ಏನಿದು ಬಿಟ್‌ ಕಾಯಿನ್‌ ದಂಧೆ? ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಹಾರ ಹೇಗಿದೆ?

|

ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್‌ ಸಾಕಷ್ಟು ಸೌಂಡ್‌ ಮಾಡ್ತಿದೆ. ಭಾರತೀಯರು ಡಿಜಿಟಲ್‌ ಕರೆನ್ಸಿ ಬಿಟ್‌ ಕಾಯಿನ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿಯೇ ಬಿಟ್‌ಕಾಯಿನ್‌ ದಂಧೆ ಕೂಡ ಹೊಸ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬಿಟ್‌ಕಾಯಿನ್‌ ದಂಧೆ ನಡೆದಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ರಾಜಕೀಯ ಬಣ್ಣ ಕೂಡ ಪಡೆದುಕೊಂಡಿದೆ.

ಕ್ರಿಪ್ಟೋಕರೆನ್ಸಿ

ಹೌದು, ವಿಶ್ವದೆಲ್ಲೆಡೆ ಸೌಂಡ್‌ ಮಾಡ್ತಿರೋ ಕ್ರಿಪ್ಟೋಕರೆನ್ಸಿ ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಭಾರತದಲ್ಲಿ ಬಿಟ್‌ಕಾಯಿನ್‌ ಹೂಡಿಕೆ ಹೆಚ್ಚದಂತೆ ಅಕ್ರಮ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪೋಲಿಸರಿಂದ ಬಂಧಿಸಲ್ಪಟ್ಟ ನಂತರ ಸಾಕಷ್ಟು ವಿಚಾರಗಳು ಹೊರಬಂದಿದೆ. ಇದರ ನಡುವೆ ಸಾಕಷ್ಟು ಮಂದಿ ಬಿಟ್‌ಕಾಯಿನ್‌ ದಂಧೆ ಎಂದರೆ ಏನು? ಬಿಟ್‌ಕಾಯಿನ್‌ಗೂ ನಾವು ನೀವು ಬಳಸುವ ರೂಪಾಯಿ ಕಾಯಿನ್‌ಗೂ ಏನು ವ್ಯತ್ಯಾಸ ಅನ್ನೊ ಪ್ರಶ್ನೆ ಎಲ್ಲರಿಗೂ ಇದ್ದೆ ಇದೆ. ಇದೆಲ್ಲದಕ್ಕೂ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ?

ಬಿಟ್‌ಕಾಯಿನ್‌

ಬಿಟ್‌ಕಾಯಿನ್‌ ಅನ್ನೊದು ಕ್ರಿಪ್ಟೋಕರೆನ್ಸಿಯಲ್ಲಿ ಕಂಡುಬರುವ ಒಂದು ಆಯ್ಕೆಯಾಗಿದೆ. ಇನ್ನು ಕ್ರಿಪ್ಟೋಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ ಯಾಗಿದೆ. ಇದು ಇಂಟರ್‌ನೆಟ್‌ ಆಧಾರಿತವಾಗಿದ್ದು, ಆನ್‌ಲೈನ್‌ ಎಕ್ಸಚೇಂಜ್‌ನಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹಾಗಾಂತ ಕ್ರಿಪ್ಟೋಕರೆನ್ಸಿ ನಾಣ್ಯ ಅಥವಾ ನೋಟಿನ ರೂಪದಲ್ಲಿ ಲಭ್ಯವಾಗುವುದಿಲ್ಲ. ಇದು ಡಿಜಿಟಲ್ ರೂಪದಲ್ಲಿರುವ ಕರೆನ್ಸಿಯಾಗಿದ್ದು, ಆನ್‌ಲೈನ್‌ ವ್ಯವಹಾರಕ್ಕೆ ಮಾತ್ರ ಬಳಸಬಹುದಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಕ್ರಿಪ್ಟೋಕರೆನ್ಸಿ ರೂಪದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್‌ಗಳು ಬಿಟ್‌ಕಾಯಿನ್‌ ದಂಧೆ ಶುರುಮಾಡಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಹ್ಯಾಕರ್‌ ಶ್ರೀಕಿ ಕೂಡ ಒಬ್ಬನಾಗಿದ್ದಾನೆ.

ಬಿಟ್‌ಕಾಯಿನ್‌

ಇನ್ನು ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್‌ ಹಾಗೂ ಡಾಗಿ ಕಾಯಿನ್‌ ವಿಧದಲ್ಲಿ ಲಭ್ಯವಾಗಲಿದೆ. ಡಿಜಿಟಲ್‌ ರೂಪದಲ್ಲಿರುವ ನಿಮ್ಮ ಬಿಟ್‌ಕಾಯಿನ್‌ ಅಥವಾ ಡಾಗಿ ಕಾಯಿನ್‌ ನಗದಾಗಿ ಪರಿವರ್ತಿಸುವುದಕ್ಕೆ ಕುಡ ಹಲವು ಅವಕಾಶಗಳಿವೆ. ಫಾರಿನ್‌ ಮನಿ ಎಕ್ಸ್‌ಚೇಂಜ್‌ ಮದರಿಯಲ್ಲಿ ಬಿಟ್‌ಕಾಯಿನ್‌ ಅನ್ನು ಬೇರೆ ಬೇರೆ ವಿಧದಲ್ಲಿ ಡೆಪಾಸಿಟ್‌ ಮಾಡಿ ಕ್ಯಾಶ್‌ ರೂಪದಲ್ಲಿ ಹಣವನ್ನಯ ಬ್ಯಾಂಕ್‌ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಇದಕ್ಕೆ ಆನ್‌ಲೈನ್‌ ಮೂಲಕವೇ ವ್ಯವಹಾರ ನಡೆಸಬೇಕಾಗುತ್ತದೆ. ಇಂತಹ ಸಂದರ್ಭಗಳು ಹ್ಯಾಕರ್‌ ಪಾಲಿಗೆ ಉತ್ತಮ ಅವಕಾಶ ನೀಡುತ್ತಿದ್ದು, ಬಿಟ್‌ ಕಾಯಿನ್‌ ಅನ್ನು ತಮಗೆ ಬೇಕದಂತೆ ಹಣ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.

ಕ್ರಿಪ್ಟೋಕರೆನ್ಸಿ

ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಬ್ಲಾಕ್‌ ಚೈನ್ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುವುದಕ್ಕೆ ಹಲವು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಯಾವ ಸರ್ಕಾರ ಕೂಡ ಇಲ್ಲಿತನಕ ಭಾಗವಹಿಸಿಲ್ಲ, ವ್ಯವಹಾರ ಕೂಡ ನಡೆಸಿಲ್ಲ. ಆದರೆ ಬಿಟ್‌ ಕಾಯಿನ್‌ ದಂಧೆ ವಿಚಾರದಲ್ಲಿ ರಾಜಕಾರಣಿಗಳು ಕೂಡ ಭಾಗಿಯಾಗಿರುವ ವಿಚಾರ ಆಗಾಗ ಕೇಳಿ ಬರುತ್ತಿದೆ.

ಪಡೆದುಕೊ0ಡಿದೆ

ಭಾರತದಲ್ಲಿ ರೂಪಾಯಿಗೆ ಮೌಲ್ಯವಿದ್ದಂತೆ, ಅಂತರ್‌ ಜಾಲದಲ್ಲಿ ಡಿಜಿಟಲ್‌ ಕರೆನ್ಸಿ ಕ್ರಿಪ್ಟೋಕರೆನ್ಸಿ ಮೌಲ್ಯ ಪಡೆದುಕೊ0ಡಿದೆ. ಕಡಿಮೆ ಹೂಡಿಕೆ ಹೆಚ್ಚಿನ ಲಾಭದ ಕಾರಣಕ್ಕೆ ಭಾರತದಲ್ಲಿ ಕಬಿಟ್‌ಕಾಯಿನ್‌ ಹೂಡಿಕೆ ಜಾಸ್ತಿಯಾಗ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರ ಒಂದಿದೆ. ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್‌ ಕೇವಲ ಡಿಜಿಟಲ್‌ ಪ್ರಪಂಚಕ್ಕೆ ಮಾತ್ರ ಸೀಮಿತ. ಡಿಜಿಟಲ್‌ ರೂಪದಲ್ಲಿ ಮಾತ್ರ ವ್ಯವಹಾರ ನಡೆಸುವುದಕ್ಕೆ ಸೀಮಿತ. ಆದರೆ ಒಮ್ಮೆ ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ನಲ್ಲಿ ಮೋಸ ಹೋದರೆ ನಿಮ್ಮ ಹೂಡಿಕೆಯೆಲ್ಲಾ ಹ್ಯಾಕರ್‌ಗಳ ಪಾಲಾಗಲಿದೆ.

ಬಿಟ್‌ಕಾಯಿನ್‌

ಸದ್ಯ ಬಿಟ್‌ಕಾಯಿನ್‌ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಹ್ಯಾಕರ್‌ ಶ್ರೀಕಿ ಇಲ್ಲಿಯವರೆಗೆ 8 ಕೋಟಿ ರೂಪಾಯಿಗಿಂತ ಹೆಚ್ಚಿನ ಬಿಟ್‌ಕಾಯಿನ್‌ಗಳನ್ನು ಮಾರಾಟ ಮಾಡಿರೋದು ಕಂಡು ಬಂದಿದೆ. ಆದರೆ ಇದಕ್ಕಾಗಿ ತನ್ನ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆಯನ್ನು ಬಳಸಿಲ್ಲ ಅನ್ನೊದು ಗಮನಿಸಬೇಕಾದ ವಿಚಾರ. ಬಿಟ್‌ಕಾಯಿನ್‌ ಅನ್ನು ಕ್ಯಾಸ್‌ ಆಗಿ ಪರಿವರ್ತಿಸಲು ರಾಬಿನ್ ಎಂಬಾತನ ನೆರವು ಪಡೆದಿದ್ದು, ಆತನ ಮೂಲಕ ಶ್ರೀಕಿ 900 ಬಿಟ್‌ಕಾಯಿನ್‌ ಮಾರಾ ಮಾಡಿದ್ದಾನೆ ಎನ್ನಲಾಗಿದೆ. ಇದಲ್ಲದೆ ಶ್ರೀಕಿ ಮೆಗಾ ಮಲ್ಟಿಪ್ಲೇಯರ್ ಆನ್‌ಲೈನ್ ಗೇಮ್ ರೂನ್‌ಸ್ಕೇಪ್, ಇಂಡಿಯನ್ ಪೋಕರ್ ವೆಬ್‌ಸೈಟ್‌ಗಳು, BTC2pm.me, ಬಿಟ್‌ಕಾಯಿನ್ ಎಕ್ಸ್‌ಚೇಂಜ್, ಹ್ಯಾವ್‌ಲಾಕ್ ಇನ್ವೆಸ್ಟ್‌ಮೆಂಟ್, ಹ್ಯಾಕ್‌ ಮಾಡಿರೋದು ಬೆಳಕಿಗೆ ಬಂದಿದೆ. ಇದು ಇದೀಗ ರಾಜ್ಯ ರಾಜಕೀಯದಲ್ಲಿ ರಾಜಕೀಯ ವಿಚಾರವಾಗಿ ಮಾರ್ಪಾಟ್ಟಿದೆ.

Best Mobiles in India

Read more about:
English summary
Bitcoin scam in Karnataka: How to purchase and use bitcoin in India.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X