ಓಟಿಟಿ ಪ್ಲಾಟ್‌ಫಾರ್ಮ್‌ ಎಂದರೇನು?; ಹೇಗೆಲ್ಲಾ ಕೆಲಸ ಮಾಡಲಿದೆ ಗೊತ್ತಾ!?

|

ಓಟಿಟಿ ಪ್ಲಾಟ್‌ಫಾರ್ಮ್‌ಗಳು ಇತ್ತೀಚೆಗೆ ಬಹಳಷ್ಟು ವೇಗ ಪಡೆದುಕೊಂಡಿವೆ. ಅದರಲ್ಲೂ ಕೊರೊನಾ ನಂತರದ ಕಾಲದಲ್ಲಿ ಓಟಿಟಿ ವ್ಯವಸ್ಥೆ ಭಾರತದಲ್ಲಿ ಹೆಚ್ಚಾಗಿದೆ. ಈ ಸ್ಟ್ರೀಮಿಂಗ್ ಸೇವೆಗಳು ಇನ್ನೇನು ಕೆಲವು ವರ್ಷಗಳಲ್ಲಿ ಕೇಬಲ್ ಮತ್ತು ಉಪಗ್ರಹ ಆಧಾರಿತ ಟಿವಿಗಳನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಬೆಳವಣಿಗೆಗೆ ನಿದರ್ಶನ ಎಂಬಂತೆ ಈಗಾಗಲೇ ಭಾರತದಲ್ಲಿ 350 ಮಿಲಿಯನ್ ಓಟಿಟಿ ಪ್ಲಾಟ್‌ಫಾರ್ಮ್ ಬಳಕೆದಾರರಿದ್ದು, ಇನ್ನೇನು ಕೆಲವು ದಿನಗಳಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪಲಿದೆ ಎನ್ನಲಾಗಿದೆ. ಇನ್ನು 2025 ರ ವೇಳೆಗೆ ಇದರ ಆದಾಯ ಜಗತ್ತಿನಾದ್ಯಂತ 4,000 ಕೋಟಿ ರೂಪಾಯಿಗಳವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಒಟಿಟಿ

ಹೌದು, ಈ ಓಟಿಟಿ ಒಂದು ರೀತಿಯಲ್ಲಿ ವರದಾನವಾದರೂ ಸಾಂಪ್ರದಾಯಿಕ ವ್ಯವಸ್ಥೆಗಳ ಮೂಲಕ ಮನರಂಜನೆ, ಮಾಹಿತಿ ನೀಡುತ್ತಿರುವವರಿಗೆ ಸ್ವಲ್ಪ ಕಷ್ಟ ಕೊಡಲಿದೆ. ಹಾಗಿದ್ರೆ ಈ ಓಟಿಟಿ ಎಂದರೆ ಏನು?, ಇದಕ್ಕೆ ಎಷ್ಟೆಲ್ಲಾ ಹಣ ಪಾವತಿ ಮಾಡಬೇಕು?,ಭಾರತದಲ್ಲಿ ಅತ್ಯುತ್ತಮ ಓಟಿಟಿ ಪ್ಲಾಟ್‌ಫಾರ್ಮ್‌ ಯಾವುವು? ಎಂಬೆಲ್ಲಾ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಮೂಡಿದ್ದರೆ ಅದಕ್ಕೆ ನೀವು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ ಈ ಲೇಖನ ಓದಿರಿ.

ಓಟಿಟಿ ಎಂದರೇನು?

ಓಟಿಟಿ ಎಂದರೇನು?

ಓಟಿಟಿ (OTT) ಎಂದರೆ ಓವರ್ ದಿ ಟಾಪ್ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ನೀವು ಕೇಬಲ್ ಮತ್ತು ಡಿಟಿಹೆಚ್‌ ನಂತಹ ಸಾಂಪ್ರದಾಯಿಕ ವಿತರಣಾ ಜಾಲಗಳ ಬದಲಿಗೆ ಇಂಟರ್ನೆಟ್ ಮೂಲಕ ಲಭ್ಯವಿರುವ ಯಾವುದೇ ಸೇವೆಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ. ಅದರಲ್ಲಿ ಮನರಂಜನೆ ವಿಷಯಕ್ಕೆ ಹೆಚ್ಚು ಬಳಕೆ ಆಗುತ್ತಿದೆ. ಇದು ಪ್ರಮುಖವಾಗಿ ವಿಡಿಯೋ ಸ್ಟ್ರೀಮಿಂಗ್‌ಗೆ ಜನಪ್ರಿಯವಾಗಿದೆ. ಇಷ್ಟೇ ಅಲ್ಲದೆ, ಈ ಸೇವೆಯ ಮೂಲಕ ಸಂದೇಶ ರವಾನೆ ಮಾಡಬಹುದು ಜೊತೆಗೆ ಕರೆ ಮಾಡುವ ಅವಕಾಶವನ್ನೂ ಸಹ ನೀಡಲಾಗಿದೆ.

