ಈ ಸುದ್ದಿ ತಿಳಿದ್ರೆ, ಇನ್ಮುಂದೆ ಖಂಡಿತಾ ನೀವು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋಲ್ಲ!

|

ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ಬೆಂಗಳೂರಿನ ಟ್ರಾಫಿಕ್ ಪೊಲೀಸರು ಸದ್ಯದಲ್ಲೇ ಇಂಟೆಲಿಜೆಂಟ್‌ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ವ್ಯವಸ್ಥೆಯಡಿ ಅತ್ಯಾಧುನಿಕ ಕ್ಯಾಮೆರಾಗಳನ್ನ ಅಳವಡಿಕೆ ಮಾಡಲಾಗುತ್ತದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾದ ಪ್ರತಾಪ್‌ ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ಕ್ಯಾಮೆರಾಗಳ

ಈ ನೂತನ ವ್ಯವಸ್ಥೆಯಡಿ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಟ್ರಾಫಿಕ್‌ ಹೆಚ್ಚಾಗಿರುವಂತಹ ಜಂಕ್ಷನ್‌ ರಸ್ತೆಗಳಲ್ಲಿಯೂ ಸಹ, ಈ ಹಿಂದೆ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಪತ್ತೆ ಮಾಡುವುದು ಸುಲುಭವಾಗಲಿದೆ ಎನ್ನಲಾಗಿದೆ. ಇನ್ನು ಈ ನೂತನ ವ್ಯವಸ್ಥೆಯು ಆಟೋಮ್ಯಾಟಿಕ್‌ ಆಗಿ ಕಾರ್ಯನಿರ್ವಹಿಸಲಿದ್ದಯ, ಸಂಪರ್ಕರಹಿತವಾಗಿದೆ. ದಿನದ 24 ಗಂಟೆಯೂ ಹಾಗೂ ವರ್ಷದ 365 ದಿನವೂ ಈ ಕ್ಯಾಮೆರಾಗಳ ಕಣ್ಣು ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಇರುತ್ತದೆ.

ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್

ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್

ಆರಂಭದಲ್ಲಿ ನಗರದ 50 ಪ್ರಮುಖ ಜಂಕ್ಷನ್‌ಗಳಲ್ಲಿ 250 ಎಎನ್‌ಪಿಆರ್‌ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಸಂಚಾರ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಡುವ ಈ ಅತ್ಯಾಧುನಿಕ ಕ್ಯಾಮರಾಗಳು, ಸವಾರರ ಪ್ರತಿ ಸಂಚಾರಿ ನಿಯಮ ಉಲ್ಲಂಘನೆಯ ಮಾಹಿತಿಯನ್ನು ದಾಖಲು ಮಾಡುತ್ತದೆ. ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯು, ರಸ್ತೆ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಮಾಡಿ, ನೋಟಿಸ್‌ ಸಿದ್ಧಪಡಿಸುತ್ತದೆ. ಆ ಚಲನ್‌ ಅನ್ನು ನಿಯಮ ಉಲ್ಲಂಘಿಸಿದವರಿಗೆ ಎಸ್‌ಎಂಎಸ್‌ ರೂಪದಲ್ಲಿ ಕಳುಹಿಸುತ್ತದೆ.

ಈ ಉಲ್ಲಂಘನೆಗಳನ್ನು ಕ್ಯಾಮೆರಾ ಸೆರೆಹಿಡಿಯುತ್ತೆ!

ಈ ಉಲ್ಲಂಘನೆಗಳನ್ನು ಕ್ಯಾಮೆರಾ ಸೆರೆಹಿಡಿಯುತ್ತೆ!

* ವೇಗದ ಪ್ರಯಾಣ
* ಕೆಂಪು ದೀಪ ಉಲ್ಲಂಘಿಸಿ ವಾಹನ ಚಾಲನೆ
* ಸ್ಟಾಪ್‌ ಲೇನ್‌ ಉಲ್ಲಂಘನೆ
* ಹೆಲ್ಮೆಟ್‌ ಧರಿಸದೆ ಪ್ರಯಾಣ
* ತ್ರಿಪಲ್‌ ರೈಡಿಂಗ್‌
* ಫೋನಿನಲ್ಲಿ ಬಳಸುತ್ತಾ ವಾಹನ ಚಾಲನೆ
* ಸೀಟ್‌ ಬೆಲ್ಟ್‌ ಧರಿಸದೆ ವಾಹನ ಚಾಲನೆ

