ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಸಹ ಮಾರಾಟ ಮಾಡಬಹುದು...!

Written By:

ಅಮೆಜಾನ್ ಬೆಂಗಳೂರಿಗರಿಗೆ ಹೊಸದೊಂದು ಕೊಡುಗೆಯನ್ನು ನೀಡುತ್ತಿದ್ದು, 'ಸೆಲ್ ಇನ್‌ಡುಷಿಯಲ್' ಎಂಬ ಹೊಸ ಆಯ್ಕೆಯನ್ನು ಹೊರ ತಂದಿದ್ದು, ನಾವು ಬಳಸಿ, ಬೇಡವಾದ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಬಹುದಾಗಿದೆ. ಈ ಸೇವೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ನಂತರ ಇತರೆ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಗುವುದು ಎನ್ನಲಾಗಿದೆ.

ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಮಾರಬಹುದು

ಹ್ಯಾಪಿ ನ್ಯೂ ಇಯರ್ ಆಫರ್ ಪ್ರಶ್ನಿಸಿದ್ದ ಟ್ರಾಯ್'ಗೆ ಉತ್ತರ ನೀಡಿದ ಜಿಯೋ: ಹೊಸ ಆಫರ್ ಬಗ್ಗೆ ಹೇಳಿದ್ದೇನು..?

ನೀವು ಮಾರಲು ಇಚ್ಚಿಸುವ ವಸ್ತುವನ್ನು ಅಮೆಜಾನ್ ಸಿಬ್ಬಂದಿಯೇ ಬಂದು ಪಡೆದುಕೊಳ್ಳಲಿದ್ದು, ಅದೇ ಮಾದರಿಯಲ್ಲಿ ನೀವು ಕೊಳ್ಳಬಯಸುವ ವಸ್ತುವನ್ನು ಅಮೆಜಾನ್ ಸಿಬ್ಬಂದಿಯೇ ನಿಮ್ಮ ಮನೆ ಮುಂದಕ್ಕೆ ತಂದು ನೀಡಲಿದ್ದಾರೆ.

ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಬಯಸುವವರಿಗಾಗಿ ಅಮೆಜಾನ್'ನಲ್ಲಿ ಬೇರೊಂದು ಪೇಜ್ ಓಪನ್ ಮಾಡಲಾಗಿದೆ. ಅಲ್ಲಿ ಸಣ್ಣದೊಂದು ಅರ್ಜಿಯನ್ನು ತುಂಬ ಬೇಕಿದೆ. ಅದಲ್ಲಿ ಮಾರಲು ಇಚ್ಚಿಸುವ ವಸ್ತುವಿನ ವಿಭಾಗ, ಯಾವ ವಸ್ತು, ಅದರ ಬೆಲೆ ಎಷ್ಟು, ಅದರ ಪೋಟೋ ಮತ್ತು ವಿಳಾಸವನ್ನು ನಮೂದಿಸ ಬೇಕಾಗಿದೆ.

ದೇಶದಲ್ಲಿ ಪ್ರಥಮವಾಗಿ ಬೆಂಗಳೂರಿನಲ್ಲಿ 4G ಸೇವೆ ಆರಂಭಿಸಿದ ಬಿಎಸ್ಎನ್ಎಲ್

ಇದಾದ ಮೇಲೆ ನೀವು ನಮೂದಿಸಿದ ವಸ್ತುವು ಆಮೆಜಾನ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಅ ವಸ್ತುವನ್ನು ಕೊಳ್ಳಲು ಬಯಸುವವರು ಅದನ್ನು ಬುಕ್ ಮಾಡಿದ ನಂತರ ಅಮೆಜಾನ್ ನಿಂದ ಈ ಮೇಲ್ ಒಂದು ಬರಲಿದೆ. ನಂತರ ಅದನ್ನು ಅಮೆಜಾನ್ ಸಿಬ್ಬಂದಿ ಬಂದು ಕೊಂಡೊಯ್ಯಲಿದ್ದಾರೆ.

ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಮಾರಬಹುದು

ನಂತರ ಆ ವಸ್ತುವನ್ನು ಕೊಂಡವರು ಯಾವುದಾರು ಕಾರಣಕ್ಕೆ ಹಿಂತಿರುಗಿಸಿದರೆ ಆಮೆಜಾನ್ ಮತ್ತೆ ಆ ವಸ್ತುವನ್ನು ನಿಮಗೆ ಹಿಂತಿರುಗಿಸಲಿದೆ. ಇದಕ್ಕೆ ಯಾವುದೇ ದರವನ್ನು ವಿಧಿಸದ ಅಮೆಜಾನ್, ಒಮ್ಮೆ ನಿಮ್ಮ ವಸ್ತು ಮಾರಾಟವಾದರೆ ನಿಮ್ಮ ಅಕೌಂಟ್ ಗೆ ಹಣವನ್ನು ವರ್ಗಾಹಿಸಲಿದ್ದು, ಅದಕ್ಕಾಗಿ ಸ್ವಲ್ಪ ಹಣವನ್ನು ಚಾರ್ಜ್ ಮಾಡಲಿದೆ. ಸಾವಿರ ರೂಗಳಿಗೆ ಹತ್ತು ರೂ ಶುಲ್ಕ ವಿಧಿಸುತ್ತದೆ.

2016ರಲ್ಲಿ ಬಿಡುಗಡೆಯಾದ ಉತ್ತಮ ಬ್ಯಾಟರಿ ಬಾಳಿಕೆಯ ಸ್ಮಾರ್ಟ್‌ಪೋನ್‌ಗಳ ಪಟ್ಟಿ

ಈ ಕೊಡುಗೆಯಲ್ಲಿ ನಿಮ್ಮ ಹಳೆಯ ಲ್ಯಾಪ್ ಟಾಪ್, ಬುಕ್, ವಿಡಿಯೋ ಗೇಮ್ಸ್, ಮೂವಿಸ್, ಮ್ಯೂಸಿಕ್ಸ್ . ಪೋನ್ ಸೇರಿದಂತೆ ಎಲ್ಲಾ ಮಾದರಿಯ ವಸ್ತುಗಳನ್ನು ಮಾರಾಟ ಮಾಡಬಹುದಾಗಿದೆ.

Read more about:
English summary
Amazon has just launched a new service called Sell as Individual, which allows you to sell your used goods. The service is currently only available in Bengaluru.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot