ಈ ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಅಡೆ ತಡೆ ಇಲ್ಲದ ಇಂಟರ್ನೆಟ್‌ ಸಂಪರ್ಕ ಲಭ್ಯ!

|

ಪ್ರಸ್ತುತ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಅನಿಯಮಿತ ವೇಗದ ಇಂಟರ್‌ನೆಟ್‌ ಸೌಲಭ್ಯಕ್ಕಾಗಿ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು ಸೇರಿದಂತೆ ಹಲವು ಕಂಪೆನಿಗಳು ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಆ ಪೈಕಿ ಕೆಲವು ಯೋಜನೆಗಳು ಹೆಚ್ಚಿನ ಪ್ರಯೋಜನಗಳೊಂದಿಗೆ ಗ್ರಾಹಕರುನ್ನು ಸೆಳೆದಿವೆ.

ಜಿಯೋಫೈಬರ್‌

ಅನಿಯಮಿತ ವೇಗದ ಇಂಟರ್‌ನೆಟ್‌ ಸೇವೆ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಜಿಯೋಫೈಬರ್‌, ಟಾಟಾ ಪ್ಲೇ, ಎಸಿಟಿ, ಏರ್‌ಟೆಲ್‌ ಎಕ್ಸ್‌ಟ್ರಿಮ್ ಕಂಪೆನಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಗ್ರಾಹಕರನ್ನು ಆಕರ್ಷಿಸಿವೆ. ಇವುಗಳಲ್ಲಿ 100 Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಹೆಚ್ಚಾಗಿ ಆಕರ್ಷಕ ಎನಿಸಿವೆ. ಹಾಗಾದರೇ, ಅಡೆ ತಡೆ ಇಲ್ಲದ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕಾಗಿ ಅತ್ಯುತ್ತಮ ಯೋಜನೆಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್‌ 699ರೂ. ಪ್ಲಾನ್‌

ಜಿಯೋ ಫೈಬರ್‌ 699ರೂ. ಪ್ಲಾನ್‌

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100 mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ 799 ರೂ.ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100Mbps ವೇಗದೊಂದಿಗೆ ಅನಿಯಮಿತ ಡೇಟಾ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ FASTag ಕ್ಯಾಶ್‌ಬ್ಯಾಕ್ ಆಫರ್‌ ಮತ್ತು ವಿಂಕ್‌, ಅಪೋಲೋ, ಎಕ್ಸ್‌ಟ್ರಿಮ್‌ ಪ್ರಿಮೀಯಂಗೆ ಪ್ರವೇಶ ದೊರೆಯಲಿದೆ.

ಟಾಟಾ ಪ್ಲೇ ಯೋಜನೆ

ಟಾಟಾ ಪ್ಲೇ ಯೋಜನೆ

ಟಾಟಾ ಪ್ಲೇ 100 Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನಿಮಗೆ 30 ದಿನಗಳ ಅವಧಿಗೆ 850 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ 3 ತಿಂಗಳ ಅವಧಿಗೆ ಖರೀದಿಸಿದರೆ 2,400ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ ಜನರು ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ACT ಫೈಬರ್‌ನೆಟ್ ಯೋಜನೆ

ACT ಫೈಬರ್‌ನೆಟ್ ಯೋಜನೆ

ಎಸಿಟಿ (ACT) ಕಂಪೆನಿ ಭಾರತದಲ್ಲಿ ಎಲ್ಲಾ ನಗರಗಳಲ್ಲಿ 100 Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿಲ್ಲ. ಆದರೆ ಚೆನ್ನೈನಲ್ಲಿ ಮಾತ್ರ ಅನಿಯಮಿತ ಡೇಟಾ ಪ್ರಯೋಜನ ನೀಡುವ 100 Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ ಅಧಿಕೃತ ಸೈಟ್‌ನ ಪ್ರಕಾರ ತಿಂಗಳಿಗೆ ಸುಮಾರು 820 ರೂ. ಬೆಲೆ ಹೊಂದಿದೆ. ಇದು ಕೆಲವು ಆಕರ್ಷಕ ಓಟಿಟಿ ಪ್ರಯೋಜನ ಒಳಗೊಂಡಿದೆ.

