2,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಫೀಚರ್‌ ಫೋನ್‌ಗಳು!

|

ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ಇದರ ನಡುವೆಯೂ ಫೀಚರ್‌ ಫೋನ್‌ಗಳು ತಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವಿಶೇಷ ಫೀಚರ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಮೈಕ್ರೋಮ್ಯಾಕ್ಸ್‌ ಕಂಪೆನಿ ಕೂಡ ಸೇರಿದೆ. ಮೈಕ್ರೋಮ್ಯಾಕ್ಸ್‌ ಕಂಪೆನಿ ಪರಿಚಯಿಸಿರುವ ಹಲವು ಫೀಚರ್‌ಫೋನ್‌ಗಳು ಗಮನಸೆಳೆದಿವೆ. ಇದರಲ್ಲಿ 2,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಮೈಕ್ರೋಮ್ಯಾಕ್ಸ್‌ ಮೊಬೈಲ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಹೊಂದಿವೆ.

ಮೈಕ್ರೋಮ್ಯಾಕ್ಸ್‌

ಹೌದು, ಮೈಕ್ರೋಮ್ಯಾಕ್ಸ್‌ ಕಂಪೆನಿಯ ಫೀಚರ್‌ ಮೊಬೈಲ್‌ ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿವೆ. ಆಕರ್ಷಕ ವಿನ್ಯಾಸಗಳು ಮತ್ತು ಪವರ್‌ಫುಲ್‌ ಕಾರ್ಯಕ್ಷಮತೆಯ ಕಾರಣದಿಂದ ಪ್ರಸಿದ್ಧಿ ಪಡೆದುಕೊಂಡಿವೆ. ಡ್ಯುಯಲ್ ಸಿಮ್ ಹೊಂದಾಣಿಕೆ, ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡುವ ಸಾಮರ್ಥ್ಯವನ್ನು ಈ ಫೋನ್‌ಗಳು ಒಳಗೊಂಡಿವೆ. ಹಾಗಾದ್ರೆ ಕೇವಲ 2,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಮೈಕ್ರೋಮ್ಯಾಕ್ಸ್‌ ಫೀಚರ್‌ ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೊಮ್ಯಾಕ್ಸ್ X415

ಮೈಕ್ರೊಮ್ಯಾಕ್ಸ್ X415

ಮೈಕ್ರೋಮ್ಯಾಕ್ಸ್ X415 ಮೊಬೈಲ್ ಫೋನ್ ಬಜೆಟ್ ಸ್ನೇಹಿ ಫೋನ್‌ ಆಗಿದೆ. ಈ ಫೀಚರ್‌ ಫೋನ್‌ 1.8 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240 x 320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್‌ 0.08MP ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 1000mAH ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ. ಹಾಗೆಯೇ 32 MB RAM ಅನ್ನು ಹೊಂದಿದೆ. ಈ ಫೋನ್‌ 1 ವರ್ಷದ ವಾರಂಟಿಯನ್ನು ಕೂಡ ನೀಡಲಿದೆ. ಇದು ನಿಮಗೆ ಕೇವಲ 978ರೂ. ಬೆಲೆಗೆ ಲಭ್ಯವಾಗಲಿದೆ.

ಮೈಕ್ರೊಮ್ಯಾಕ್ಸ್ X818

ಮೈಕ್ರೊಮ್ಯಾಕ್ಸ್ X818

ಮೈಕ್ರೋಮ್ಯಾಕ್ಸ್‌ X818 ಫೋನ್‌ 2.8 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ ಡಿಜಿಟಲ್‌ ಕ್ಯಾಮರಾ ಹಾಗೂ ಆಟೋ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ 1450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪವರ್ ಸೇವಿಂಗ್ ಮೋಡ್ ಅನ್ನು ಕೂಡ ನೀಡಲಾಗಿದೆ. ಇದಲ್ಲದೆ ವಾಯರ್‌ಲೆಸ್‌ ಎಫ್‌ಎಂ ರೇಡಿಯೋವನ್ನು ಕೂಡ ಒಳಗೊಂಡಿದೆ. ಭಾರತದಲ್ಲಿ ಇದರ ಬೆಲೆ 1,475 ರೂ. ಆಗಿದೆ.

ಮೈಕ್ರೋಮ್ಯಾಕ್ಸ್ X513+

ಮೈಕ್ರೋಮ್ಯಾಕ್ಸ್ X513+

ಮೈಕ್ರೋಮ್ಯಾಕ್ಸ್ X513+ ಫೀಚರ್‌ ಫೋನ್‌ 1.77 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಓಎಸ್ ಸ್ಪ್ರೆಡ್ಟ್ರನ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 32 MB ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸಲಿದೆ. ಜೊತೆಗೆ 1750 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪವರ್ ಸೇವಿಂಗ್ ಮೋಡ್ ಅನ್ನು ಬೆಂಬಲಿಸಲಿದೆ. ಈ ಫೋನ್‌ FM ರೇಡಿಯೋವನ್ನು ಒಳಗೊಂಡಿದೆ. ಇನ್ನು ಡಿಜಿಟಲ್ ಕ್ಯಾಮರಾವನ್ನು ಕೂಡ ನೀಡಲಾಗಿದೆ. ಇದಲ್ಲದೆ ಆಟೋ ಕಾಲ್‌ ರೆಕಾರ್ಡಿಂಗ್ ಫೋಲ್ಡರ್ ಅನ್ನು ನೀಡಲಿದೆ. ಪ್ರಸ್ತುತ ಭಾರತದಲ್ಲಿ 1,190ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಮೈಕ್ರೊಮ್ಯಾಕ್ಸ್ X378 ಡ್ಯುಯಲ್ ಸಿಮ್

ಮೈಕ್ರೊಮ್ಯಾಕ್ಸ್ X378 ಡ್ಯುಯಲ್ ಸಿಮ್

ಮೈಕ್ರೊಮ್ಯಾಕ್ಸ್ X378 ಫೀಚರ್‌ ಫೋನ್‌ 1.77 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಪ್ರೆಡ್ಟ್ರಮ್‌ ಒಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 32MB RAM ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಫೋನ್‌ ಬ್ಲೂಟೂತ್, ಡ್ಯುಯಲ್ ಸಿಮ್, ರೇಡಿಯೋ, ಕ್ಯಾಮೆರಾ ಫೀಚರ್ಸ್‌ಗಳನ್ನು ನೀಡಲಿದೆ. ಈ ಫೀಚರ್‌ ಫೋನ್‌ 945ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಮೈಕ್ರೊಮ್ಯಾಕ್ಸ್ X778 ಮರ್ಸಾಲಾ

ಮೈಕ್ರೊಮ್ಯಾಕ್ಸ್ X778 ಮರ್ಸಾಲಾ

ಮೈಕ್ರೊಮ್ಯಾಕ್ಸ್ X778 ಮರ್ಸಾಲಾ ಫೀಚರ್‌ ಫೋನ್‌ ಸ್ಪ್ರೆಡ್ಟ್ರಮ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್‌ ಫೋನ್‌ ಟ್ಯೂನರ್ ತಂತ್ರಜ್ಞಾನವನ್ನು ಒಳಗೊಂಡಿದೆ ಈ ಫೋನ್‌ 2.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 2700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಪವರ್ ಸೇವಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದರಲ್ಲಿ ವಾಯರ್‌ಲೆಸ್ FM ರೇಡಿಯೋಯವನ್ನು ಪಡೆದುಕೊಂಡಿದೆ. ಇದಲ್ಲದೆ ಈ ಫೋನ್‌ ಡಿಜಿಟಲ್ ಕ್ಯಾಮರಾವನ್ನು ನೀಡಲಾಗಿದೆ. ಇದು ಆಟೋ ಕಾಲ್‌ ರೆಕಾರ್ಡಿಂಗ್ ಫೋಲ್ಡರ್ ಅನ್ನು ನೀಡಲಿದೆ. ಈ ಫೋನ್‌ 1,439ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Best mobile phones under 2,000 in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X