2000ರೂ. ಒಳಗೆ ಲಭ್ಯವಿರುವ ಟಾಪ್ 10 ಫೀಚರ್ ಫೋನ್‌ಗಳು

|

ಸ್ಮಾರ್ಟ್‌ಫೋನ್‌ಗಳ ಉಪಯೋಗ ಈ ಕಾಲಕ್ಕೆ ಎಷ್ಟಿದೆಯೋ ಅದೇ ರೀತಿ ಕೀಪ್ಯಾಡ್‌ ಫೋನ್‌ಗಳಿಗೂ ಇದೆ. ಅದರಲ್ಲೂ ಬ್ಯಾಟರಿ ವಿಷಯ ಹಾಗೂ ಕರೆ ಮಾಡಿ ಮಾತನಾಡುವುದಕ್ಕೆ ಈ ಕೀಪ್ಯಾಡ್‌ ಫೋನ್‌ಗಳು ಬಹಳ ಅನುಕೂಲಕರವಾಗಿವೆ. ಈ ಕಾರಣಕ್ಕೆ ಬಹಳಷ್ಟು ಜನರು ಇಂದಿಗೂ ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಕೀಪ್ಯಾಡ್‌

ಹೌದು, ಕೀಪ್ಯಾಡ್‌ ಫೋನ್‌ಗಳ ಬಳಕೆ ಕಡಿಮೆಯಾದರೂ ಸಹ ಅದರ ಮೌಲ್ಯ ಮಾತ್ರ ಹಾಗೆಯೇ ಇದೆ. ಹಳ್ಳಿಗಾಡಿನ ಜನ ಅಥವಾ ವಿದ್ಯುತ್‌ ಸಂಪರ್ಕ ಇಲ್ಲದವರು ಇಂದಿಗೂ ಈ ಫೋನ್‌ಗಳ ಮೊರೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ನಾವು ಕೇವಲ 2,000ರೂ. ಒಳಗೆ ಲಭ್ಯ ಆಗುವ ಟಾಪ್‌ 10 ಫೋನ್‌ಗಳ ಬೆಲೆ ಹಾಗೂ ಕೆಲವು ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದ್ದೇವೆ, ಓದಿರಿ.

ರಿಲಯನ್ಸ್‌ ಜಿಯೋ ಫೋನ್‌

ರಿಲಯನ್ಸ್‌ ಜಿಯೋ ಫೋನ್‌

ಈ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 1,500ರೂ. ಗಳಿಗೆ ಲಭ್ಯವಾಗಲಿದೆ. 2.4 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 512 MB RAM ಹಾಗೂ 4 GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಸ್ಪ್ರೆಡ್‌ ಟರ್ಮ್ SC9820A ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್‌ 2000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.

ಸ್ಯಾಮ್‌ಸಂಗ್‌ ಗುರು ಮ್ಯೂಸಿಕ್‌ 2

ಸ್ಯಾಮ್‌ಸಂಗ್‌ ಗುರು ಮ್ಯೂಸಿಕ್‌ 2

ಈ ಪೋನ್‌ ಅನ್ನು ಅಮೆಜಾನ್‌ನಲ್ಲಿ 1,850ರೂ. ಗಳಿಗೆ ಕೊಂಡುಕೊಳ್ಳಬಹುದು. ಇದು 2.0 ಇಂಚಿನ TFT ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 800 mAh ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ. ಈ ಫೋನ್‌ 16GB ಸಾಮರ್ಥ್ಯದ ವರೆಗೆ ಎಸ್‌ಡಿ ಕಾರ್ಡ್‌ ಅನ್ನು ಬೆಂಬಲಿಸಲಿದೆ.

ಮೊಟೊ A10

ಮೊಟೊ A10

ಈ ಕೀಪ್ಯಾಡ್ ಮೊಬೈಲ್‌ ಅಮೆಜಾನ್‌ನಲ್ಲಿ 1,399ರೂ. ಗಳಿಗೆ ಲಭ್ಯ ಇದೆ. ಮೊಟೊ A10 1.8 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 1500 mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ.

ನೋಕಿಯಾ 105 ಪ್ಲಸ್

ನೋಕಿಯಾ 105 ಪ್ಲಸ್

ಈ ಮೊಬೈಲ್ ಅನ್ನು ಅಮೆಜಾನ್‌ನಲ್ಲಿ ಕೇವಲ 1,399ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 1.77 ಇಂಚಿನ TFT ಡಿಸ್‌ಪ್ಲೇ ಹೊಂದಿದೆ. ಇದು 4 MB RAM ಹಾಗೂ 4 MB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 1000 mAh ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ.

ನೋಕಿಯಾ 105 2022

ನೋಕಿಯಾ 105 2022

ನೋಕಿಯಾ 105 2022 ಫೋನ್ ಬೆಲೆ ಅಮೆಜಾನ್‌ನಲ್ಲಿ 1,299ರೂ. ಗಳಾಗಿದೆ. ಈ ಫೋನ್‌ 1.77 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 4 MB RAM ಹಾಗೂ 4 MB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ 800 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

ಮೊಟೊ A70

ಮೊಟೊ A70

ಈ ಫೋನ್‌ ಅಮೆಜಾನ್‌ನಲ್ಲಿ 1,789ರೂ. ಗಳಿಗೆ ಖರೀದಿಗೆ ಲಭ್ಯ ಇದೆ. 2.4 ಇಂಚಿನ TFT ಡಿಸ್‌ಪ್ಲೇ ಇದ್ದು, 4 MB RAM ಮತ್ತು 4 MB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ ಇದು 0.3 MP ರಿಯರ್‌ ಕ್ಯಾಮೆರಾ ಜೊತೆಗೆ 1,750 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ರಿಲಯನ್ಸ್ ಜಿಯೋಫೋನ್ 2021

ರಿಲಯನ್ಸ್ ಜಿಯೋಫೋನ್ 2021

ಈ ಫೋನ್‌ ಮಾರುಕಟ್ಟೆಯಲ್ಲಿ 1,849ರೂ. ಗಳಲ್ಲಿ ಲಭ್ಯ ಇದೆ. ಇದು 2.4 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 512 MB RAM ಹಾಗೂ 4 GB ಇಂಟರ್ನಲ್‌ ಸ್ಟೋರೇಜ್‌ ಜೊತೆಗೆ 1,500 mAh ಸಾಮರ್ಥ್ಯದ ಬ್ಯಾಟರಿ ಇರಲಿದೆ.

ನೋಕಿಯಾ 110 4G

ನೋಕಿಯಾ 110 4G

ಈ ಫೋನ್ ಅಮೆಜಾನ್‌ನಲ್ಲಿ 1,899 ರೂ. ಗಳಿಗೆ ಲಭ್ಯ ಇದೆ. 1.8 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, ಯೂನಿಸಾಕ್‌ T107 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 128 MB RAM ಹಾಗೂ 48 MB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ ಇದು 1020 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ನೋಕಿಯಾ 105 2017

ನೋಕಿಯಾ 105 2017

ಈ ಫೋನ್‌ ಅನ್ನು ನೀವು ಅಮೆಜಾನ್‌ನಲ್ಲಿ 1,000ರೂ. ಗಳಿಗೆ ಖರೀದಿ ಮಾಡಬಹುದು. ಇದು 1.8 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 4 MB ಇಂಟರ್ನಲ್‌ ಸ್ಟೋರೇಜ್‌ ಪಡೆದಿದೆ. ಇದರಲ್ಲಿ 800 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಮಾಡಲಾಗಿದೆ.

ನೋಕಿಯಾ 150

ನೋಕಿಯಾ 150

ಈ ಮೊಬೈಲ್‌ 1,950ರೂ. ಗಳಿಗೆ ಅಮೆಜಾನ್‌ನಲ್ಲಿ ಲಭ್ಯ ಇದೆ. 2.4 ಇಂಚಿನ TFT ಡಿಸ್‌ಪ್ಲೆಯು ನೋಕಿಯಾ 150ನಲ್ಲಿ ಇದ್ದು, 0.3 ಮೆಗಾಪಿಕ್ಸೆಲ್‌ನ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ 1020 mAh ಸಾಮರ್ಥ್ಯದ ಬ್ಯಾಟರಿ ಇದೆ.

Best Mobiles in India

English summary
Keypad phones are still in demand today. In this article we have given the details of some important keypad phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X