೋನ್ ಬೆಲೆ ಇಳಿಕೆ!

ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸ್ನ್ಯಾಪ್‌ಡ್ರಾಗನ್ 636 SoC ಪ್ರೊಸೆಸರ್ ಶಕ್ತಿಯನ್ನು ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಒಳಗೊಂಡಿರುವ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗಾದರೇ ಆಸೂಸ್‌ನ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಝೆನ್‌ಫೋನ್ ಮ್ಯಾಕ್ಸ್‌ ಎಂ1 ಸ್ಮಾರ್ಟ್‌ಫೋನ್‌ 2160×1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.99 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಡಿಸ್‌ಪ್ಲೇಯ 159.00 x 76.00 x 8.64ಎಂಎಂ ನಷ್ಟು ಸುತ್ತಳತೆಯನ್ನು ಆಕಾರವನ್ನು ಪಡೆದುಕೊಂಡಿದ್ದು, ಹಾಗೆಯೇ ವಿಶಾಲವಾದ ಡಿಸ್‌ಪ್ಲೇಯ ಅನುಪಾತವು 18:9ರಷ್ಟಾಗಿದೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 636 SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಅಪ್‌ಡೇಟ್‌ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಪಡೆದಿದೆ. 3GB ಮತ್ತು 4GB RAM ಸಾಮರ್ಥ್ಯ ದೊಂದಿಗೆ 32GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಸಹ ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಿಕೊಳ್ಳಬಹುದಾಗಿದೆ.

ಓದಿರಿ :  ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 5ಎಂಪಿ ಕ್ಯಾಮೆರಾ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸೆಲ್ಫಿಗಾಗಿ 8ಎಂಪಿ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, ಜೊತೆಗೆ ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಸೌಲಭ್ಯವನ್ನು ಒದಗಿಸಲಾಗಿದೆ.

ಬ್ಯಾಟರಿ ಮತ್ತು ಕನೆಕ್ಟಿವಿಟಿ

ಬ್ಯಾಟರಿ ಮತ್ತು ಕನೆಕ್ಟಿವಿಟಿ

ಝೆನ್‌ಫೋನ್ ಮ್ಯಾಕ್ಸ್‌ ಎಂ1 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಜೊತೆಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯ ಪಡೆದುಕೊಂಡಿದೆ. ಫೇಸ್‌ಅನ್‌ಲಾಕ್ ಮತ್ತು ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಗಳೊಂದಿಗೆ ಬ್ಲೂಟೂತ್, ವೈಫೈ, ಕನೆಕ್ಟಿವಿಟಿ ಮತ್ತು ಜಿಪಿಎಸ್‌ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸೂಸ್‌ ಕಂಪನಿಯ ಜನಪ್ರಿಯ ಝೆನ್‌ಫೋನ್ ಮ್ಯಾಕ್ಸ್‌ ಎಂ1 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆ ಆಗಿದ್ದು, 3GB ಮತ್ತು 32GB ವೇರಿಯಂಟ್ ಬೆಲೆಯು ಇದೀಗ 7,999ರೂ.ಗಳಾಗಿದೆ. ಹಾಗೆಯೇ 4GB ಮತ್ತು 32GB ವೇರಿಯಂಟ್ ಬೆಲೆಯು 8,999ರೂ.ಗಳಾಗಿದ್ದು, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಓದಿರಿ : ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!ಓದಿರಿ : ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!

Best Mobiles in India

English summary
The new Asus ZenFone Max Pro M1 price is now reflecting on Flipkart.com. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X