ಮಕ್ಕಳಿಗೆ ಈ ಸ್ಮಾರ್ಟ್‌ವಾಚ್‌ಗಳು ಸೂಕ್ತ; ಫೀಚರ್ಸ್‌ ಹೀಗಿವೆ ನೋಡಿ!

|

ಇತ್ತೀಚೆಗೆ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ ಮೊಬೈಲ್‌ಗಳಂತೆಯೇ ಸ್ಮಾರ್ಟ್‌ವಾಚ್‌ ಗಳನ್ನು ಗ್ರಾಹಕರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಹಲವಾರು ಪ್ರಮುಖ ಸ್ಮಾರ್ಟ್‌ವಾಚ್‌ ತಯಾರಿಕ ಕಂಪೆನಿಗಳು ವಿವಿಧ ಫೀಚರ್ಸ್‌ಗಳನ್ನ ನೀಡಿ ಮಾರಾಟ ಮಾಡುತ್ತಿವೆ. ಅದರಂತೆ ಈಗ ಚಿಕ್ಕಮಕ್ಕಳಿಂದ ವಯೋಮಾನದವರು ಸಹ ಬಳಕೆ ಮಾಡಬಹುದಾದ ಸ್ಮಾರ್ಟ್‌ವಾಚ್‌ಗಳು ಲಭ್ಯ ಇವೆ.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ಗಳಲ್ಲಿ ಹಲವಾರು ಫೀಚರ್ಸ್‌ ಇರುವುದು ಎಲ್ಲರಿಗೂ ತಿಳಿದೇ ಇದೆ. ಅಂತೆಯೇ ಮಕ್ಕಳೂ ಸಹ ಧರಿಸಬಹುದಾದ ಆಯ್ಕೆಯನ್ನು ಸ್ಮಾರ್ಟ್‌ವಾಚ್‌ ತಯಾಕರ ಕಂಪೆನಿಗಳು ನೀಡಿವೆ. ಇದರಲ್ಲಿ ಕುರಿಯೋ, ಫಿಟ್‌ ಬಿಟ್, ವಿ ಟೆಕ್‌ ಸೇರಿದಂತೆ ವಿವಿಧ ಕಂಪೆನಿಗಳು ಮಕ್ಕಳಿಗಾಗಿಯೇ ಆಕರ್ಷಕ ವಾಚ್‌ಗಳನ್ನು ತಯಾರು ಮಾಡಿವೆ. ಈ ವಾಚ್‌ಗಳು ಮಕ್ಕಳ ದೈನಂದಿನ ಚಲನ-ವಲನಗಳನ್ನು ಟ್ರ್ಯಾಂಕಿಂಗ್‌ ಮಾಡುತ್ತವೆ. ಹಾಗೆಯೇ ಮೋಜಿನ ಆಟಗಳನ್ನು ಆಡಲು ಪ್ರೇರೇಪಿಸುವ ಮೂಲಕ ಮಕ್ಕಳ ಬೇಸರವನ್ನು ಹೋಗಲಾಡಿಸುತ್ತವೆ. ಹಾಗಿದ್ರೆ ಮತ್ಯಾಕೆ ತಡ, ಮಕ್ಕಳ ಸ್ಮಾರ್ಟ್‌ವಾಚ್‌ಗಳ ಬಗೆಗಿನ ಹೆಚ್ಚಿನ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಕುರಿಯೊ ವಿ 2.0 (Kurio V 2.0)

ಕುರಿಯೊ ವಿ 2.0 (Kurio V 2.0)

ಈ ಸ್ಮಾರ್ಟ್‌ವಾಚ್‌ ಅನ್ನು ಆರು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಧರಿಸಬಹುದಾಗಿದೆ. ಇದನ್ನು ಮನರಂಜನೆ ವಿಷಯದ ಬಗ್ಗೆ ಫೋಕಸ್‌ ಮಾಡಿಕೊಂಡು ರಚನೆ ಮಾಡಲಾಗಿದೆ. ಈ ವಾಚ್‌ನಲ್ಲಿ ಹಲವಾರು ಗೇಮ್‌ಗಳಿದ್ದು, ಸಿಂಗಲ್ ಮತ್ತು ಟು-ಪ್ಲೇಯರ್ ಆಟಗಳನ್ನು ಆಡಲು, ಸ್ನೇಹಿತರಿಗೆ ಸಂದೇಶ ಕಳುಹಿಸಲು, ಸಂಗೀತವನ್ನು ಆಲಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 32GB ವರೆಗೆ ಇಂಟರ್‌ ಸ್ಟೋರೇಜ್‌ನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಇದು ಅಲಾರಮ್‌/ಸ್ಟಾಪ್‌ವಾಚ್, ಕ್ಯಾಲ್ಕುಲೇಟರ್ ಮತ್ತು ಕ್ಯಾಲೆಂಡರ್‌ ಆಯ್ಕೆ ಪಡೆದಿದೆ.

ಫಿಟ್‌ಬಿಟ್ ಏಸ್ 3 (Fitbit Ace 3)

ಫಿಟ್‌ಬಿಟ್ ಏಸ್ 3 (Fitbit Ace 3)

ಈ ಮಕ್ಕಳ ಸ್ಮಾರ್ಟ್‌ವಾಚ್‌ ನ್ನು ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಬಳಕೆ ಮಾಡಬಹುದಾಗಿದ್ದು, ಈ ಸ್ಮಾರ್ಟ್‌ವಾಚ್‌ ಮಕ್ಕಳ ದೈನಂದಿನ ಚಲನ - ವಲನದ ಮೇಲೆ ನಿಗಾ ವಹಿಸುತ್ತದೆ. ಮಕ್ಕಳು ಒಂದೇ ಕಡೆ ಕುಳಿತಿದ್ದರೆ ಅವರನ್ನು ಎಚ್ಚರಿಸುತ್ತದೆ ಹಾಗೆ ಯಾವಾಗ ಮಲಗಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ. ಇದರಲ್ಲಿ 20 ಅನಿಮೇಟೆಡ್ ಗಡಿಯಾರದ ಥೀಮ್‌ಗಳಿವೆ. ಈ ಫಿಟ್‌ಬಿಟ್ ಏಸ್ 3 ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೆ ಸಂಪರ್ಕಿಸುತ್ತದೆಯಾದರೂ ಇದನ್ನು ಪೋಷಕರು ಮೇಲ್ವಿಚಾರಣೆ ಮಾಡಬಹುದಾದ ಆಯ್ಕೆ ನೀಡಲಾಗಿದೆ.

ಗಾರ್ಮಿನ್ ವಿವೋಫಿಟ್ ಜೂನಿಯರ್ 2(Garmin Vívofit Jr. 2)

ಗಾರ್ಮಿನ್ ವಿವೋಫಿಟ್ ಜೂನಿಯರ್ 2(Garmin Vívofit Jr. 2)

ಈ ಗಾರ್ಮಿನ್ ವಿವೋಫಿಟ್ ಜೂನಿಯರ್ 2 ಸ್ಮಾರ್ಟ್‌ವಾಚ್‌ನ್ನು ಸಹ ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಬಳಕೆ ಮಾಡಬಹುದು. ಇದರಲ್ಲಿ ಮಕ್ಕಳು ತಮ್ಮ ನೆಚ್ಚಿನ ಆಟಗಳನ್ನು ಆಡಬಹುದಾಗಿದೆ. ಇದರಲ್ಲಿನ ಟಾಸ್ಕ್ ಟೈಮರ್‌ಗಳು ನಿಮ್ಮ ಮಗು ಹೋಮ್‌ವರ್ಕ್ ಮತ್ತು ಇತರ ಜವಾಬ್ದಾರಿಗಳ ಮೇಲೆ ಎಚ್ಚರಿಕೆ ವಹಿಸುವಂತೆ ಮಾಡುತ್ತದೆ. ನಿದ್ರೆಯನ್ನು ಮೇಲ್ವಿಚಾರಣೆ ಮಾಡುವುದರ ಜೊತೆಗೆ ಕೆಲವು ದೈಹಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತದೆ.

ವಿ ಟೆಕ್ ಕಿಡಿಜೂಮ್ DX2 (VTech Kidizoom DX2)

ವಿ ಟೆಕ್ ಕಿಡಿಜೂಮ್ DX2 (VTech Kidizoom DX2)

ಈ ಸ್ಮಾರ್ಟ್‌ವಾಚ್‌ ಅನ್ನು ನಾಲ್ಕು ವರ್ಷದ ಮೇಲೆ ಇರುವ ಮಕ್ಕಳು ಧರಿಸಬಹುದಾಗಿದೆ. ಈ ಸಾಧನ ಮಗುವಿನ ಹೊಸ ನೆಚ್ಚಿನ ಆಟಿಕೆ ಆಗುವುದರಲ್ಲಿ ಸಂಶಯ ಇಲ್ಲ. ಅಷ್ಟೊಂದು ಮನರಂಜನೆಯ ಆಟಗಳನ್ನು ಇದರಲ್ಲಿ ಆಡಬಹುದಾಗಿದೆ. ಹಾಗೆಯೇ ಇದರಲ್ಲಿ 50 ಕ್ಕೂ ಹೆಚ್ಚು ಅನಲಾಗ್ ಮತ್ತು ಡಿಜಿಟಲ್ ವಾಚ್ ಫೇಸ್‌ಗಳು ಮತ್ತು ಸಿಲ್ಲಿ ಸೆಲ್ಫಿ ಫಿಲ್ಟರ್‌ಗಳ ಆಯ್ಕೆ ಇದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಕ್ಯಾಮೆರಾ ಆಯ್ಕೆಇದ್ದು, ವಿಡಿಯೋ ರೆಕಾರ್ಡ್‌ ಸಹ ಮಾಡಬಹುದಾಗಿದೆ. ಜೊತೆಗೆ 256MB ಸ್ಟೋರೇಜ್‌ ಆಯ್ಕೆ ಇದ್ದು, 1,600 ಫೋಟೋಗಳನ್ನು ಅಥವಾ 11 ನಿಮಿಷದ ಒಂದು ವಿಡಿಯೋವನ್ನು ಸಂಗ್ರಹಣೆ ಮಾಡಿಕೊಳ್ಳಬಹುದು.

ಫಿಟ್‌ಬಿಟ್ ಏಸ್ (Fitbit Ace)

ಫಿಟ್‌ಬಿಟ್ ಏಸ್ (Fitbit Ace)

ಈ ಸ್ಮಾರ್ಟ್‌ವಾಚ್‌ನ್ನು ಎಂಟು ವರ್ಷದ ಮೇಲಿರುವ ಮಕ್ಕಳು ಧರಿಸಬಹುದಾಗಿದೆ. ಫಿಟ್‌ಬಿಟ್ ಏಸ್ ಮಕ್ಕಳಿಗೆ ಫಿಟ್‌ನೆಸ್‌ ಮಾಹಿತಿ ಜೊತೆ ಮೋಜಿನ ಅನುಭವ ನೀಡುತ್ತದೆ. ಸಂಭ್ರಮಾಚರಣೆಯ ಸಂದೇಶಗಳು ಮತ್ತು ಸಾಧನೆಯ ಬ್ಯಾಡ್ಜ್‌ಗಳ ಆಯ್ಕೆ ಇದರಲ್ಲಿದೆ. ಈ ವಾಚ್‌ ಸ್ವಯಂಚಾಲಿತವಾಗಿ iOS ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಹೊಂದಿಕೊಳ್ಳುತ್ತದೆ. ಹಾಗೆಯೇ ಇದು 5 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

Best Mobiles in India

English summary
Smartwatch is emerging as the most wearable device lately. Now even kids can wear smartwatches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X