ಜಿಯೋ ಫೈಬರ್‌ 999ರೂ.ಪ್ಲಾನ್‌

ಜಿಯೋ ಫೈಬರ್‌ 999ರೂ.ಪ್ಲಾನ್‌

ಜಿಯೋ ಫೈಬರ್‌ 999ರೂ. ಪ್ಲಾನ್‌ನಲ್ಲಿ ನೀವು 150 mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿಷಯಗಳಿಗೆ ಪ್ರವೇಶವನ್ನು ನೀಡುತ್ತದೆ.

ಜಿಯೋ ಫೈಬರ್‌ 1499ರೂ. ಪ್ಲಾನ್‌

ಜಿಯೋ ಫೈಬರ್‌ 1499ರೂ. ಪ್ಲಾನ್‌

ಜಿಯೋ ಫೈಬರ್‌ ಯೋಜನೆಯು 300 mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಪ್ರವೇಶವನ್ನು ನೀಡುತ್ತದೆ, ಇದು ರೂ 199 ಮೌಲ್ಯದ್ದಾಗಿದೆ.

ಜಿಯೋ ಫೈಬರ್‌ 2499ರೂ. ಪ್ಲಾನ್‌

ಜಿಯೋ ಫೈಬರ್‌ 2499ರೂ. ಪ್ಲಾನ್‌

ಜಿಯೋ ಫೈಬರ್‌ 2499ರೂ. ಪ್ಲಾನ್‌ನಲ್ಲಿ 500 mbps ವೇಗದ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಪ್ರಯೋಜನ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ನಲ್ಲಿ ನೀವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಗಳೊಂದಿಗೆ 300 Mbps ಅನಿಯಮಿತ ಇಂಟರ್‌ನೆಟ್ ಪ್ರಯೋಜನ ಸಿಗಲಿದೆ. ಇದಲ್ಲದೆ 350 ಟಿವಿ ಚಾನಲ್‌ಗಳ ಜೊತೆಗೆ ಮೇಲಿನ ಎರಡು ಪ್ಲಾನ್‌ಗಳ ಮಾದರಿಯಲ್ಲಿಯೇ ಇದು ಕೂಡ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ನೀಡಲಿದೆ.

ಏರ್‌ಟೆಲ್ ಎಕ್ಸ್‌ಟ್ರೀಮ್ 499 ರೂ ಪ್ಲಾನ್‌

ಏರ್‌ಟೆಲ್ ಎಕ್ಸ್‌ಟ್ರೀಮ್ 499 ರೂ ಪ್ಲಾನ್‌

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್‌ 499 ರೂ ಬೆಲೆಯಲ್ಲಿ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಪ್ಲಾನ್ ಹೊಂದಿದೆ. ಈ ಬ್ರಾಡ್‌ಬ್ಯಾಂಡ್ ಪ್ಲಾನ್‌ ಬಳಕೆದಾರರಿಗೆ 40Mbps ವೇಗದಲ್ಲಿ 3.3TB ವರೆಗೆ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನ ನೀಡಲಿದೆ. ಅಲ್ಲದೆ ಬಳಕೆದಾರರು ಅನ್‌ಲಿಮಿಟೆಡ್‌ ಲೋಕಲ್‌ ಮತ್ತು ISD ಕರೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಜಿಯೋ ಪ್ಲಾನ್‌ 399 ರೂ. ಪ್ಲಾನ್‌

ಜಿಯೋ ಪ್ಲಾನ್‌ 399 ರೂ. ಪ್ಲಾನ್‌

ರಿಲಯನ್ಸ್ ಜಿಯೋ ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್‌ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ.

ಏರ್‌ಟೆಲ್‌ ದುಬಾರಿ ಯೋಜನೆ

ಏರ್‌ಟೆಲ್‌ ದುಬಾರಿ ಯೋಜನೆ

ಏರ್‌ಟೆಲ್‌ನ ಈ ಯೋಜನೆ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ.

Best Mobiles in India

English summary
Best Broadband Plans with High Speed Internet 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X