Subscribe to Gizbot

BSNL ಭರ್ಜರಿ ಆಫರ್ಸ್..ಕೇವಲ ಒಂದೇ ತಿಂಗಳಿನಲ್ಲಿ 40 ಲಕ್ಷ ಗ್ರಾಹಕರು ಬುಟ್ಟಿಗೆ!!

Written By:

ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡುಹೊಡೆಯುತ್ತಿರುವ ಸರ್ಕಾರಿ ನಿಯಂತ್ರಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಕೇವಲ ಒಂದು ತಿಂಗಳಿನಲ್ಲಿಯೇ 4 ಮಿಲಿಯ‌ನ್ ಗ್ರಾಹಕರನ್ನು ಸೆಳೆದಿದೆ. 2018 ನೇ ಮಾರ್ಚ್ ತಿಂಗಳಿನಲ್ಲಿಯೇ 40 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಂಪೆನಿ ಚಂದಾದಾರರಾಗಿದ್ದಾರೆ ಎಂದು ಬಿಎಸ್‌ಎನ್‌ಎಲ್ ನಿರ್ದೇಶಕರಾದ ಆರ್.ಕೆ ಮಿತ್ತಲ್ ತಿಳಿಸಿದ್ದಾರೆ.

ಖಾಸಾಗಿ ಕಂಪೆನಿಗಳಿಗೆ ಪೈಪೋಟಿ ನೀಡುವಂತೆ ಬಿಎಸ್‌ಎನ್‌ಎಲ್ ಕೂಡ ಸೇವೆಗಳನ್ನು ನಿಡುತ್ತಿದ್ದು, ಉತ್ತಮ ನೆಟ್‌ವರ್ಕ್ ಜೊತೆಗೆ ಬಿಎಸ್‌ಎನ್‌ಎಲ್‌ ಸ್ಕೀಮ್ಸ್, ಆಫರ್ಸ್ ಮತ್ತು ವ್ಯಾಲ್ಯೂ ಆಡೆಡ್ ಸೇವೆಗಳಿಗೆ ಗ್ರಾಹಕರು ಮಾರುಹೋಗಿದ್ದಾರೆ. ಹಾಗಾಗಿ, ಬಿಎಸ್‌ಎನ್‌ಎಲ್‌ ಸೇವೆಗಳನ್ನು ಬಳಸಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಆರ್.ಕೆ ಮಿತ್ತಲ್ ಹೇಳಿದ್ದಾರೆ.

ಇನ್ನು ಬಿಎಸ್‌ಎನ್‌ಎಲ್ ಟೆಲಿಕಾಂಗೆ ಸೇರಿರುವ 40 ಲಕ್ಷಕ್ಕೂ ಹೆಚ್ಚು ಗ್ರಾಹಕರಲ್ಲಿ 12 ಲಕ್ಷ ಗ್ರಾಹಕರು ಇತರೆ ಟೆಲಿಕಾಂ ಕಂಪೆನಿಗಳಿಂದ ಬಿಎಸ್‌ಎನ್‌ಎಲ್‌ಗೆ ವಲಸೆ ಬಂದಿರುವ ಬಗ್ಗೆ ಬಿಎಸ್‌ಎನ್‌ಎಲ್ ಸಂಸ್ಥೆ ಮಾಹಿತಿ ನೀಡಿದೆ. ಕಂಪೆನಿ ನೀಡುತ್ತಿರುವ ಹೊಸ ಆಫರ್ಸ್‌ಗಳಿಂದಾಗಿ ಬಿಎಸ್‌ಎಸನ್‌ಎಲ್‌ಗೆ ಪೋರ್ಟ್ ಆಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.!

ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ ಬಿಎಸ್‌ಎನ್‌ಎಲ್ ನಿರ್ದೇಶಕರಾದ ಆರ್.ಕೆ ಮಿತ್ತಲ್ ಅವರು, ಗ್ರಾಹಕರಿಗೆ ಅತ್ಯುತ್ತಮ ನೆಟ್‌ವರ್ಕ್ ಮತ್ತು ಸೇವೆಗಳನ್ನು ನಿಡಲು ಬಿಎಸ್‌ಎನ್‌ಎಲ್‌ ಸಂಸ್ಥೆ ಮುಂದಾಗಿದೆ. ಭಾರೀ ಬಂಡವಾಳವನ್ನು ಬೇಡುವ ಟೆಲಿಕಾಂ ಉದ್ಯಮಕ್ಕೆ ಬಂಡವಾಳ ಹೂಡಲು ಸರ್ಕಾರವೂ ತಯಾರಾಗಿದೆ ಎಂದು ತಿಳಿಸಿದ್ದಾರೆ.!

ಓದಿರಿ: ಮೊಬೈಲ್ ಕ್ಲೋನಿಂಗ್ ಆನ್‌ಲೈನ್ ಮೋಸಕ್ಕೆ ಭಾರತ ಬೆಚ್ಚಿಬಿದ್ದಿರುವುದೇಕೆ?..ಅದಕ್ಕೆ ಪರಿಹಾರವಿದೆಯಾ?

English summary
State-owned telecom firm Bharat Sanchar Nigam Ltd on Tuesday said it added over 4 million customers in March.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot