2023 ಕ್ಕೆ ತೂಕ ಇಳಿಸಿಕೊಳ್ಳಬೇಕು ಅಂದುಕೊಂಡಿದ್ದೀರಾ?... ಈ ಗ್ಯಾಜೆಟ್‌ ಬಳಸಿ!

|

ಹೊಸ ವರ್ಷಕ್ಕೆ ಹೊಸ ನಿರ್ಧಾರಗಳನ್ನು ಮಾಡುವುದು ಸಹಜ. ಅದರಲ್ಲೂ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಹಲವರು ಮುಂದಾಗುತ್ತಾರೆ. ಹಾಗೆಯೇ ಇಂದಿನ ಜೀವನ ಶೈಲಿಯಿಂದ ಬಹುತೇಕರ ದೇಹ ಹೆಚ್ಚಿನ ತೂಕ ಪಡೆದುಕೊಳ್ಳುತ್ತದೆ. ಇದಕ್ಕಾಗಿಯೇ ಜಿಮ್‌, ವಾಯುವಿಹಾರಕ್ಕೆ ಹೋಗುವುದು ಸಹಜ ಅದಾಗ್ಯೂ ಕೆಲವು ಗ್ಯಾಜೆಟ್‌ಗಳ ಮೂಲಕವೂ ನೀವು ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ದೇಹ

ಹೌದು, ಈ ವರ್ಷವಾದರೂ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ ಈ ಲೇಖನ ನಿಮಗೆ ಖಂಡಿತಾ ಸಹಾಯಕವಾಗಲಿದೆ. ಇದರಲ್ಲಿ ಏರ್‌ಫ್ರೈಯರ್, ನ್ಯೂಟ್ರಿಬುಲೆಟ್, ಸ್ಲೋ ಕುಕ್ಕರ್ ಸೇರಿದಂತೆ ಇನ್ನಷ್ಟು ಡಿವೈಸ್‌ಗಳು ನಿಮ್ಮ ದೇಹದ ತೂಕ ಇಳಿಕೆಯಾಗಲು ಸಹಕರಿಸುತ್ತವೆ. ಹಾಗಿದ್ರೆ, ಇನ್ನೇಕ ತಡ ಬನ್ನಿ ಯಾವೆಲ್ಲಾ ಗ್ಯಾಜೆಟ್‌ಗಳು ಎನೆಲ್ಲಾ ಪ್ರಯೋಜನ ನೀಡಲಿವೆ ಎಂಬುದನ್ನು ನೋಡೋಣ.

ನ್ಯೂಟ್ರಿಬುಲೆಟ್ ಸ್ಟಾರ್ಟರ್ ಕಿಟ್

ನ್ಯೂಟ್ರಿಬುಲೆಟ್ ಸ್ಟಾರ್ಟರ್ ಕಿಟ್

ನ್ಯೂಟ್ರಿಬುಲೆಟ್ ಸ್ಟಾರ್ಟರ್ ಕಿಟ್ ದೇಹದ ತೂಕ ಇಳಿಸಿಕೊಳ್ಳುವವರಿಗೆ ಅವಶ್ಯಕವಾದ ಡಿವೈಸ್‌ ಆಗಿದೆ. ಈ ಮೂಲಕ ವೈದ್ಯರು ಶಿಪಾರಸ್ಸು ಮಾಡಿದ ಹಾಗೂ ನಿಮಗೆ ಅಗತ್ಯ ಎನಿಸಿದ ಹಣ್ಣಿನ ರಸ ಅಥವಾ ಸೊಪ್ಪಿನ ರಸ ಮಾಡಲು ಬಹಳ ಪ್ರಯೋಜನಕಾರಿ.

ನಿಂಜಾ ಫೂಡಿ 6-ಇನ್-1 ಮಲ್ಟಿ ಕುಕ್ಕರ್

ನಿಂಜಾ ಫೂಡಿ 6-ಇನ್-1 ಮಲ್ಟಿ ಕುಕ್ಕರ್

ಇದರಲ್ಲಿ ಹುರಿದ ಚಿಕನ್, ಸಾಟ್ ವೆಜ್, ಅಥವಾ ಎಣ್ಣೆಯ ಒಂದು ಭಾಗದೊಂದಿಗೆ ಚಿಪ್ಸ್ ಬೇಯಿಸಬಹುದಾಗಿದೆ. ಮನೆಯಲ್ಲಿ ರೆಸ್ಟೋರೆಂಟ್-ಗುಣಮಟ್ಟದ ಊಟಕ್ಕಾಗಿ ಈ ಡಿವೈಸ್‌ ಅನ್ನು ನೀವು ಬಳಕೆಮಾಡಬಹುದು.