ಓಟಿಟಿ ಪ್ಲಾಟ್‌ಫಾರ್ಮ್‌‌ಗೆ ಪ್ರವೇಶ ಹೇಗೆ?

ಓಟಿಟಿ ಪ್ಲಾಟ್‌ಫಾರ್ಮ್‌‌ಗೆ ಪ್ರವೇಶ ಹೇಗೆ?

ಓಟಿಟಿ ಬಳಕೆ ಮಾಡಬೇಕು ಎಂದರೆ ಅದಕ್ಕೆ ಸುಲಭವಾದ ಮಾರ್ಗಗಳಿವೆ. ನಿಮ್ಮ ಸ್ಮಾರ್ಟ್‌ಫೋನ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಟಿವಿಗಳಲ್ಲಿ ಇಂಟರ್ನೆಟ್‌ ಸಹಾಯದಿಂದ ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಪ್ರವೇಶ ಪಡೆಯಬಹುದಾಗಿದೆ.

ಓಟಿಟಿಯ ವಿಧಗಳು

ಓಟಿಟಿಯ ವಿಧಗಳು

ಓಟಿಟಿ ಪ್ಲಾಟ್‌ಫಾರ್ಮ್‌ ಅನ್ನು ಪ್ರಮುಖವಾಗಿ ಮೂರು ವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಇದರಲ್ಲಿ,

 • *ಓಟಿಟಿ ಸಂದೇಶ ರವಾನೆ : ಈ ವಿಭಾಗದಲ್ಲಿ ನೀವು ವಾಟ್ಸಾಪ್‌, ಟೆಲಿಗ್ರಾಮ್ ಹಾಗೂ ಇನ್ನಿತರ ಸಂದೇಶ ರವಾನೆಯಾಗುವ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದು
 • *ವಾಯ್ಸ್‌ ಕಾಲಿಂಗ್ : ವಾಯ್ಸ್‌ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಎಂದೂ ಸಹ ಇದನ್ನು ಕರೆಯಲಾಗುತ್ತದೆ. ಈ ಆಯ್ಕೆ ಬಳಕೆ ಮಾಡಿಕೊಂಡು ನೀವುಫೇಸ್‌ಟೈಮ್, ಸ್ಕೈಪ್, ವಾಟ್ಸಾಪ್ ಮತ್ತು ಜೂಮ್‌ನಂತಹ ಕೆಲವು ಫೀಚರ್ಸ್‌ಗಳನ್ನು ಬಳಸಬಹುದು.
 • *ಓಟಿಟಿ ಟಿವಿ: ಇದು ಓಟಿಟಿಯ ಪ್ರಮುಖ ಕೆಲಸವಾಗಿದೆ. ಇದರಲ್ಲಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ.
 • ಉತ್ತಮ ಓಟಿಟಿ ಟೆಲಿವಿಷನ್ ಪ್ಲಾಟ್‌ಫಾರ್ಮ್‌ ಯಾವುವು?

  ಉತ್ತಮ ಓಟಿಟಿ ಟೆಲಿವಿಷನ್ ಪ್ಲಾಟ್‌ಫಾರ್ಮ್‌ ಯಾವುವು?

  ಇನ್ನು ಭಾರತದಲ್ಲಿ ಓಟಿಟಿ ಟೆಲಿವಿಷನ್ ಸೇವೆಗಳು ಬಹುಪಾಲು ಎಲ್ಲರಿಗೂ ತಿಳಿದಿಲ್ಲಾದರೂ ಲೆಕ್ಕದ ಸಂಖ್ಯೆಯಲ್ಲಿ ಮಾತ್ರ ಹೆಚ್ಚಿನ ಜನ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸೋನಿ ಲೈವ್‌, ಡಿಸ್ನಿ+ ಹಾಟ್‌ಸ್ಟಾರ್, ಅಮೆಜಾನ್‌ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್‌, ವೂಟ್‌, ಎಮ್‌ಎಕ್ಸ್‌ ಪ್ಲೇಯರ್‌, ಜೀ 5 ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಿವೆ.

  ಯಾವುದಕ್ಕೆ ಎಷ್ಟು ಶುಲ್ಕ?

  ಯಾವುದಕ್ಕೆ ಎಷ್ಟು ಶುಲ್ಕ?

  ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೆಲವು ಕಂಟೆಂಟ್‌ಗಳಿಗೆ ಮಾತ್ರ ಉಚಿತ ಅವಕಾಶ ನೀಡಲಾಗಿದ್ದು, ಬಹುಪಾಲು ಶುಲ್ಕ ಪಾವತಿ ಮಾಡಿಯೇ ಅದರಲ್ಲಿ ಸ್ಟ್ರೀಮ್‌ ಮಾಡಬೇಕಿದೆ.

  • *ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ಲಾನ್ಸ್ ನಲ್ಲಿ ಮೊಬೈಲ್‌ ಆಯ್ಕೆಯ ಒಂದು ಸ್ಕ್ರೀನ್‌ ಬಳಕೆಗೆ 499ರೂ. ಗಳು.
  • *ನೆಟ್‌ಫ್ಲಿಕ್ಸ್ ನಲ್ಲಿ ಒಂದು ತಿಂಗಳ ಸಾಮಾನ್ಯ ದರ 149 ರೂ. ಗಳಾಗಿದೆ.
  • *ಅಮೆಜಾನ್ ಪ್ರೈಮ್ ವಿಡಿಯೋ ಆಪ್‌ ಬಳಕೆಗೆ 179ರೂ. ಪಾವತಿ ಮಾಡಬೇಕಿದೆ.
  • *ಜೀ5 ಮಾಸಿಕ ಪ್ರೀಮಿಯಂ ಚಂದಾದಾರಿಕೆಯಲ್ಲಿ ಮೂರು ತಿಂಗಳಿಗೆ 399ರೂ. ಪಾವತಿ ಮಾಡಬೇಕು.
  • *ಸೋನಿ ಲೈವ್‌ನಲ್ಲಿ ಕೆಲವು ಕೆಲವು ಫೀಚರ್ಸ್‌ಗಳನ್ನು ಉಚಿತವಾಗಿ ಬಳಕೆ ಮಾಡಬಹುದು. ಉಳಿದಂತೆ ಸಾಮಾನ್ಯ ಪ್ಲಾನ್‌ಗೆ ವರ್ಷಕ್ಕೆ 299ರೂ. ನೀಡಬೇಕು.
  • *ವೂಟ್ ನಲ್ಲಿ ವರ್ಷಕ್ಕೆ ಕೇವಲ 299ರೂ. ಪಾವತಿ ಮಾಡಬೇಕಿದೆ.
  • *ಆಲ್ಟ್ ಬಾಲಾಜಿ ಆಪ್‌ಗೆ ನೀವು ಎರಡು ತಿಂಗಳ ಪ್ಲಾನ್‌ ಆಯ್ಕೆ ಮಾಡಿದರೆ 100ರೂ. ಕೊಡಬೇಕಿದೆ.
  • *ಜಿಯೋ ಸಿನಿಮಾ ಆಪ್‌ನಲ್ಲಿ ಹಲವು ಕಂಟೆಂಟ್‌ ಹಾಗೂ ವಿಡಿಯೋಗಳನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ.
  • *ಎಮ್‌ಎಕ್ಸ್‌ ಪ್ಲೇಯರ್‌ ಅನ್ನು ಸಂಪೂರ್ಣ ಉಚಿತವಾಗಿ ಬಳಕೆ ಮಾಡಬಹದಾಗಿದೆಯಾದರೂ ಇದರಲ್ಲಿ ಜಾಹಿರಾತುಗಳು ಹೆಚ್ಚಿರಲಿವೆ.
  • *ಯೂಟ್ಯೂಬ್‌ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್‌ಗಳ ಬೆಲೆ ತಿಂಗಳಿಗೆ 189ರೂ. ಆಗಿದೆ.

Best Mobiles in India

English summary
OTT platforms have gained a lot of momentum recently. Especially in the post-corona era, the OTT system has increased in India. In this article we have detailed some OTT platforms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X