ಬೆಂಗಳೂರು ನಗರ ಸಂಚಾರ ಪೊಲೀಸರ ದಂಡದ ವಿವರಗಳನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಲು ಹೀಗೆ ಮಾಡಿ:

ಬೆಂಗಳೂರು ನಗರ ಸಂಚಾರ ಪೊಲೀಸರ ದಂಡದ ವಿವರಗಳನ್ನು ಆನ್‌ಲೈನ್‌ನಲ್ಲಿ ಚೆಕ್‌ ಮಾಡಲು ಹೀಗೆ ಮಾಡಿ:

ಹಂತ 1: https://echallan.parivahan.gov.in/ ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ 'ಚೆಕ್ ಚಲನ್ ಸ್ಟೇಟಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ DL ಸಂಖ್ಯೆ ಅಥವಾ ವಾಹನದ ಸಂಖ್ಯೆಯನ್ನು ನೀವು ನಮೂದಿಸಬೇಕಾದಲ್ಲಿ ಹೊಸ ಪುಟವು ತೆರೆಯುತ್ತದೆ
ಹಂತ 4: ನಿಮ್ಮ ವಿರುದ್ಧ ಯಾವುದೇ ದಂಡ ಮತ್ತು ಇ-ಚಲನ್ ಇಲ್ಲದಿದ್ದರೆ, ಚಲನ್ ಕಂಡುಬಂದಿಲ್ಲ' ಎಂಬ ಡೈಲಾಗ್ ಬಾಕ್ಸ್ ತೆರೆಯುತ್ತದೆ
ಹಂತ 5: ನಿಮ್ಮ ಹೆಸರಿನ ವಿರುದ್ಧ ದಂಡ ಅಥವಾ ಇ-ಚಲನ್ ಬಾಕಿ ಇದ್ದರೆ, ನಂತರ ಪುಟವು ತೆರೆಯುತ್ತದೆ ಅದು ನಿಮಗೆ ಚಲನ್ ಕುರಿತು ಎಲ್ಲಾ ವಿವರಗಳನ್ನು ತೋರಿಸುತ್ತದೆ.

ಆನ್‌ಲೈನ್‌ನಲ್ಲಿ ಚಲನ್ ಪಾವತಿ ಮಾಡಲು ಬಯಸಿದರೆ ಹಂತಗಳು ಇಲ್ಲಿವೆ:

ಆನ್‌ಲೈನ್‌ನಲ್ಲಿ ಚಲನ್ ಪಾವತಿ ಮಾಡಲು ಬಯಸಿದರೆ ಹಂತಗಳು ಇಲ್ಲಿವೆ:

ಹಂತ 1: https://echallan.parivahan.gov.in/index/accused-challan ಗೆ ಭೇಟಿ ನೀಡಿ
ಹಂತ 2: ಪುಟದಲ್ಲಿ ನಿಮ್ಮ ಚಲನ್ ಸಂಖ್ಯೆ, ವಾಹನ ಸಂಖ್ಯೆ ಅಥವಾ DL ಸಂಖ್ಯೆಯನ್ನು ನಮೂದಿಸಿ
ಹಂತ 3: ಕ್ಯಾಪ್ಚಾ ಕೋಡ್ ಸೇರಿಸಿ ಮತ್ತು 'ವಿವರ ಪಡೆಯಿರಿ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 4: ಹೊಸ ಪುಟವು ತೆರೆಯುತ್ತದೆ, ಅಲ್ಲಿ ನೀವು ಇ-ಚಲನ್ ಕುರಿತು ಪ್ರತಿ ವಿವರವನ್ನು ಪಡೆಯಬಹುದು
ಹಂತ 5: ಪಾವತಿ ಕಾಲಮ್‌ನ ಅಡಿಯಲ್ಲಿ 'ಈಗ ಪಾವತಿಸಿ' ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ
ಹಂತ 6: ನೀಡಿರುವ ಆಯ್ಕೆಗಳಿಂದ ಪಾವತಿಯ ವಿಧಾನವನ್ನು ಆರಿಸಿ. ನೀವು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು
ಹಂತ 7: ಪಾವತಿಯನ್ನು ಸ್ವೀಕರಿಸಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.

Best Mobiles in India

English summary
Bangalore police: Traffic violations are captured through 250 ANPR cameras installed 50 important junctions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X