ಬೋಟ್‌ ಇಮ್ಮೊರ್ಟಲ್ 121 TWS ಅನಾವರಣ; RGB ಲೈಟಿಂಗ್‌ ಆಯ್ಕೆ

|

ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಹಲವು TWS ಇಯರ್‌ಪಾಡ್ಸ್‌ಗಳು ಅತ್ಯಾಕರ್ಷಕ ಶೈಲಿ ಹಾಗೂ ತಲ್ಲಣಗೊಳಿಸುವ ಫೀಚರ್ಸ್‌ನೊಂದಿಗೆ ಗ್ರಾಹಕರ ಕೈ ಸೇರುತ್ತಿದೆ. ಅದರಲ್ಲೂ ಹಲವಾರು ಪ್ರಮುಖ ಕಂಪೆನಿಗಳು ವಿವಿಧ ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಇದರ ಭಾಗವಾಗಿ ಈಗ ಬೋಟ್ ಕಂಪೆನಿಯು ಆಕರ್ಷಕವಾಗಿರುವ ಅದರಲ್ಲೂ ಯುವ ಪೀಳಿಗೆಯನ್ನು ಸೆಳೆಯುವ ಇಯರ್‌ಪಾಡ್ಸ್‌ ಅನ್ನು ಅನಾವರಣ ಮಾಡಿದೆ. ಇದು 40 ಗಂಟೆಗಳ ಪ್ಲೇ ಬ್ಯಾಕ್ ಸಮಯ ನೀಡಲಿದ್ದು, ಈ ಹೊಸ ಇಯರ್‌ಬಡ್ಸ್‌ ಏರ್‌ಡೋಪ್ಸ್‌ ಆಟೋಮ್‌ 81 ಹಾಗೂ ಏರ್‌ಡೋಪ್ಸ್‌ 100 ಇಯರ್‌ಬಡ್ಸ್‌ಗಳ ಸಾಲಿಗೆ ಸೇರಲಿದೆ.

ಬೋಟ್‌

ಹೌದು, ಭಾರತದಲ್ಲಿ ಬೋಟ್‌ ಸಂಸ್ಥೆಯು ಬೋಟ್‌ ಇಮ್ಮೊರ್ಟಲ್ 121 TWS (boAt Immortal 121 TWS) ಅನ್ನು ಅನಾವರಣ ಮಾಡಿದ್ದು, ಇದು ಕಡಿಮೆ ಲೇಟೆನ್ಸಿ ಬೀಸ್ಟ್‌ ಮೋಡ್, ಆರ್‌ಜಿಬಿ ಲೈಟಿಂಗ್ ಮೋಡ್ ಅನ್ನು ಹೊಂದಿದೆ. ಇದರ ಶೈಲಿಯಲ್ಲಿ ಇತರೆ ಇಯರ್‌ಬಡ್ಸ್‌ಗಳಿಗೆ ಹೋಲಿಕೆ ಮಾಡಿದರೆ ತುಂಬಾ ವಿ‍ಶೇಷವಾದ ರೂಪ ಪಡೆದುಕೊಂಡಿದೆ. ಹಾಗಿದ್ರೆ ಭಾರತರದಲ್ಲಿ ಇದರ ಬೆಲೆ? ಹಾಗೂ ಪ್ರಮುಖ ಫೀಚರ್ಸ್‌ ಏನೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಹೊಸ ಬೋಟ್ ಇಮ್ಮೊರ್ಟಲ್ 121 ಇಯರ್‌ಬಡ್ಸ್‌ ಮೊದಲ ಗೇಮಿಂಗ್-ಆಧಾರಿತ ಶ್ರೇಣಿಯ ಉತ್ಪನ್ನಗಳ ಪಟ್ಟಿಗೆ ಸೇರುತ್ತವೆ. ಹಾಗೆಯೇ ಇದು ಇತ್ತೀಚಿನ ಬ್ಲೂಟೂತ್ ಆವೃತ್ತಿ 5.3 ಕನೆಕ್ಟಿವಿಟಿ ಬೆಂಬಲದ ಜೊತೆಗೆ 'ಬೀಸ್ಟ್ ಮೋಡ್' ಎಂದು ಕರೆಯಲಾಗುವ 40ms ಕಡಿಮೆ ಲೇಟೆನ್ಸಿಯನ್ನು ಹೊಂದಿರುವುದು ವಿಶೇಷ.

ಕ್ವಿಕ್ ಕನೆಕ್ಟಿವಿಟಿ

ಕ್ವಿಕ್ ಕನೆಕ್ಟಿವಿಟಿ

ಈ ಇಯರ್‌ಬಡ್ಸ್ ಕೇಸ್ ಇನ್‌ಸ್ಟಾ ವೇಕ್ ಎನ್ ಪೇರ್ ತಂತ್ರಜ್ಞಾನವನ್ನು ಹೊಂದಿದೆ. ಅಂದರೆ ಇಯರ್‌ಬಡ್‌ಗಳನ್ನು ಕೇಸ್‌ನಿಂದ ಹೊರತೆಗೆದ ತಕ್ಷಣವೇ ಈಗಾಗಲೇ ನಿಮ್ಮ ಡಿವೈಸ್‌ಗೆ ಕನೆಕ್ಟ್‌ ಆಗಿಬಿಡುತ್ತದೆ. ಇದರಿಂದ ಕರೆ ಹಾಗೂ ಇನ್ನಿತರೆ ಸ್ಕ್ರೀಮಿಂಗ್‌ ವೇಳೆಯಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಡ್ರೈವರ್‌

ಈ ಇಯರ್‌ಬಡ್ಸ್‌ 10mm ಡ್ರೈವರ್‌ ಹೊಂದಿದ್ದು, ಬೋಟ್‌ನ ಸಿಗ್ನೇಚರ್ ಸೌಂಡ್ ಪ್ರೊಫೈಲ್ ಅನ್ನು ಹೊಂದಿಸಲು ಟ್ಯೂನ್ ಮಾಡಲಾಗಿದೆ. ಇದರೊಂದಿಗೆ ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲೇಶನ್ ಟೆಕ್ನಾಲಜಿ ಜೊತೆಗೆ ನಾಲ್ಕು ಮೈಕ್‌ಗಳ ಆಯ್ಕೆ ಹೊಂದಿದ್ದು, ಯಾವುದೇ ಆಡಚಣೆಯ ಸೌಂಡ್‌ ಇದ್ದರೂ ಸಹ ಕರೆಯಲ್ಲಿ ಅಥವಾ ಮೀಟಿಂಗ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು ಅಥವಾ ಮಾತನಾಡಬಹುದಾಗಿದೆ.

ಚಾರ್ಜಿಂಗ್‌ ಕೇಸ್‌ನಲ್ಲಿ ಆರ್‌ಜಿಬಿ ಲೈಟ್ಸ್‌

ಚಾರ್ಜಿಂಗ್‌ ಕೇಸ್‌ನಲ್ಲಿ ಆರ್‌ಜಿಬಿ ಲೈಟ್ಸ್‌

ಗೇಮಿಂಗ್‌ ಉದ್ದೇಶದಿಂದ ಈ ಇಯರ್‌ಬಡ್ಸ್‌ ಗಳನ್ನು ಲಾಂಚ್‌ ಮಾಡಲಾಗಿದ್ದು, ಈ ಗೇಮಿಂಗ್ ಅನುಭವಕ್ಕಾಗಿ ಚಾರ್ಜಿಂಗ್‌ ಕೇಸ್‌ ಆರ್‌ಜಿಬಿ ಲೈಟಿಂಗ್‌ ಫೀಚರ್ಸ್‌ ಪಡೆದುಕೊಂಡಿರುವುದು ವಿಶೇಷವಾಗಿದೆ. ಹಾಗೆಯೇ ಶೈಲಿ ಸಹ ಗೇಮಿಂಗ್‌ ಲೋಕದ ಟೂಲ್ಸ್‌ಗಳ ರೀತಿಯಲ್ಲಿಯೇ ಇದ್ದು, ಗೇಮರ್‌ಗಳಿಗೆ ಇನ್ನಷ್ಟು ಖುಷಿ ನೀಡಲಿದೆ. ಜೊತೆಗೆ IPX4 ರೇಟಿಂಗ್ ಅನ್ನು ಹೊಂದಿದ್ದು, ವಾಟರ್‌ ಸ್ಪ್ಲಾಶ್‌ಗಳು ಅಥವಾ ಸ್ವೆಟ್‌ ನಿರೋಧಕವಾಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಇನ್ನು ಈ ಹೊಸ ಇಯರ್‌ಬಡ್ಸ್‌ 400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 40 ಗಂಟೆಗಳ ಒಟ್ಟು ಪ್ಲೇಬ್ಯಾಕ್‌ ಟೈಮ್‌ ನೀಡಲಿದೆ. ಚಾರ್ಜಿಂಗ್‌ಗಾಗಿ ಈ ಇಯರ್‌ಬಡ್ಸ್‌ ಟೈಪ್ ಸಿ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ ಬೋಟ್‌ನ ಎಎಸ್‌ಎಪಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ 10 ನಿಮಿಷದ ಚಾರ್ಜ್ನಲ್ಲಿ 180 ನಿಮಿಷಗಳ ಪ್ಲೇಟೈಮ್‌ ನೀಡುತ್ತದೆ ಎಂದು ಬೋಟ್‌ ಹೇಳಿಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಹೊಸ ಇಯರ್‌ಬಡ್ಸ್‌ಗೆ 1,499 ರೂ. ಗಳ ಪರಿಚಯಾತ್ಮಕ ರಿಯಾಯಿತಿ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಇದು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಹಾಗೂ ಬೋಟ್‌ ವೆಬ್‌ಸೈಟ್‌ನಲ್ಲಿ ನಾಳಯಿಂದ (ಡಿಸೆಂಬರ್ 13) ಖರೀದಿಗೆ ಲಭ್ಯವಿರುತ್ತದೆ. ಅಂತೆಯೇ ಇದು ಬ್ಲ್ಯಾಕ್ ಮತ್ತು ವೈಟ್ನ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.

Best Mobiles in India

English summary
boAt Immortal 121 TWS Launch in India;RGB lighting Features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X