BSNLನಿಂದ ಪ್ರತಿದಿನ 10GB ಡೇಟಾ ಆಫರ್, ಕೇಳಿ ಕಂಗಾಲಾದ ಖಾಸಗಿ ಟೆಲಿಕಾಂಗಳು!

|

ಖಾಸಗಿ ಟೆಲಿಕಾಂಗಳು ಆಕರ್ಷಕ ಆಫರ್‌ಗಳನ್ನು ನೀಡುವ ಮೂಲಕ ದೇಶಿಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಇನ್ನು 3G ನೆಟವರ್ಕ ಹೊಂದಿದೆ ಎಂದು ಅನೇಕ ಚಂದಾದಾರರು ಮೂಗು ಮೂರಿಯುತ್ತಾರೆ. ಆದರೆ ಈಗಾಗಲೆ ಬಿಎಸ್ಎನ್ಎಲ್ ಸಹ 4G ನೆಟವರ್ಕ ಸೇವೆಯನ್ನು ಶುರುಮಾಡಿದ್ದು, ಕೆಲವು ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಬಿಎಸ್ಎನ್ಎಲ್ ಹೊಸ ಪ್ಲ್ಯಾನ್‌ಗಳ ಆಫರ್‌ಗೆ ಖಾಸಗಿ ಟೆಲಿಕಾಂಗಳು ಕಂಗಾಲಾಗಿವೆ.

ಬಿಎಸ್ಎನ್ಎಲ್ ಟೆಲಿಕಾಂ

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಇತ್ತೀಚಿಗಷ್ಟೆ ತನ್ನ 4G ನೆಟವರ್ಕ ಸೇವೆಯನ್ನು ಕೆಲವು ಆಯ್ದ ಪ್ರದೇಶಗಳಲ್ಲಿ ಶುರು ಮಾಡಿದೆ. ಹಾಗೂ ಸದ್ಯದಲ್ಲಿಯೆ ಬಿಎಸ್ಎನ್ಎಲ್ 4G ಸೇವೆಯನ್ನು ಪ್ಯಾನ್ ಇಂಡಿಯಾಗೆ ವಿಸ್ತರಿಸುವ ಯೋಜನೆ ಇದೆ ಎಂದಿದೆ. ಇದರೊಂದಿಗೆ ಎರಡು ನೂತನ 4G ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಎರಡು ಪ್ಲ್ಯಾನ್‌ಗಳು ಅಧಿಕ ಡೇಟಾ ಪ್ರಯೋಜನವನ್ನು ಹೊಂದಿರುವುದು ಇಂಟರ್ನೆಟ ಪ್ರಿಯರಿಗೆ ಖುಷಿ ಅನಿಸಲಿದೆ. ಇನ್ನು ಬಿಎಸ್ಎನ್ಎಲ್‌ನ ಹೊಸ ಪ್ಲ್ಯಾನ್ ಬೆಲೆ ಎಷ್ಟು? ಏನೆಲ್ಲಾ ಸೌಲಭ್ಯಗಳನ್ನು ಪಡೆದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬಿಎಸ್ಎನ್ಎಲ್‌ 96ರೂ. ಪ್ಲ್ಯಾನ್

ಬಿಎಸ್ಎನ್ಎಲ್‌ 96ರೂ. ಪ್ಲ್ಯಾನ್

ಬಿಎಸ್ಎನ್ಎಲ್ ಮೊದಲ 4G ಪ್ರೀಪೇಯ್ಡ್‌ ಪ್ಲ್ಯಾನ್ ಇದಾಗಿದ್ದು, ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 10GB ಡೇಟಾ ಪ್ರಯೋಜನ ಒದಗಿಸಲಿದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ವಾಯಿಸ್‌ ಕರೆಗಳು ಮತ್ತು ಎಸ್ಎಮ್ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಪೂರ್ಣ 4G ಡೇಟಾ ಸೌಲಭ್ಯ ಒಳಗೊಂಡ ಪ್ರೀಪೇಯ್ಡ್‌ ಪ್ಲ್ಯಾನ್ ಇದಾಗಿದೆ. ಈ ಪ್ಲ್ಯಾನಿನಲ್ಲಿ ಒಟ್ಟಾರೆ 280GB ಡೇಟಾ ಸಿಗಲಿದೆ.

ಬಿಎಸ್ಎನ್ಎಲ್ 236ರೂ. ಪ್ಲ್ಯಾನ್

ಬಿಎಸ್ಎನ್ಎಲ್ 236ರೂ. ಪ್ಲ್ಯಾನ್

ಬಿಎಸ್ಎನ್ಎಲ್ 236ರೂ. ಪ್ಲ್ಯಾನ್ ಸಹ 4G ಡೇಟಾ ಪ್ರೀಪೇಯ್ಡ್‌ ಪ್ಲ್ಯಾನ್ ಆಗಿದೆ. ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 10GB ಡೇಟಾ ಪ್ರಯೋಜನ ಒದಗಿಸಲಿದೆ. ಆದರೆ ಈ ಪ್ಲ್ಯಾನಿನಲ್ಲಿಯೂ ಸಹ ಯಾವುದೇ ವಾಯಿಸ್‌ ಕರೆಗಳು ಮತ್ತು ಎಸ್ಎಮ್ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಇದು ಸಹ ಪೂರ್ಣ 4G ಡೇಟಾ ಸೌಲಭ್ಯ ಒಳಗೊಂಡ ಪ್ರೀಪೇಯ್ಡ್‌ ಪ್ಲ್ಯಾನ್ ಇದಾಗಿದೆ. ಇನ್ನು ಈ ಪ್ಲ್ಯಾನಿನಲ್ಲಿ ಒಟ್ಟಾರೆ 2,360GB ಡೇಟಾ ಸಿಗಲಿದೆ.

ಬಿಎಸ್ಎನ್ಎಲ್ 4G ಎಲ್ಲೆಲ್ಲಿ ಲಭ್ಯ

ಬಿಎಸ್ಎನ್ಎಲ್ 4G ಎಲ್ಲೆಲ್ಲಿ ಲಭ್ಯ

ಬಿಎಸ್ಎನ್ಎಲ್ ಇತ್ತೀಚಿಗಷ್ಟೆ 4G ನೆಟವರ್ಕ ಸೇವೆ ಆರಂಭಿಸಿದ್ದು, ಕೆಲವು ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿ ಮಾತ್ರ 4G ಲಭ್ಯ ಮಾಡಿದೆ. ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಕೊಲ್ಕತ್ತಾ, ಮಹರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ, ಚೆನೈ ಮತ್ತು ತಮಿಳನಾಡು ಟೆಲಿಕಾಂನ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ 4G ಸೇವೆ ಲಭ್ಯವಾಗಿದೆ. ಇನ್ನು 4G ಸೇವೆ ಲಭ್ಯ ಇರುವ ಕಡೆ ಮಾತ್ರ ಈ ಎರಡು ಪ್ಲ್ಯಾನ್‌ಗಳು ಬಳಕೆದಾರರಿಗೆ ಲಭ್ಯವಾಗುತ್ತವೆ.

ಮಂಗಳೂರಿನಲ್ಲಿ 4G

ಮಂಗಳೂರಿನಲ್ಲಿ 4G

ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಜನೆವರಿ 23ರಂದು ಮಂಗಳೂರಿನಲ್ಲಿ ಅಧಿಕೃತವಾಗಿ 4G ಸೇವೆಯನ್ನು ಜಾರಿ ಮಾಡದೆ. 4G ಸಂಪರ್ಕಕ್ಕಾಗಿ ಬಿಎಸ್ಎನ್ಎಲ್ ಸುಮಾರು 151 ಟವರ್‌ಗಳನ್ನು ಉನ್ನತ ದರ್ಜೆಗೆ ಏರಿಸಿದೆ ಎಂದು ಬಿಎಸ್ಎನ್ಎಲ್ ತಿಳಿಸಿತ್ತು. ಹಾಗೆಯೇ ಸಂಸ್ಥೆಯ 4G ಸೇವೆವು ಸಂಪರ್ಕವು 2100 MHz ಸ್ಪೆಕ್ಟ್ರಮ್ ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
BSNL has launched two 4G-only plans which ship with a whopping 10GB data per day for up to 84 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X