ಗುಡ್‌ನ್ಯೂಸ್‌!..ಬೆಂಗಳೂರಿನಲ್ಲಿ ಇನ್ನು ಉಚಿತ ಇಂಟರ್ನೆಟ್‌!

|

ಶೀಘ್ರದಲ್ಲೇ ಬೆಂಗಳೂರಿನಲ್ಲಿ ಪ್ರತಿದಿನ ಒಂದು ಗಂಟೆ ಉಚಿತ ಇಂಟರ್ನೆಟ್ ನೀಡುವ ಯೋಜನೆಯನ್ನು ಜಾರಿಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆಗಾಗಿ ಬೇಡಿಕೆಯಿದ್ದು, ಈ ಯೋಜನೆ ಜಾರಿ ಮಾಡಲು ಒಂಬತ್ತು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ

ಹೌದು, ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ 'ಬೆಂಗಳೂರು ಟೆಕ್ ಶೃಂಗಸಭೆ-2019 ರ (Bengaluru Tech Summit-2019) ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೆಂಗಳೂರಿಗೆ ಪ್ರತಿದಿನ ಒಂದು ಗಂಟೆ ಉಚಿತ ಇಂಟರ್ನೆಟ್‌ ಸೌಲಭ್ಯವನ್ನು ಕಲ್ಪಸುವ ಯೋಜನೆ ಬಗ್ಗೆ ತಿಳಿಸಿದರು. ಈ ಯೋಜನೆಯನ್ನು ಅನುಷ್ಠಾನ ಮಾಡಲು ಸರ್ಕಾರವು (ACT Fiberne)-ಎಸಿಟಿ ಫೈಬರ್‌ ಬ್ರಾಡ್‌ಬ್ಯಾಂಡ್ ಸಂಸ್ಥೆಯ ಜೊತೆಗೆ ಕೈಜೋಡಿಸಿದೆ ಎಂದಿದ್ದಾರೆ.

ಉಚಿತ

ಬೆಂಗಳೂರಿನಲ್ಲಿ ಉಚಿತ ಇಂಟರ್ನೆಟ್ ನೀಡುವ ಯೋಜನೆಯನ್ನು ಜಾರಿ ಮಾಡಲು ಸುಮಾರು 100ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಎಸಿಟಿ ಫೈಬರ್ ಸಂಸ್ಥೆಯು ಪೋಲ್‌ಗಳನ್ನು (poles) ಸ್ಥಾಪಿಸಲು ಮುಂದೆ ಬಂದಿದ್ದು, ಸರ್ಕಾರ ಅಗತ್ಯ ಶುಲ್ಕ ಮತ್ತು ಪವರ್ ಸಪ್ಲೈ ಮಾಡಲಿದೆ ಎಂದು ಅವರು ಹೇಳಿದರು. ಉಚಿತ ಇಂಟರ್ನೆಟ್ ಯೋಜನೆಯ ಪರಿಣಾಮ ಗೃಹ ಬಳಕೆ ಬ್ರಾಡ್‌ಬ್ಯಾಂಡ್‌ ಸೇವೆ ವಿಸ್ತಾರವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಯೋಜನೆ

ಈ ಉಚಿತ ಇಂಟರ್ನೆಟ್‌ ಯೋಜನೆಯ ಸೌಲಭ್ಯವು ಪೂರ್ಣ ಬೆಂಗಳೂರಿನ ವ್ಯಾಪ್ತಿಗೆ ಲಭ್ಯವಾಗಲಿದೆಯಾ ಅಥವಾ ಆಯ್ದ ಪ್ರದೇಶಗಳಿಗೆ ಮಾತ್ರ ದೊರೆಯಲಿದೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಬೆಂಗಳೂರಿಗೆ ಅಗತ್ಯ ಯೋಜನೆ ಆಗಿದ್ದು, ಹೀಗಾಗಿ ಸುಮಾರು 4000 ವೈಫೈ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿ ಇದೆ ಎನ್ನಲಾಗಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1GB ಉಚಿತ ಡೇಟಾ ಸಿಗಲಿದೆ.

ದೇಶದಲ್ಲಿ

ಎಸಿಟಿ ಸಂಸ್ಥೆಯು ಈಗಾಗಲೇ ಬೆಂಗಳೂರಿನ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಈ ಹೊಸ ಯೋಜನೆಯ ನಂತರ ಇನ್ನಷ್ಟು ಜನಪ್ರಿಯತೆ ಗಳಿಸಲಿದೆ. ದೇಶದಲ್ಲಿ ಗೂಗಲ್ ಈಗಾಗಲೇ ಸುಮಾರು 400 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಕನೆಕ್ಷನ್ ಸೌಲಭ್ಯ ಒದಗಿಸಿದೆ. ಹಾಗೆಯೇ ಇನ್ನು ಮುಂದಿನ ದಿನಗಳಲ್ಲಿ ಪ್ರಮುಖ ನಗರಗಳ ರಸ್ತೆಗಳಲ್ಲಿಯೂ ಉಚಿತವಾಗಿ ಇಂಟರ್ನೆಟ್‌ ಸೌಲಭ್ಯ ದೊರೆಯುವ ಸಾಧ್ಯತೆಗಳಿವೆ.

Best Mobiles in India

English summary
Karnataka Deputy Chief Minister C. N. Ashwat Narayan announced the plan to offer free internet daily at the Bengaluru Tech Summit 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X