ದೇಶದಲ್ಲೇ ಅತೀ ಹೆಚ್ಚು ಡಿಜಿಟಲ್‌ ಪಾವತಿ ಈ ನಗರದಲ್ಲಿ ದಾಖಲಾಗಿದೆ!..ಎಷ್ಟು ಮೊತ್ತ?

|

ಪ್ರಸಕ್ತ ವರ್ಷದ (2022ರ) ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶದ ನಗರಗಳಲ್ಲಿ ಬೆಂಗಳೂರು ಅತಿ ಹೆಚ್ಚು ಡಿಜಿಟಲ್ ಪಾವತಿಗಳನ್ನು ದಾಖಲಿಸಿದೆ ಎಂದು ವರದಿಯೊಂದ ತಿಳಿದು ಬಂದಿದೆ.

ಇಂಡಿಯಾ ಡಿಜಿಟಲ್ ಪಾವತಿ

ವರ್ಲ್ಡ್‌ಲೈನ್ ಇಂಡಿಯಾ ಡಿಜಿಟಲ್ ಪಾವತಿ ವರದಿಯು, 2022 ರ ಮೂರನೇ ತ್ರೈಮಾಸಿಕದ ಪ್ರಕಾರ ಹೈದರಾಬಾದ್ ಬೆಂಗಳೂರಿನ ನಂತರ ಎರಡನೇ ಸ್ಥಾನದಲ್ಲಿದೆ. ನಂತರ ಚೆನ್ನೈ, ಮುಂಬೈ, ಪುಣೆ, ದೆಹಲಿ, ಕೋಲ್ಕತ್ತಾ, ತಿರುವನಂತಪುರಂ, ಕೊಯಮತ್ತೂರು ಮತ್ತು ತ್ರಿಶೂರ್ ಇವೆ.

ಮಿಲಿಯನ್

ದಿ ಹಿಂದೂ ವರದಿಯ ಪ್ರಕಾರ, 2022 ರ ಜನವರಿ ಮತ್ತು ಅಕ್ಟೋಬರ್ ನಡುವೆ ಬೆಂಗಳೂರಿನ ಜನರು 14.82 ಮಿಲಿಯನ್ ಡಿಜಿಟಲ್ ಪಾವತಿ ವಹಿವಾಟುಗಳನ್ನು ಮಾಡಿದ್ದಾರೆ, ಅಂದರೆ 3,620ಕೋಟಿ ರೂ.ಗಳು. ಆಗಿದೆ. ಅದೇ ಅವಧಿಯಲ್ಲಿ ಹೈದರಾಬಾದ್‌ನಲ್ಲಿ 3,050 ಕೋಟಿ ರೂ. ಮೌಲ್ಯದ 10.36 ಮಿಲಿಯನ್ ಡಿಜಿಟಲ್ ಪಾವತಿ ವಹಿವಾಟುಗಳು ಮತ್ತು ಚೆನ್ನೈನಲ್ಲಿ 2,250 ಕೋಟಿ ಮೌಲ್ಯದ 9.76 ಮಿಲಿಯನ್ ವಹಿವಾಟುಗಳು ನಡೆದಿವೆ.

ವಹಿವಾಟುಗಳು

ಮುಂಬೈನಲ್ಲಿ 2,740 ಕೋಟಿ ರೂಪಾಯಿಗಳ 9.4 ಮಿಲಿಯನ್ ಡಿಜಿಟಲ್ ಪಾವತಿಗಳು ಮತ್ತು ಪುಣೆಯಲ್ಲಿ 1,730 ಕೋಟಿ ರೂಪಾಯಿಗಳ 7.88 ಮಿಲಿಯನ್ ಡಿಜಿಟಲ್ ವಹಿವಾಟುಗಳು ನಡೆದಿವೆ ಎಂದು ಅಧ್ಯಯನ ತಿಳಿಸಿದೆ. ರಾಜ್ಯಗಳಲ್ಲಿ, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ, ನಂತರ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಉತ್ತರ ಪ್ರದೇಶ, ಗುಜರಾತ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವಿದೆ.

ಕ್ರೆಡಿಟ್ ಕಾರ್ಡ್‌

ಭಾರತದಾದ್ಯಂತ, 2022ರ ಮೂರನೇ ತ್ರೈಮಾಸಿಕದಲ್ಲಿ , UPI, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಮೊಬೈಲ್ ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಪಾವತಿ ಸಾಧನಗಳು ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳು 23.06 ಶತಕೋಟಿ ವಹಿವಾಟುಗಳನ್ನು ನಡೆಸಿದ್ದು, ಇವು 38.32 ಟ್ರಿಲಿಯನ್ ರೂ.ಗಳ ಮೌಲ್ಯದ್ದಾಗಿದೆ.

