BSNL ಈ ಸೇವೆಯನ್ನು ಆಂಭಿಸಿದರೆ ಜಿಯೋ-ಏರ್‌ಟೆಲ್ ಸೋಲು ಖಚಿತ..!
ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಭಾರಿ ಸ್ಪರ್ಧೆಯನ್ನು ನೀಡುತ್ತಿರುವ ಸರ್ಕಾರಿ ಸ್ವಾಮ್ಯದ BSNL ಶೀಘ್ರವೇ 4G ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. BSNL 3G ಸೇವೆಯನ್ನು ಇನ್ನು ಸರಿಯಾಗಿ ನೀಡದೆ ಇರುವ ಕಾರಣ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಆಡ್ ಬ್ಲಾಕ್ ಮಾಡುವುದು ಹೇಗೆ..? ಏಕೆ ಮಾಡಬೇಕು..? ತಿಳಿಯಲೇ ಬೇಕು..!
ಈ ಹಿನ್ನಲೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಮತ್ತು ಇರುವ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ 4G ಸೇವೆಯನ್ನು ಆರಂಭಿಸಲು ಮುಂದಾಗಿದೆ. ಇದಲ್ಲದೇ 5G ಸೇವೆಯನ್ನು ಆರಂಭಿಸುವ ಸಲುವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿದಿದೆ.

ಚೆನ್ನೈನಲ್ಲಿ ಮೊದಲು:
BSNL ಶೀಘ್ರವೇ 4G ಸೇವೆಯನ್ನು ಮೊದಲಿಗೆ ಚೆನ್ನೈ ಆರಂಭಿಸಲಿದೆ ಎನ್ನಲಾಗಿದೆ. ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು 4G ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ BSNL ಸಹ 4G ಸೇವೆಯನ್ನು ಆರಂಭಿಸಲಿದೆ. ವೇಗದ ಸೇವೆಯನ್ನು ನೀಡಲಿದೆ.

ಶೀಘ್ರವೇ 5G ಸೇವೆ:
ಈಗಾಗಲೇ ದೇಶದಲ್ಲಿ 5G ಸೇವೆಯನ್ನು ಆರಂಭಿಸಲು ಖಾಸಗಿ ಟೆಲಿಕಾಂ ಕಂಪನಿಗಳು ತುದಿಗಾಲಿನಲ್ಲಿ ನಿಂತುಕೊಂಡಿದ್ದು, ಈ ಹಿನ್ನಲೆಯಲ್ಲಿ BSNL ಸಹ 5G ಸೇವೆಯನ್ನು ಆರಂಭಿಸಲು ಎಲ್ಲಾ ತಯಾರಿಕೆಯನ್ನು ನಡೆಸುತ್ತಿದೆ.

BSNL ಶಕೆ ಆರಂಭ:
ಈಗಾಗಲೇ ಆಕರ್ಷಕ ಆಫರ್ ಗಳನ್ನು ನೀಡುತ್ತಿರುವ BSNL 4G ಸೇವೆಯನ್ನು ನೀಡಲಿದೆ. ಇದು BSNL ಶಕೆಯನ್ನು ಆರಂಭಿಸಲು ಸಹಾಯ ಮಾಡಲಿದೆ ಎನ್ನಲಾಗಿದೆ. ಬೇರೆ ಟೆಲಿಕಾಂ ಕಂಪನಿಗಳು ನೀಡದ BSNLನಲ್ಲಿ ಲಭ್ಯವಿರುವುದು ಇದಕ್ಕೆ ಕಾರಣವಾಗಲಿದೆ.


Click it and Unblock the Notifications








