ನಿಮ್ಮ ಸೆಲ್ಫಿ ಫೋಟೋ ಇನ್ನಷ್ಟು ಸುಂದರವಾಗಿ ಕಾಣಬೇಕಾದ್ರೆ ಈ ಆ್ಯಪ್‌ಗಳನ್ನು ಬಳಸಿರಿ!

|

ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಅದನ್ನು ಸೊಶೀಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡದೇ ಹೋದರೆ ಕೆಲವರಿಗೆ ಸಮಾಧಾನ ಆಗೋದಿಲ್ಲ. ಅಷ್ಟರ ಮಟ್ಟಿಗೆ ಸೆಲ್ಫಿ ಕ್ರೇಜ್‌ ಇಂದಿನ ಯುವಜನತೆಯನ್ನು ಆವರಿಸಿಕೊಂಡಿದೆ. ಇನ್ನು ಕೆಲವರು ತಾವು ತೆಗೆದುಕೊಳ್ಳುವ ಸೆಲ್ಫಿ ಫೋಟೋಗೆ ಇನ್ನಷ್ಟು ಫಿಲ್ಟರ್‌ ಮಾಡಿ ಅದನ್ನು ಇನ್ನಷ್ಟು ಅಂದಕಾಣುವಂತೆ ಮಾಡಲು ಬಯಸುತ್ತಾರೆ. ಇಂತಹವರಿಗಾಗಿಯೇ ಪ್ಲೇ ಸ್ಟೋರ್‌ನಲ್ಲಿ ಫೇಸ್‌ ಫಿಲ್ಟರ್‌ ಮಾಡುವ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ.

ಫೋಟೋ

ಹೌದು, ನಿಮ್ಮ ಸೆಲ್ಫಿ ಫೋಟೋ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುವ ಫೇಸ್‌ ಫಿಲ್ಟರ್‌ ಅಪ್ಲಿಕೇಶನ್‌ಗಳಿವೆ. ಈ ಆ್ಯಪ್‌ಗಳ ಮೂಲಕ ನಿಮ್ಮ ಸೆಲ್ಫಿ ಇನ್ನಷ್ಟು ಸುಂದರವಾಗಿ, ಆಕರ್ಷಣೀಯವಾಗಿ ಕಾಣುವಂತೆ ಮಾಡಬಹುದಾಗಿದೆ. ಅಲ್ಲದೆ ನಿಮ್ಮ ಸೆಲ್ಫಿ ಫೋಟೋದ ಫೇಸ್‌ ಮೇಲೆ ಹೆಚ್ಚಿನ ಎಫೆಕ್ಟ್‌ಗಳನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶ ನೀಡಲಿದೆ. ಹಾಗಾದರೆ ನಿಮ್ಮ ಸೆಲ್ಫಿಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ನೀವು ಬಳಸುಬಹುದಾದ ಕೆಲವು ಅತ್ಯುತ್ತಮ ಫೇಸ್ ಫಿಲ್ಟರ್ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

B612

B612

ಸ್ವತಃ ಆಲ್-ಇನ್-ಒನ್ ಕ್ಯಾಮರಾ ಹೊಂದಿರುವ ಈ ಆ್ಯಪ್‌ ಕೂಡ ಫೆಸ್‌ ಫಿಲ್ಟರ್‌ ಆ್ಯಪ್‌ಗಳಲ್ಲಿ ಒಂದಾಗಿದೆ. ಇದು ನೈಜ-ಸಮಯದ ಫಿಲ್ಟರ್‌ಗಳನ್ನು ಅನ್ವಯಿಸುವ ಇನ್‌ಬಿಲ್ಟ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದರಿಂದ ನೀವು ಫೋಟೋಗಳನ್ನು ಎಡಿಟ್‌ ಮಾಡಬೇಕಾದ ಅನಿವಾರ್ಯತೆಯಿಲ್ಲ. ಬದಲಿಗೆ "ಸ್ಮಾರ್ಟ್ ಬ್ಯೂಟಿ" ಫೀಚರ್ಸ್‌ ಬಳಸಿ ನಿಮ್ಮ ಫೋಟೋ ಆಕರ್ಷಕವಾಗಿ ಕಾಣುವಂತೆ ಸೆರೆಹಿಡಿಯಬಹುದಾಗಿದೆ. ಇದರಲ್ಲಿ ಕೆಲವು ಪಾಪ್ ಮಾಡಲು ಬಳಕೆದಾರರು ಬಣ್ಣಗಳನ್ನು ಸೆಟ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ಬ್ಯೂಟಿಪ್ಲಸ್ ಕ್ಯಾಮ್

ಬ್ಯೂಟಿಪ್ಲಸ್ ಕ್ಯಾಮ್

ಬ್ಯೂಟಿಪ್ಲಸ್ ಕ್ಯಾಮ್ ಆ್ಯಪ್‌ ಹೆಸರೇ ಸೂಚಿಸುವಂತೆ ನಿಮ್ಮ ಸೆಲ್ಫಿ ಇನ್ನಷ್ಟು ಬ್ಯೂಟಿಫುಲ್‌ ಆಗಿ ಕಾಣುವಂತೆ ಮಾಡಲಿದೆ. ಇದು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರ ಜನಪ್ರಿಯ ಫೇಸ್ ಫಿಲ್ಟರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದರಲ್ಲಿರುವ ಇನ್‌ಬಿಲ್ಟ್‌ ಕ್ಯಾಮೆರಾದಿಂದ ತೆಗೆದ ಸೆಲ್ಫಿಗಳನ್ನು ಫಿಲ್ಟರ್‌ ಮಾಡಲಿದೆ. ಅಲ್ಲದೆ ಸೆಲ್ಫಿಯಲ್ಲಿ ನಿಮ್ಮ ಮುಖದ ಚರ್ಮ ಇನ್ನಷ್ಟು ಕಾಂತಿಯುತವಾಗಿ ಕಾಣುವಂತೆ ಮಾಡಲಿದೆ.

