Subscribe to Gizbot

ಇನ್ಮುಂದೆ ಬೆಂಗಳೂರಿನ ಎಲ್ಲಾ ಬಸ್‌ಸ್ಟಾಂಡ್‌ಗಳಲ್ಲಿಯೂ ಉಚಿತ ''ಮೊಬೈಲ್ ಚಾರ್ಜಿಂಗ್'' ವ್ಯವಸ್ಥೆ!!

Written By:

ಸ್ಮಾರ್ಟ್‌ಫೋನಿನಲ್ಲಿ ಚಾರ್ಜ್ ಇಲ್ಲದಿದ್ದರೆ ಆಗುವ ಹಿಂಸೆ ನನ್ನ ಶತ್ರುವಿಗೂ ಬೇಡ ಎಂಬ ನಿರ್ಧಾರಕ್ಕೆ ನಾವು ಎಲ್ಲಾದರೂ ದೂರ ಪ್ರಯಾಣಿಸುವಾಗ ಮೊಬೈಲ್ ಚಾರ್ಜ್ ಖಾಲಿಯಾದರೆ ಅನಿಸುತ್ತದೆ. ಈ ರೀತಿ ಎಲ್ಲರಿಗೂ ಅನಿಸುವುದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಮೊಬೈಲ್ ಚಾರ್ಜ್ ಇಲ್ಲದಿದ್ದರೆ ಎಲ್ಲರಿಗೂ ಕಷ್ಟವಂತೂ ಆಗುತ್ತದೆ ಅಲ್ಲವೇ.?

ಆದರೆ, ಇನ್ಮುಂದೆ ಪ್ರಯಾಣಿಸುವಾಗ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಖಾಲಿಯಾದರೆ ಚಿಂತಿಸಬೇಕಿಲ್ಲ ಮತ್ತು ಸ್ಮಾರ್ಟ್‌ಫೋನ್ ಚಾರ್ಜ್ ಮಾಡಿಕೊಳ್ಳಲು ಖಾಸಾಗಿ ಅಂಗಡಿಯವರಿಗೆ ಹೆಚ್ಚು ಹಣ ತೆರಬೇಕಿಲ್ಲ.! ಏಕೆಂದರೆ, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಕಷ್ಟವನ್ನು ಅರಿತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗ್ರಾಹಕರಿಗೆ ಅನುಕೂಲವಾಗುವಂತಹ ಕಾರ್ಯವನ್ನು ಮಾಡಿದೆ.

ಬೆಂಗಳೂರಿನ ಬಸ್‌ಸ್ಟಾಂಡ್‌ಗಳಲ್ಲಿ ಉಚಿತ ''ಮೊಬೈಲ್ ಚಾರ್ಜಿಂಗ್'' ವ್ಯವಸ್ಥೆ!!

ಬೆಂಗಳೂರು ಮಹಾನಗರದ ಪ್ರಮುಖ ಬಸ್ ನಿಲ್ದಾಣಗಳಾದ ಶಾಂತಿನಗರ, ಮೆಜೆಸ್ಟಿಕ್, ಯಶ್ವಂತಪುರ, ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಜಾರ್ಜಿಂಗ್ ಕಿಯೋಸ್ಕ್ ಪಾಯಿಂಟ್‌ಗಳನ್ನು ಅಳವಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಈ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇನ್ನು ವೈಟ್‌‌ಫೀಲ್ಡ್ ನಿಲ್ದಾಣ, ಬನಶಂಕರಿ, ಕೆಂಗೇರಿ, ವಿಜಯನಗರ, ದೊಮ್ಮಲೂರು ಹಾಗೂ ಜಯನಗರ ಸೇರಿ ನಗರದ ಹಲವೆಡೆ ಈಗಾಗಲೇ 8 ಕ್ಕೂ ಹೆಚ್ಚು ಕಡೆಗಳಲ್ಲಿ ಕಿಯೋಸ್ಕ್ ರೀಚಾರ್ಜ್ ಸೆಂಟರ್ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಟೆಂಡರ್ ಕರೆದು ಐದು ವರ್ಷದ ಅವಧಿಗೆ ಪರವಾನಿಗೆ ನೀಡಲಾಗಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಬಸ್‌ಸ್ಟಾಂಡ್‌ಗಳಲ್ಲಿ ಉಚಿತ ''ಮೊಬೈಲ್ ಚಾರ್ಜಿಂಗ್'' ವ್ಯವಸ್ಥೆ!!

ಚಾರ್ಜಿಂಗ್ ಅವಕಾಶವಿಲ್ಲದೇ ಜನರು ಸಮಸ್ಯೆಗೀಡಾಗುವುದನ್ನು ನಾವು ನೋಡುತ್ತಿದ್ದೇವೆ. ಬಸ್‌ಸ್ಟಾಂಡ್‌ಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಡಲಿ 20 ರಿಂದ 50 ರೂ. ಹಣ ಪಡೆಯುತ್ತಿದ್ದಾರೆ. ಹಾಗಾಗಿ, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬಸ್ ನಿಲ್ದಾಣದಲ್ಲೇ ಉಚಿತವಾಗಿ ಚಾರ್ಜ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: 'ಅಪಾಯಕಾರಿ ಆಪ್' ಎಂಬ ಆರೋಪ ಹೊತ್ತಿರುವ 'ಟ್ರೂ ಕಾಲರ್' ಹೇಳಿದ್ದೇನು ಗೊತ್ತಾ?

English summary
free mobile charging service available in bangalore bus stands. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot