Subscribe to Gizbot

ಜಿಯೋವಿನ ಹೊಸ 12 ಪ್ಲಾನ್‌ಗಳಿಂದ ಏರ್‌ಟೆಲ್, ಐಡಿಯಾಗೆ ಭಾರಿ ಎಫೆಕ್ಟ್!!..ಏನು ಗೊತ್ತಾ?

Written By:

ನೆನ್ನೆಯಷ್ಟೆ ಜಿಯೋ ಬಿಡುಗಡೆ ಮಾಡಿದ 12 ಪ್ಲಾನ್‌ಗಳು ಇತರೆ ಟೆಲಿಕಾಂಗಳ ಮೇಲೆ ಭಾರಿ ಎಫೆಕ್ಟ್ ನೀಡಿದೆ.! ಹೌದು, ಧನ್ ಧನಾ ಧನ್ ಆಫರ್ ರೀತಿಯಲ್ಲಿಯೇ ಬಹುತೇಕ ಅದೇ ಬೆಲೆಯಲ್ಲಿ ಮತ್ತೆ ಮೂರು ತಿಂಗಳ ಆಫರ್ ಬಿಡುಗಡೆ ಮಾಡಿರುವ ಜಿಯೋಯಿಂದ ಮತ್ತೆ ಟೆಲಿಕಾಂ ನಷ್ಟದತ್ತ ಮುಖಮಾಡಿದೆ.!!

ಧನ್‌ಧನಾಧನ್ ಆಫರ್ ಮುಗಿದ ಮೇಲೆ ಜಿಯೋಗೆ ರೀಚಾರ್ಜ್ ಮಾಡಿಸಬೇಕಾದ ಪ್ಲಾನ್‌ಗಳನ್ನು ಜಿಯೋ ಬಿಡುಗಡೆ ಮಾಡಿತ್ತು. ಜಿಯೋ ನೂತನ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಮುಂಬೈ ಶೇರು ಮಾರುಕಟ್ಟೆಯಲ್ಲಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಟೆಲಿಕಾಂಗಳು ಮತ್ತೆ ನಷ್ಟದತ್ತ ಮುಖಮಾಡಿವೆ.!!

ಜಿಯೋವಿನ ಹೊಸ 12 ಪ್ಲಾನ್‌ಗಳಿಂದ ಏರ್‌ಟೆಲ್, ಐಡಿಯಾಗೆ ಭಾರಿ ಎಫೆಕ್ಟ್!!..ಏನು ಗೊತ್

ಧನ್ ಧನಾ ಧನ್ ಆಫರ್ ಮುಗಿದ ನಂತರವೂ ಜಿಯೋವಿನ ಸೇವೆಗಳು ಹೆಚ್ಚು ಆಕರ್ಷಣೀಯವಾಗಿದ್ದು, ಶೇರು ಮಾರುಕಟ್ಟೆಯಲ್ಲಿ ಇತರ ಟೆಲಿಕಾಂಗಳ ಶೇರು ಬೆಲೆ ಕುಸಿಯಲು ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದು, ಒಂದೇ ದಿನದಲ್ಲಿ  ಏರ್‌ಟೆಲ್ 2.6 ಹಾಗೂ ಐಡಿಯಾ 3.5 ಪರ್ಸೆಂಟ್ ಶೇರುಗಳನ್ನು ಕಳೆದುಕೊಂಡಿವೆ.!!

ಜಿಯೋವಿನ ಹೊಸ 12 ಪ್ಲಾನ್‌ಗಳಿಂದ ಏರ್‌ಟೆಲ್, ಐಡಿಯಾಗೆ ಭಾರಿ ಎಫೆಕ್ಟ್!!..ಏನು ಗೊತ್

ಇದೇ ರೀತಿಯಲ್ಲಿ ಜಿಯೋವಿನ ಆರ್ಭಟ ಮುಂದುವರೆದರೆ ಇತರ ಟೆಲಿಕಾಂ ಕಂಪೆನಿಗಳು ಭವಿಷ್ಯದಲ್ಲಿ ಭಾರಿ ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಬರಲಿದ್ದು, ಮುಂದಿನ ಎರಡು ಮೂರು ತ್ರೈಮಾಸಿಕಗಳು ಟೆಲಿಕಾಂಗೆ ಮತ್ತೆ ಬಹುದೊಡ್ಡ ಹೊಡೆತ ನೀಡುವುದರಲ್ಲಿ ಸಂದೇಹವಿಲ್ಲ ಎಂದು ರೇಟಿಂಗ್ ಸಂಸ್ಥೆಯ ನಿತಿನ್ ಸೋನಿ ಅಭಿಪ್ರಾಯ ಪಟ್ಟಿದ್ದಾರೆ.!!

ಓದಿರಿ: ಲೀಕ್ ಆಯ್ತು ಜಿಯೋ ಫೈಬರ್ ಪ್ಲಾನ್!..ಮತ್ತೆ ನಡುಗಿದ ಟೆಲಿಕಾಂ!..ಕ್ಷಣಮಾತ್ರದಲ್ಲಿ ವೈರಲ್!!

English summary
Reliance Jio Infocomm (RJIL) yesterday announced two new plans and modified the existing Rs. 309 and Rs. 509 plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot