ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಲಾಗಿನ್‌ ಸಮಸ್ಯೆಯೇ?.. ಈ ರೀತಿ ಸರಿ ಮಾಡಿಕೊಳ್ಳಿ!

|

ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ ಅನ್ನು ಹೇಗೆ ಬಳಕೆ ಮಾಡುತ್ತೇವೆಯೋ ಅದೇ ರೀತಿ ಫೇಸ್‌ಬುಕ್‌ನ ಭಾಗವಾಗಿರುವ ಮೆಸೆಂಜರ್‌ ಬಳಕೆ ಕೂಡ ಹೆಚ್ಚಾಗಿದೆ. ಯಾಕೆಂದರೆ ಇದರಲ್ಲೂ ಸಹ ಫೋಟೋ, ವಿಡಿಯೋ ಹಾಗೂ ಟೆಕ್ಸ್ಟ್ ಮೆಸೆಜ್‌ ಕಳುಹಿಸುವ ಜೊತೆಗೆ ಕರೆ ಕೂಡ ಮಾಡಬಹುದು. ಆದರೆ, ಇದರ ಲಾಗಿನ್‌ ಪ್ರಕ್ರಿಯೆಯಲ್ಲಿ ಸಮಸ್ಯೆ ಕಂಡು ಬಂದರೆ ಪರಿಹಾರ ಹೇಗೆ ಎಂಬುದು ನಿಮಗೆ ಗೊತ್ತಾ!?

ಮೆಸೆಂಜರ್

ಹೌದು, ಮೆಸೆಂಜರ್ ಆಪ್‌ ಫೇಸ್‌ಬುಕ್‌ ಆಪ್‌ನ ಭಾಗವಾಗಿ ಕೆಲಸ ಮಾಡುತ್ತದೆ. ಆದರೆ, ಕೆಲವು ಬಾರಿ ನಿಮ್ಮ ಖಾತೆಗೆ ಲಾಗಿನ್ ಮಾಡಲು ಮೆಸೆಂಜರ್ ಅನುಮತಿ ನೀಡುವುದಿಲ್ಲ. ಇದರಿಂದ ಹಲವಾರು ಬಳಕೆದಾರರು ಈ ಮೆಸೆಂಜರ್‌ ಸಹವಾಸ ಸಾಕು ಎಂದು ವಾಟ್ಸಾಪ್‌ ಹಾಗೂ ಇನ್ನಿತರೆ ಪ್ಲಾಟ್‌ಫಾರ್ಮ್‌ ಕಡೆ ಮುಖ ಮಾಡುವುದುಂಟು. ಆದರೆ, ಯಾರಾದರೂ ಫೇಸ್‌ಬುಕ್‌ ಮೂಲಕ ಮೆಸೆಜ್‌ ಮಾಡಿದರೆ ಅದನ್ನು ಓದಲು ಮೆಸೆಂಜರ್‌ ಕಡ್ಡಾಯವಾಗಿರುವುದರಿಂದ ಸಮಸ್ಯೆಯನ್ನು ಪರಿಹರಿಸಿಕೊಂಡು ಹೇಗೆ ಲಾಗಿನ್‌ ಆಗಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಮೆಸೆಂಜರ್ ಆಪ್‌ ಅನ್ನು ಫೋರ್ಸ್‌ ಕ್ಲೋಸ್‌ ಮಾಡಿ ಮತ್ತೆ ಓಪನ್‌ ಮಾಡಿ

ಮೆಸೆಂಜರ್ ಆಪ್‌ ಅನ್ನು ಫೋರ್ಸ್‌ ಕ್ಲೋಸ್‌ ಮಾಡಿ ಮತ್ತೆ ಓಪನ್‌ ಮಾಡಿ

ಕೆಲವೊಮ್ಮೆ ಮೆಸೆಂಜರ್ ಆಪ್‌ನಲ್ಲಿ ತಾತ್ಕಾಲಿಕವಾಗಿ ಲಾಗಿನ್ ದೋಷಗಳು ಮತ್ತು ಕಾರ್ಯಕ್ಷಮತೆಯ ದೋಷ ಕಂಡುಬರುತ್ತವೆ. ಇದನ್ನು ನಿವಾರಿಸಿಕೊಳ್ಳಲು ಮೆಸೆಂಜರ್ ಆಪ್‌ ಅನ್ನು ಫೋರ್ಸ್‌ ಕ್ಲೋಸ್‌ ಮಾಡಿ ಮತ್ತೆ ಓಪನ್‌ ಮಾಡುವ ಮೂಲಕ ದೋಷ ಸರಿಪಡಿಸಿಕೊಳ್ಳಬಹುದು. ಇದರಲ್ಲಿ ಆಪ್‌ ಸಂಬಂಧಿತ ಪ್ರಕ್ರಿಯೆಗಳನ್ನು ಕೊನೆಗೊಳಿಸಿ ಹೊಸದಾಗಿ ತೆರೆದುಕೊಳ್ಳುತ್ತದೆ.

ಮೆಸೆಂಜರ್ ಆಪ್‌ ಅಪ್‌ಡೇಟ್‌ ಮಾಡಿ

ಮೆಸೆಂಜರ್ ಆಪ್‌ ಅಪ್‌ಡೇಟ್‌ ಮಾಡಿ

ಹಳೆಯ ಆವೃತ್ತಿಯ ಮೆಸೆಂಜರ್‌ ಆಪ್‌ ಬಳಕೆ ಮಾಡುತ್ತಿದ್ದರೆ ಮೆಸೆಂಜರ್ ಆಪ್‌ ನಿಮಗೆ ಸೈನ್ ಇನ್ ಮಾಡಲು ಅಥವಾ ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಇದಕ್ಕಾಗಿ ನೀವು ಹೊಸ ಆವೃತ್ತಿಗೆ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಯಾವಾಗ ಮೆಸೆಂಜರ್‌ ಆಪ್‌ನಲ್ಲಿ ನವೀಕರಣ ಕಂಡುಬರುತ್ತದೆಯೋ ಆಗ ಫೇಸ್‌ಬುಕ್‌ ನಿಮಗೆ ಶಿಫಾರಸು ಮಾಡಲಿದ್ದು, ಆ ವೇಳೆಯಲ್ಲಿಯೇ ಅಪ್‌ಡೇಟ್‌ ಮಾಡಿದರೆ ಒಳಿತು.

ಮೆಸೆಂಜರ್ ಆಪ್‌ನ ಕ್ಯಾಶ್‌(CACHE) ತೆರವುಗೊಳಿಸಿ

ಮೆಸೆಂಜರ್ ಆಪ್‌ನ ಕ್ಯಾಶ್‌(CACHE) ತೆರವುಗೊಳಿಸಿ

ಯಾವುದೇ ಆಪ್‌ ಬಳಕೆ ಮಾಡಿದಷ್ಟು ಕ್ಯಾಶ್‌ ಸ್ಟೋರೇಜ್‌ ಹೆಚ್ಚಾಗುತ್ತದೆ. ಇದರಿಂದಾಗಿ ಕಾಲಕಾಲಕ್ಕೆ ತಕ್ಕಂತೆ ಸ್ಟೋರೇಜ್‌ ಅನ್ನು ಡಿಲೀಟ್‌ ಮಾಡುವುದರಿಂದ ಲಾಗಿನ್‌ ಸಮಸ್ಯೆ ಎದುರಾಗುವುದಿಲ್ಲ. ಅದರಲ್ಲೂ ಹೆಚ್ಚಿನ ಸ್ಟೋರೇಜ್‌ ಸಮಸ್ಯೆ ಎದುರಾದರೆ ಆಪ್‌ ಜೊತೆಗೆ ಡಿವೈಸ್‌ ಸಹ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ಮೊದಲು ಮೆಸೆಂಜರ್ ಆಪ್‌ನ ಐಕಾನ್ ಮೇಲೆ ದೀರ್ಘವಾಗಿ ಒತ್ತಿ ಹಿಡಿಯಿರಿ ನಂತರ ಅಲ್ಲಿ ಕಾಣಿಸಿಕೊಳ್ಳುವ 'i' ಐಕಾನ್ ಮೇಲೆ ಟ್ಯಾಪ್ ಮಾಡಿ. ಅದರಲ್ಲಿ ಸ್ಟೋರೇಜ್‌ ಆಯ್ಕೆಗೆ ಹೋಗಿ ಅದರ ಮೇಲೆ ಟ್ಯಾಪ್‌ ಮಾಡಿ. ನಂತರ ಕ್ಲಿಯರ್‌ ಕ್ಯಾಶ್‌ ಎಂಬ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ವಿಪಿಎನ್‌ ಸಂಪರ್ಕವನ್ನು ನಿಷ್ಕ್ರಿಯಗೊಳಿಸಿ

ವಿಪಿಎನ್‌ ಸಂಪರ್ಕವನ್ನು ನಿಷ್ಕ್ರಿಯಗೊಳಿಸಿ

ಮೆಸೆಂಜರ್ ಆಪ್‌ನಲ್ಲಿ ಸೈನ್ ಇನ್ ಮಾಡುವಾಗ ವಿಪಿಎನ್‌ ಸಂಪರ್ಕ ಸಮಸ್ಯೆ ಉಂಟುಮಾಡಬಹುದು. ಯಾಕೆಂದರೆ ಈ ವಿಪಿಎನ್‌ ನಲ್ಲಿ ಫೇಸ್‌ಬುಕ್‌ಗೆ ಲೊಕೇಶನ್‌ ತಿಳಿಯುವುದಿಲ್ಲ. ಹೀಗಾಗಿ ನಿಮ್ಮ ಲಾಗಿನ್ ಪ್ರಕ್ರಿಯೆಯನ್ನು ಅದು ತಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ. ಹಾಗೆಯೇ ಲಾಗಿನ್‌ ಆದ ನಂತರ ಮತ್ತೆ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.

ಮೆಸೆಂಜರ್ ಸರ್ವರ್ ಸ್ಟೇಟಸ್‌ ಪರಿಶೀಲಿಸಿ

ಮೆಸೆಂಜರ್ ಸರ್ವರ್ ಸ್ಟೇಟಸ್‌ ಪರಿಶೀಲಿಸಿ

ಯಾವುದೇ ಇತರ ಆಪ್‌ನಂತೆ ಮೆಸೆಂಜರ್ ಸಹ ಸರ್ವರ್‌ ಆಯ್ಕೆ ಹೊಂದಿದ್ದು, ಇದು ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು Downdetector ನಂತಹ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಈ ಮೂಲಕ ಎಲ್ಲೆಲ್ಲಿ ಸಮಸ್ಯೆ ಯಾಗಿದೆ. ನಿಮ್ಮ ಭಾಗದಲ್ಲಿ ಇದರ ಸಮಸ್ಯೆ ಎಷ್ಟಿದೆ?, ಅಥವಾ ಯಾವುದೇ ಸಮಸ್ಯೆ ಇಲ್ಲ ಎನ್ನುವ ಮಾಹಿತಿ ತಿಳಿದುಬರಲಿದೆ.

ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಿ, ಪಾಸ್‌ವರ್ಡ್ ಬದಲಾಯಿಸಿ

ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಿ, ಪಾಸ್‌ವರ್ಡ್ ಬದಲಾಯಿಸಿ

ಇಷ್ಟೆಲ್ಲ ಮಾಡಿದರೂ ಇನ್ನೂ ಸಹ ಲಾಗಿನ್‌ ಪ್ರಕ್ರಿಯೆ ಯಶಸ್ವಿಯಾಗುತ್ತಿಲ್ಲ ಎಂದಾದರೆ ಮೆಸೆಂಜರ್ ಸೆಷನ್‌ಗಳಿಂದ ಲಾಗ್ ಔಟ್ ಮಾಡಿ ಹಾಗೆಯೇ ಪಾಸ್‌ವರ್ಡ್ ಅನ್ನು ಮರುಹೊಂದಿಸಿ. ಇದಕ್ಕಾಗಿ ನೀವು ಮೊದಲು ಫೇಸ್‌ಬುಕ್‌ ಖಾತೆಗೆ ಸೈನ್ ಇನ್ ಮಾಡಬೇಕಾಗುತ್ತದೆ. ಇದಾದ ಬಳಿಕ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ ಆಯ್ಕೆ ಮಾಡಿ.

ಸೆಟ್ಟಿಂಗ್‌

ನಂತರ ಅಲ್ಲಿ ಸೆಟ್ಟಿಂಗ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ಎಡ ಸೈಡ್‌ಬಾರ್‌ನಿಂದ 'ಸೆಕ್ಯೂರಿಟಿ ಆಂಡ್‌ ಲಾಗಿನ್' ಎಂಬ ಆಯ್ಕೆ ಗಮನಿಸಿ ನಂತರ ಅದನ್ನು ಟ್ಯಾಪ್‌ ಮಾಡಿ. ಈ ವಿಭಾಗದಲ್ಲಿ ಯಾವ ಸಮಯದಲ್ಲಿ ಯಾವ ಡಿವೈಸ್‌ ಮೂಲಕ ಲಾಗಿನ್‌ ಆಗಿದ್ದೀರ, ಎಷ್ಟು ಡಿವೈಸ್‌ಗಳಲ್ಲಿ ಲಾಗಿನ್‌ ಹಾಗೆಯೇ ಇದೆ ಎಂಬುದನ್ನು ತೋರಿಸುತ್ತದೆ. ಅದನ್ನು ತಿಳಿದುಕೊಂಡು ಎಲ್ಲಾ ಕಡೆ ಲಾಗ್‌ ಔಟ್‌ ಮಾಡಿ. ಮತ್ತೆ ಹೊಸದಾಗಿ ಪಾಸ್‌ವರ್ಡ್‌ ರಚಿಸಿ ಫೇಸ್‌ಬುಕ್‌ ಗೆ ಲಾಗ್‌ ಇನ್‌ ಆದ ನಂತರ ಮೆಸೆಂಜರ್‌ಗೆ ಲಾಗಿನ್ ಆಗಬಹುದು.

Best Mobiles in India

English summary
Best Ways to Fix Facebook Messenger problem.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X