ಸಾಲ್ಟರ್ ಆಮ್ಲೆಟ್ ಮೇಕರ್

ಸಾಲ್ಟರ್ ಆಮ್ಲೆಟ್ ಮೇಕರ್

ಪ್ರೋಟೀನ್ ಮತ್ತು ಒಮೆಗಾ-3 ಆಮ್ಲಗಳು ಸಮೃದ್ಧವಾಗಿರುವ ಆಮ್ಲೆಟ್ ಉತ್ತಮ ಆರೋಗ್ಯಕರ ಉಪಹಾರವಾಗಿದೆ. ಈ ನಾನ್-ಸ್ಟಿಕ್ ಡ್ಯುಯಲ್-ಆಕ್ಷನ್ ಗ್ಯಾಜೆಟ್‌ನೊಂದಿಗೆ ಪ್ಯಾನ್‌ನಿಂದ ಮೊಟ್ಟೆಯನ್ನು ಸ್ಕ್ರಾಬ್ ಮಾಡಲಾಗುತ್ತದೆ.

ಪ್ರೊಫೆಸನಲ್‌ ವೆಜಿಟೇಬಲ್‌ ಚೋಪರ್‌

ಪ್ರೊಫೆಸನಲ್‌ ವೆಜಿಟೇಬಲ್‌ ಚೋಪರ್‌

ಆಹಾರಕ್ಕೆ ಹೆಚ್ಚಿನ ತರಕಾರಿಗಳನ್ನು ಸೇರಿಸುವುದು ಅನಿವಾರ್ಯ. ಇದು ತರಕಾರಿಯನ್ನಷ್ಟೇ ಅಲ್ಲದೆ ಸೊಪ್ಪನ್ನು ಸಹ ಕಟ್‌ ಮಾಡುತ್ತದೆ. ಈ ಮೂಲಕ ಸುಲಭವಾಗಿ ಹಾಗೂ ವೇಗವಾಗಿ ಅಡುಗೆ ಮಾಡಲು ಸಹಾಯಕವಾಗಲಿದೆ.

ಫಿಲಿಪ್ಸ್ ವಿವಾ ಕಲೆಕ್ಷನ್ ಕಾಂಪ್ಯಾಕ್ಟ್ ಜ್ಯೂಸರ್‌

ಫಿಲಿಪ್ಸ್ ವಿವಾ ಕಲೆಕ್ಷನ್ ಕಾಂಪ್ಯಾಕ್ಟ್ ಜ್ಯೂಸರ್‌

ದೇಹವನ್ನು ಸಣ್ಣಗೆ ಮಾಡಿಕೊಳ್ಳಲು ಹಾಗೂ ಆರೋಗ್ಯವಾಗಿರಿಸಿಕೊಳ್ಳಲು ಜ್ಯೂಸ್‌ ಅನಿವಾರ್ಯ. ಇದರ ಮೂಲಕ ಹಣ್ಣು, ಸೊಪ್ಪು ಮತ್ತು ಶುಂಠಿಯ ಜ್ಯೂಸ್‌ ಮಾಡಿಕೊಂಡು ಸೇವಿಸಬಹುದಾಗಿದೆ.

ರಸ್ಸೆಲ್ ಹಾಬ್ಸ್ 3 ಟೈಯರ್ ಫುಡ್ ಸ್ಟೀಮರ್

ರಸ್ಸೆಲ್ ಹಾಬ್ಸ್ 3 ಟೈಯರ್ ಫುಡ್ ಸ್ಟೀಮರ್

ಮೂರು ಹಂತದ ಆಹಾರ ಸ್ಟೀಮರ್ ಇದಾಗಿದ್ದು, ಅನ್ನ, ತರಕಾರಿ ಮತ್ತು ಮಾಂಸಹಾರದ ಅಡುಗೆಗೆ ಇದು ಸಹಾಯಕ. ಕನಿಷ್ಠ ಶುಚಿಗೊಳಿಸುವಿಕೆಯೊಂದಿಗೆ ಗಡಿಬಿಡಿಯಿಲ್ಲದ ಊಟಕ್ಕೆ ಇದು ಅತ್ಯಗತ್ಯವಾಗಿದೆ.

ಮಾರ್ಫಿ ರಿಚರ್ಡ್ಸ್ ಕ್ಲಾರಿಟಿ ಸೂಪ್ ಮೇಕರ್

ಮಾರ್ಫಿ ರಿಚರ್ಡ್ಸ್ ಕ್ಲಾರಿಟಿ ಸೂಪ್ ಮೇಕರ್

ಸೂಪ್‌ಗಳನ್ನು ತಯಾರು ಮಾಡಲು ಈ ಡಿವೈಸ್‌ ತುಂಬಾ ಸಹಾಯಕ. ಈ ಮೂಲಕ ಯಾವುದೇ ತರಕಾರಿಯ ಹಾಗೂ ಸೊಪ್ಪಿನ ಸೂಪ್‌ ಮಾಡಿಕೊಂಡು ಅಗತ್ಯ ಸಮಯಕ್ಕೆ ಸೇವನೆ ಮಾಡಬಹುದಾಗಿದೆ.