ಗೃಹೋಪಯೋಗಿ

ಕಿರಾಣಿ ಅಂಗಡಿಗಳು, ರೆಸ್ಟೋರೆಂಟ್‌ಗಳು, ಬಟ್ಟೆ ಮತ್ತು ಉಡುಪುಗಳು, ಔಷಧಾಲಯ ಮತ್ತು ವೈದ್ಯಕೀಯ, ಹೋಟೆಲ್‌ಗಳು, ಆಭರಣ, ಚಿಲ್ಲರೆ ವ್ಯಾಪಾರ, ಗೃಹೋಪಯೋಗಿ ವಸ್ತುಗಳು ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಂತಹವುಗಳ ವಹಿವಾಟು ಸುಮಾರು 61% ಪಾಲನ್ನು ಹೊಂದಿವೆ. ಮೌಲ್ಯದ ವಿಷಯದಲ್ಲಿ 58% ಪಾಲು ಹೊಂದಿದೆ. ಆನ್‌ಲೈನ್ ಜಾಗದಲ್ಲಿ, ಇ-ಕಾಮರ್ಸ್, ಗೇಮಿಂಗ್, ಯುಟಿಲಿಟಿ ಮತ್ತು ಹಣಕಾಸು ಸೇವೆಗಳು 86% ನಷ್ಟು ಪ್ರಮಾಣದ ವಹಿವಾಟು ಹಾಗೂ ಮೌಲ್ಯದ ವಿಷಯದಲ್ಲಿ 47% ಕೊಡುಗೆ ನೀಡಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

UPI ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಈ ಅಂಶ ಗಮನಿಸಿ

UPI ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಈ ಅಂಶ ಗಮನಿಸಿ

ನಿಮ್ಮ ಯುಪಿಐ ಪಿನ್‌ ಯಾರೊಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ 6 ಅಥವಾ 4 ಅಂಕಿಯ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದು ಅಗತ್ಯ ಮತ್ತು ಪ್ರಮುಖ ಅಂಶವಾಗಿದೆ. ಯುಪಿಐ ಸಕ್ರಿಯಗೊಳಿಸಿದ ಆಪ್‌ನ ಪ್ರತಿ ಹಣ ವರ್ಗಾವಣೆಯ ಮೊದಲು ಪಿನ್‌ ಅನ್ನು ಕೇಳುತ್ತದೆ. ಆದ್ದರಿಂದ, ನಿಮ್ಮ ಯುಪಿಐ ಐಡಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಲಿಂಕ್ ಮಾಡಿದಾಗ, ಒಂದು ಪಾಸ್‌ವರ್ಡ್‌/ ಪಿನ್‌ ಅನ್ನು ಸೆಟ್‌ ಮಾಡಬೇಕಿರುತ್ತದೆ. ಎಟಿಎಂ ಪಿನ್‌ನಂತೆಯೇ ಸುರಕ್ಷಿತ ಪಾವತಿಗಳನ್ನು ಆರಂಭಿಸಲು ಈ ಪಿನ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ನಿಮ್ಮ ಯುಪಿಐ ಪಿನ್ ಅನ್ನು ಯಾರಿಗೂ ನೀಡಬೇಡಿ.

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಹಣ ವರ್ಗಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ

ಯುಪಿಐ ಸಕ್ರಿಯಗೊಳಿಸಿದ ಅಪ್ ಸ್ವೀಕರಿಸುವವರ ನಿರ್ದಿಷ್ಟ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ನೆರವು ಮಾಡುತ್ತದೆ. ಹಾಗೆಯೇ ವಿಶೇಷ ಯುಪಿಐ ಐಡಿಯನ್ನು ಬಳಸಿಕೊಂಡು ನೀವು ಇತರರಿಂದ ಪಾವತಿಗಳನ್ನು ಸ್ವೀಕರಿಸಬಹುದು. ಹೀಗಾಗಿ ಇತರರಿಂದ ಹಣವನ್ನು ಸ್ವೀಕರಿಸುತ್ತಿರುವಾಗ ಯಾವಾಗಲೂ ಸರಿಯಾದ ಯುಪಿಐ ಐಡಿಯನ್ನು ನೀಡಿ. ಹಾಗೆಯೇ ನಿಮ್ಮ ಯುಪಿಐ ಐಡಿಯನ್ನು ಎರಡು ಬಾರಿ ಪರಿಶೀಲಿಸಿ ನೀಡಿ. ಅಂತೆಯೇ, ವ್ಯವಹಾರ/ ಟ್ರಾನ್ಸಾಕ್ಶನ್ ಪ್ರಾರಂಭಿಸುವ ಮೊದಲು ಯಾವಾಗಲೂ ಸ್ವೀಕರಿಸುವವರ ಯುಪಿಐ ಐಡಿಯನ್ನು ಎರಡು ಬಾರಿ ಚೆಕ್‌ ಮಾಡಿ. ತಪ್ಪಾದ ಟ್ರಾನ್ಸಾಕ್ಶನ್ ಆಗದಂತೆ ಹಾಗೂ ಬೇರೆಯವರಿಗೆ ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಇದು ಉಪಯುಕ್ತ.

Best Mobiles in India

English summary
Bengaluru recorded highest digital payments in July-Sept quarter: Study.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X