ಸ್ನೋ

ಸ್ನೋ

ಸ್ನೋ ಅಪ್ಲಿಕೇಶನ್‌ ಸೆಲ್ಫಿ ಪ್ರಿಯರಿಗೆ ಲಭ್ಯವಾಗುವ ಮತ್ತೊಂದು ಫೋಟೋ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಕಸ್ಟಮ್ ಬ್ಯೂಟಿ ಟೂಲ್ಸ್‌ಗಳನ್ನು ಹೊಂದಿದ್ದು, AR ಮೇಕಪ್ ಫೀಚರ್ಸ್‌ಗಳನ್ನು ಬಳಸಲು ಬಳಕೆದಾರರಿಗೆ ಅನುಮತಿಸಲಿದೆ. ಇದಲ್ಲದೆ ಈ ಆ್ಯಪ್‌ನಲ್ಲಿ ಸ್ಟಿಕ್ಕರ್‌ಗಳು ಮತ್ತು ಎಫೆಕ್ಟ್‌ಗಳ ಬಿಗ್‌ ಕ್ಯಾಟ್‌ಲಾಗ್‌ ಅನ್ನು ಕೂಡ ನೀಡಲಾಗಿದೆ. ಇದರಿಂದ ನಿಮ್ಮ ಸೆಲ್ಫಿಗಳಿಗೆ ನೀವು ಬೇಕಾದ ಮೋಜಿನ ಎಫೆಕ್ಟ್‌ಗಳನ್ನು ಅನ್ವಯಿಸಬಹುದಾಗಿದೆ. ಇದು iOS ಮತ್ತು Android ಎರಡರಲ್ಲೂ ಲಭ್ಯವಿದೆ.

ಯುಕ್ಯಾಮ್ ಪರ್ಫೆಕ್ಟ್

ಯುಕ್ಯಾಮ್ ಪರ್ಫೆಕ್ಟ್

ಯುಕ್ಯಾಮ್‌ ಪರ್ಫೆಕ್ಟ್‌ ಆ್ಯಪ್‌ ಜನಪ್ರಿಯ ಫೇಸ್ ಫಿಲ್ಟರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಸಿಂಗಲ್‌-ಟ್ಯಾಪ್ ಸೆಲ್ಫಿ ಬ್ಯೂಟಿಫಿಕೇಶನ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಲ್ಲಿ ಕೂಡ ನಿಮ್ಮ ಮುಖದ ಬಣ್ಣವನ್ನು ಇನ್ನಷ್ಟು ಕಲರ್‌ಫುಲ್‌ ಆಗಿ ಕಾಣುವಂತೆ ಮಾಡಬಹುದು. ಇದರಲ್ಲಿ ಮ್ಯಾಜಿಕ್ ಬ್ರಷ್ ಅನ್ನು ಕೂಡ ನೀಡಲಾಗಿದ್ದು,ಇದನ್ನು ಟ್ಯಾಪ್‌ ಮಾಡಿದರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ಕಲರ್‌ ಅನ್ನು ಸೇರಿಸಲಿದೆ. ಜೊತೆಗೆ ಸೆಲ್ಫಿಗಳಿಗೆ ಫ್ರೇಮ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಫೋಟೋಗಳನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದಾಗಿದೆ.

ಡೀಪ್‌ಸೆಲ್ಫಿ

ಡೀಪ್‌ಸೆಲ್ಫಿ

ಡೀಪ್‌ಸೆಲ್ಫಿ ಆ್ಯಪ್‌ನಲ್ಲಿ ನಿಮ್ಮ ಸೆಲ್ಫಿಗಳು ಮತ್ತು ವೀಡಿಯೋ ಚಾಟ್‌ಗಳಿಗೆ ಅನೇಕ ಎಫೆಕ್ಟ್‌ಗಳನ್ನು ಆಡ್‌ ಮಾಡಬಹುದು. ಇದರಲ್ಲಿ 3D ಫೇಸ್ ಫಿಲ್ಟರ್‌ಗಳು, ಫೇಸ್ ಸ್ವಾಪ್‌ಗಳು, ಮೇಕಪ್ ಪರಿಕರಗಳು ಮತ್ತು ಫೋಟೋ ಎಡಿಟರ್ ಫಿಲ್ಟರ್‌ಗಳನ್ನು ಕಾಣಬಹುದು. ಇದರಲ್ಲಿರುವ ಲೈವ್ ಫೇಸ್ ಮಾಸ್ಕ್ ಫಂಕ್ಷನ್‌ ನೈಜ ಸಮಯದಲ್ಲಿ ಕಾಮಿಕ್‌ ಫೇಸ್‌ಗಳು, ಹೀರೋ ಮಾಸ್ಕ್‌ಗಳು ಮತ್ತು ವಿಭಿನ್ನ ಮುಖವಾಡಗಳನ್ನು ಅನ್ವಯಿಸುವುದಕ್ಕೆ ಅನುಮತಿಸಲಿದೆ.

Best Mobiles in India

Read more about:
English summary
Best face filter apps you can use to enhance your selfies

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X