ರಸ್ಸೆಲ್ ಹಾಬ್ಸ್ ಏರ್ ಫ್ರೈಯರ್ ಮಿನಿ ಓವನ್

ರಸ್ಸೆಲ್ ಹಾಬ್ಸ್ ಏರ್ ಫ್ರೈಯರ್ ಮಿನಿ ಓವನ್

ರಸ್ಸೆಲ್ ಹಾಬ್ಸ್ ಏರ್‌ಫ್ರೈ ಎಕ್ಸ್‌ಪ್ರೆಸ್ ಮಿನಿ ಓವನ್ ಎಲ್ಲರಿಗೂ ಅವಶ್ಯಕ ಎಂದೇ ಹೇಳಬಹುದು. ಸಸ್ಯಾಹಾರಿ ಆಹಾರ ಹಾಗೂ ಪಿಜ್ಜಾಗಳನ್ನೂ ಸಹ ಇದರಲ್ಲಿ ಇರಿಸಬಹುದಾಗಿದೆ. ಇದರೊಂದಿಗೆ ಇದು ದೊಡ್ಡ ಸಾಮರ್ಥ್ಯದ ಜೊತೆಗೆ ಏರ್ ಫ್ರೈ, ಗ್ರಿಲ್, ಬೇಕ್, ಟೋಸ್ಟ್ ಮತ್ತು ಕೀಪ್ ವಾರ್ಮ್ ಸೇರಿದಂತೆ ಐದು ಅಡುಗೆ ವಿಧಾನಗಳನ್ನು ಹೊಂದಿದೆ.

ಜೋಸೆಫ್ ಜೋಸೆಫ್ ಎಡಿಶನ್‌ ಸ್ಪೈರೊ ಕಾಂಪ್ಯಾಕ್ಟ್ 3-ಇನ್-1 ಹ್ಯಾಂಡ್-ಹೆಲ್ಡ್ ಸ್ಪೈರಲೈಜರ್

ಜೋಸೆಫ್ ಜೋಸೆಫ್ ಎಡಿಶನ್‌ ಸ್ಪೈರೊ ಕಾಂಪ್ಯಾಕ್ಟ್ 3-ಇನ್-1 ಹ್ಯಾಂಡ್-ಹೆಲ್ಡ್ ಸ್ಪೈರಲೈಜರ್

ನೀವು ಸಲಾಡ್‌ ಪ್ರಿಯರಾಗಿದ್ದರೆ ಈ ಡಿವೈಸ್‌ ತುಂಬಾನೆ ಅವಶ್ಯಕ. ಇದರಲ್ಲಿ ಸೌತೇಕಾಯಿ, ಕ್ಯಾರೇಟ್, ಮೂಲಂಗಿ ಸೇರಿದಂತೆ ಇನ್ನಿತರೆ ತರಕಾರಿಗಳನ್ನು ಸುಲಭವಾಗಿ ತುಂಡು ಮಾಡಬಹುದಾದ ಆಯ್ಕೆ ನೀಡಲಾಗಿದೆ.

ಟಾಪ್‌ಚೀಫ್ ಮಲ್ಟಿಫಂಕ್ಷನ್ ಫುಡ್ ಪ್ರೊಸೆಸರ್‌

ಟಾಪ್‌ಚೀಫ್ ಮಲ್ಟಿಫಂಕ್ಷನ್ ಫುಡ್ ಪ್ರೊಸೆಸರ್‌

ಈ ಡಿವೈಸ್‌ ನಿಮ್ಮ ಮನೆಯಲ್ಲಿದ್ದರೆ ಖಂಡಿತಾ ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳುತ್ತೀರ. ಯಾಕೆಂದರೆ ಟಾಪ್‌ಚೆಫ್ ಮಲ್ಟಿಫಂಕ್ಷನಲ್ ಫುಡ್ ಪ್ರೊಸೆಸರ್ ನಿಮಗೆ ಹಿಟ್ಟನ್ನು ಕತ್ತರಿಸಲು, ಮಿಶ್ರಣ ಮಾಡಲು, ಜ್ಯೂಸ್ ಮಾಡಲು, ಮಿಶ್ರಣ ಮಾಡಲು ಮತ್ತು ಬೆರೆಸಲು ಅನುವು ಮಾಡಿಕೊಡಲಿದ್ದು, ಆಲ್‌ರೌಂಡರ್‌ ಆಗಿ ಕೆಲಸ ಮಾಡಲಿದೆ.

Best Mobiles in India

English summary
best healthy kitchen gadgets for weight loss in 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X