130 ಮಿಲಿಯನ್‌ ಜಿಯೋ ಬಳಕೆದಾರರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ..!!

Written By:

ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವ 130 ಮಿಲಿಯನ್‌ಗೂ ಹೆಚ್ಚು ಮಂದಿಗೆ ಇದಂತೂ ಶಾಕಿಂಗ್ ಸುದ್ದಿ ಎನ್ನಲಾಗಿದೆ. ಜಿಯೋ ಇನ್ನ ಮುಂದೆ ಪ್ರತಿ ಮೂರು ತಿಂಗಳಿಗೆ ತನ್ನ ಟ್ಯಾರಿಫ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಈಗಾಗಲೇ ದರ ಏರಿಕೆ ಮಾಡಿರುವ ಜಿಯೋ ಮುಂದೆ ಮತ್ತೆ ದರ ಏರಿಸುವ ಸೂಚನೆಯನ್ನು ನೀಡಿದೆ.

130 ಮಿಲಿಯನ್‌ ಜಿಯೋ ಬಳಕೆದಾರರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ..!!

ಓದಿರಿ: ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್: ಬದಲಾಯಿಸಲಿದೆ ಬಜೆಟ್ ಫೋನ್ ಇತಿಹಾಸ

ಜಿಯೋ ಈ ಹಿಂದಿನಿಂದಲೂ ದರ ಏರಿಕೆಯನ್ನು ಹಂತ ಹಂತವಾಗಿ ಮಾಡಿಕೊಂಡು ಬಂದಿದೆ ಎನ್ನಲಾಗಿದೆ. ಮೊದಲು ಜಿಯೋ ಉಚಿತ ಸೇವೆಯನ್ನು ನೀಡಿತ್ತು. ನಂತರ ಅದಕ್ಕೆ ಸ್ವಲ್ಪ ನಿರ್ಭಂದ ವಿಧಿಸಿತ್ತು. ನಂತರ ಕಡಿಮೆ ಬೆಲೆಗೆ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಈಗ ಹಂತ ಹಂತವಾಗಿ ಬೆಲೆಯನ್ನು ಏರಿಕೆ ಮಾಡುವ ಪ್ರಸ್ತಾಪವನ್ನು ಇಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರತಿ ಮೂರು ತಿಂಗಳಿಗೆ ಬೆಲೆ ಏರಿಕೆ:

ಪ್ರತಿ ಮೂರು ತಿಂಗಳಿಗೆ ಬೆಲೆ ಏರಿಕೆ:

ಜಿಯೋ ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬೆಲೆಯನ್ನು ಏರಿಕೆ ಮಾಡಲಿದೆ ಎನ್ನಲಾಗಿದೆ. ಅದುವೇ 15 ರಿಂದ 20% ಏರಿಕೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಇದೇ ಮಾದರಿಯಲ್ಲಿ ಬೆಲೆಯನ್ನು ಏರಿಕೆ ಮಾಡಿಕೊಂಡು ಬಂದಿದೆ ಎನ್ನಲಾಗಿದೆ.

ಮತ್ತೆ ಜನವರಿಯಲ್ಲಿ ಏರಿಕೆ:

ಮತ್ತೆ ಜನವರಿಯಲ್ಲಿ ಏರಿಕೆ:

ಈಗಾಗಲೇ ತನ್ನ ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿದ್ಧ ಜಿಯೋ, ಮುಂದೆ ಜನವರಿಯಲ್ಲಿ ತನ್ನ ಬೆಲೆಗಳನ್ನು ಏರಿಕೆ ಮಾಡಲಿದೆ ಎಂದು ವರದಿಯೊಂದು ತಿಳಿಸಿದೆ ಎನ್ನಲಾಗಿದೆ.

ಮಾರುಕಟ್ಟೆ ನಿಯಂತ್ರಣ:

ಮಾರುಕಟ್ಟೆ ನಿಯಂತ್ರಣ:

ಜಿಯೋ ಬೆಲೆಯನ್ನು ಏರಿಕೆ ಮಾಡಿದರೂ ಸಹ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿಕೊಂಡರೆ ಕಡಿಮೆಯೇ ಇರಲಿದೆ. ಅಲ್ಲದೇ ಈಗಾಗಲೇ ಟೆಲಿಕಾಂ ಮಾರುಕಟ್ಟೆಯೂ ಜಿಯೋ ಹಿಡಿತಕ್ಕೆ ಬಂದಿದ್ದು, ಸಂಖ್ಯೆಯಲ್ಲಿ ಏರಿಕೆ ಮಾಡಿಕೊಳ್ಳುವ ಯತ್ನದಲ್ಲಿದೆ.

ಜಿಯೋ ಮಾದರಿಯಲ್ಲಿ ಏರ್‌ಟೆಲ್‌:

ಜಿಯೋ ಮಾದರಿಯಲ್ಲಿ ಏರ್‌ಟೆಲ್‌:

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಮಾದರಿಯನ್ನು ಅನುಸರಿಸುತ್ತಿರುವ ಏರ್‌ಟೆಲ್ ಸಹ ಬೆಲೆಗಳಲ್ಲಿ ಮತ್ತೆ ಏರಿಕೆ ಮಾಡಲಿದ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಏರ್‌ಟೆಲ್ ಹಿಡಿತ ಸಾಧಿಸಲು ನಡೆಸುತ್ತಿರುವ ಪ್ರಯತ್ನಗಳಲ್ಲಿ ಇದು ಒಂದು.

ಇತರೆ ಕಂಪನಿಗಳಿಗೆ ನಷ್ಟ:

ಇತರೆ ಕಂಪನಿಗಳಿಗೆ ನಷ್ಟ:

ಜಿಯೋ ನಡೆಯಿಂದ ಮಾರುಕಟ್ಟೆಯಲ್ಲಿರುವ ಏರ್‌ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳು ಲಾಭ ಮಾಡಲು ಹೆಣಗಾಡುತ್ತಿವೆ ಎನ್ನಲಾಗಿದೆ. ಈಗಾಗಲೇ ನಷ್ಟದ ಹಾದಿಯನ್ನು ಹಿಡಿದಿವೆ ಎನ್ನುವ ಮಾತು ಕೇಳಿ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Bad News for Jio Users. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot