ನಗರದ ಕಸ ನಿವಾರಣೆಗೆ ಸೆಲ್ಫಿ ವಿತ್ ಕಸ ಫೇಸ್‌ಬುಕ್‌ ಅಭಿಯಾನ

By Shwetha
|

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಸೆಲ್ಫಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಸಾಮಾಜಿಕ ಮಾಧ್ಯಮದಲ್ಲಿ ಬರಿಯ ಷೋಕಿಗಾಗಿ ಮಾತ್ರವಲ್ಲದೆ ಸೆಲ್ಫಿಯನ್ನು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಬಳಸಲಾಗಿದೆ. ಮೋದಿಯವರ ಬೇಟಿ ಬಚಾವೋ (ಮಗಳನ್ನು ರಕ್ಷಿಸಿ) ಆಂದೋಲನದಲ್ಲಿ ಹೆಚ್ಚಿನವರು ತಮ್ಮ ಮಗಳೊಂದಿಗಿರುವ ಸೆಲ್ಫಿಯನ್ನು ಕಳುಹಿಸಿ ಈ ಆಂದೋನಕ್ಕೆ ಹೊಸ ಮುನ್ನುಡಿಯನ್ನು ಬರೆದಿದ್ದರು. ಹೀಗೆ ಸೆಲ್ಫಿ ಇನ್ನಷ್ಟು ಅರ್ಥಪೂರ್ಣವಾಗಿ ತನ್ನ ಪಾಪ್ಯುಲಾರಿಟಿಯನ್ನು ಗಳಿಸಿಕೊಂಡಿತ್ತು.

ಓದಿರಿ: ಪ್ರಾಣದ ಹಂಗು ತೊರೆದು ಸೆಲ್ಫಿ ಆಟ!!!

ಇದಕ್ಕೆ ಬೆಂಬಲ ಎನ್ನುವಂತೆ ಬೆಂಗಳೂರಿನಲ್ಲಿ ಹೊಸದೊಂದು ಸೆಲ್ಫಿ ಟ್ರೆಂಡ್ ಆರಂಭವಾಗಿದ್ದು ಸೆಲ್ಫಿ ವಿತ್ ಕಸ ಎಂಬ ಅಭಿಯಾನ ಇದಾಗಿದೆ. ಮೋದಿಯವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಕೈಜೋಡಿಸುವಂತೆಯೇ ಕಸದ ಬಗ್ಗೆ ಅರಿವನ್ನು ಉಂಟುಮಾಡಲು ಅಂತೆಯೇ ಬಿಬಿಎಮ್‌ಪಿಯನ್ನು ಎಚ್ಚರಿಸುವ ಸಲುವಾಗಿ ಸೆಲ್ಫಿ ವಿದ್ ಕಸ ಫೇಸ್‌ಬುಕ್‌ನಲ್ಲಿ ತನ್ನ ಹೆಜ್ಜೆಯನ್ನಿಟ್ಟದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮತ್ತಷ್ಟು ವಿವರಗಳನ್ನು ಪಡೆದುಕೊಳ್ಳೋಣ.

ಸೆಲ್ಫಿ ವಿತ್ ಕಸ

ಸೆಲ್ಫಿ ವಿತ್ ಕಸ

ಫೇಸ್‌ಬುಕ್‌ನಲ್ಲಿ ಸೆಲ್ಫಿ ವಿತ್ ಕಸ ಎಂಬ ಸಮುದಾಯವೇ ಆರಂಭಗೊಂಡಿದ್ದು ಟಿವಿ ಸೀರಿಯಲ್ ನಟರಾಗಿರುವ ರಾಕೆಟ್ ಮಯ್ಯ ಮತ್ತು ಸಾಮಾಜಿಕ ಕಾಳಜಿಯನ್ನು ಹೊಂದಿರುವ ಕೆಲವು ಜನರನ್ನು ಸೇರಿಸಿಕೊಂಡು ಫೇಸ್‌ಬುಕ್‌ನಲ್ಲಿ ಸೆಲ್ಫಿ ವಿತ್ ಕಸ ಪುಟವನ್ನು ಆರಂಭಿಸಲಾಗಿದೆ.

ಫೇಸ್‌ಬುಕ್‌ ಸೆಲ್ಫಿ

ಫೇಸ್‌ಬುಕ್‌ ಸೆಲ್ಫಿ

ಫೇಸ್‌ಬುಕ್‌ಗೆ ಸೆಲ್ಫಿ ಕಳುಹಿಸುವವರು ಕಸದೊಂದಿಗೆ ಇರುವ ಸೆಲ್ಫಿ ಜೊತೆಗೆ ಸ್ಥಳವನ್ನು ನಮೂದಿಸಬೇಕು.

ಜನರಿಗೆ ಜಾಗೃತಿ

ಜನರಿಗೆ ಜಾಗೃತಿ

ನಗರದಲ್ಲಿ ಎಷ್ಟು ಕಸವನ್ನು ಹಾಕಿ ಪರಿಸರವನ್ನು ಹಾಳುಮಾಡಲಾಗುತ್ತಿದೆ ಎಂಬುದನ್ನು ಕುರಿತು ಜನರಿಗೆ ಜಾಗೃತಿಯನ್ನು ಮೂಡಿಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ ರಾಕೇಶ್.

ಸೆಲ್ಫಿ ಸಮಾಜಮುಖಿ

ಸೆಲ್ಫಿ ಸಮಾಜಮುಖಿ

ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಒಂದು ಟ್ರೆಂಡ್ ಆಗಿದ್ದು ಜನರು ಸುಖಾಸುಮ್ಮನೆ ಸೆಲ್ಫಿ ತೆಗೆದು ಅದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಉದ್ದೇಶವನ್ನಿಟ್ಟುಕೊಂಡು ತೆಗೆಯುವ ಸೆಲ್ಫಿ ಸಮಾಜಮುಖಿಯಾಗಿದ್ದರೆ ನಮಗೇ ಇದರಿಂದ ಒಳಿತು.

ಫೇಸ್‌ಬುಕ್ ಪುಟ ಲೈಕ್

ಫೇಸ್‌ಬುಕ್ ಪುಟ ಲೈಕ್

ನೂರಾರು ಜನರು ಫೇಸ್‌ಬುಕ್ ಪುಟವನ್ನು ಲೈಕ್ ಮಾಡುತ್ತಿದ್ದು ಅದರಲ್ಲಿ ಹಲವರು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕಸದ ಕುರಿತಾದ ಮಾಹಿತಿಗಳನ್ನು ನಾವು ಪೋಸ್ಟ್ ಮಾಡುತ್ತಿದ್ದೇವೆ ಎಂಬುದಾಗಿ ರಾಕೇಶ್ ತಿಳಿಸಿದ್ದಾರೆ.

ಬಿಬಿಎಮ್‌ಪಿ ಎಚ್ಚರ

ಬಿಬಿಎಮ್‌ಪಿ ಎಚ್ಚರ

ಬಿಬಿಎಮ್‌ಪಿಯನ್ನು ಎಚ್ಚರಿಸಲು ಇದೊಂದು ಶಕ್ತಿಯುತ ಮಾರ್ಗವಾಗಿದ್ದು ಹೆಚ್ಚಿನ ಜನರು ಒಗ್ಗೂಡಿದಲ್ಲಿ ಕಸಮುಕ್ತ ನಗರವನ್ನಾಗಿ ಬೆಂಗಳೂರನ್ನು ಪರಿವರ್ತಿಸಬಹುದು ಎಂಬುದು ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿರುವ ಅರುಣ್ ಮಾತಾಗಿದೆ.

Best Mobiles in India

English summary
A group of like-minded people started ‘Selfie with Kasa’(Selfie with Garbage) initiative to draw attention of Bruhat Bengaluru Mahanagara Palike (BBMP) authorities towards littering or dumping spots.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X