ಬಿಎಸ್‌ಎನ್‌ಎಲ್‌ನಿಂದ FRC 47ರೂ. ಪ್ಲ್ಯಾನ್ ಲಾಂಚ್; ಪ್ರಯೋಜನಗಳೆನು?

|

ಟೆಲಿಕಾಂ ಕ್ಷೇತ್ರದಲ್ಲಿ ಕಂಪನಿಗಳ ನಡುವೆ ಸ್ಪರ್ಧಾತ್ಮಕ ವಾತಾವರಣ ಇದ್ದು, ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಂಪನಿಗಳು ಭಿನ್ನ ಕೊಡುಗೆ ಘೋಷಿಸುತ್ತಲೇ ಇರುತ್ತವೆ. ಇದಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ ಹೊರತಾಗಿಲ್ಲ. ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವಂತಹ ಹಲವು ಪ್ರೀಪೇಯ್ಡ್‌ ಯೋಜನಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಇದೀಗ ಅಗ್ಗದ ದರದಲ್ಲಿ ಫಸ್ಟ್ ರೀಚಾರ್ಜ್‌ ಯೋಜನೆಯೊಂದನ್ನು ಪರಿಚಯಿಸಿದೆ.

ಪ್ರೀಪೇಯ್ಡ್‌

ಹೌದು, ಬಿಎಸ್‌ಎನ್‌ಎಲ್‌ ಈಗ ತನ್ನ ಪ್ರೀಪೇಯ್ಡ್ ಚಂದಾದಾರರಿಗಾಗಿ 47ರೂ.ಗಳ ಹೊಸ ಫಸ್ಟ್ ರೀಚಾರ್ಜ್ (FRC) ಅನ್ನು ಪರಿಚಯಿಸಿದೆ. ಮೊದಲ ಬಾರಿ ರೀಚಾರ್ಜ್ ಮಾಡಿಸಿಕೊಳ್ಳುವ ಹೊಸ ಪ್ರೀಪೇಯ್ಡ್‌ ಗ್ರಾಹಕರಿಗೆ ಮಾತ್ರ FRC 47ರೂ. ಪ್ಲ್ಯಾನ್ ಅನ್ವಯಿಸುತ್ತದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದ್ದು, ಜೊತೆಗೆ ಆಕರ್ಷಕ ಡೇಟಾ, ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಪಡೆದಿದೆ. ಈ ಯೋಜನೆಯ ಇನ್ನಷ್ಟು ಮಾಹಿತಿಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ FRC 47ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ FRC 47ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸದಾಗಿ ಬಿಡುಗಡೆ ಮಾಡಿರುವ FRC 47ರೂ. ಪ್ಲ್ಯಾನ್ ಒಟ್ಟು 28 ದಿನಗಳ ಮಾನ್ಯತೆ ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಪ್ರಯೋಜನ ಪಡೆದಿದೆ. ಹಾಗೆಯೇ 14GB ಡೇಟಾ ಮತ್ತು ಪ್ರತಿದಿನ 100 ಎಸ್‌ಎಂಎಸ್ ಪ್ರಯೋಜನಗಳೊಂದಿಗೆ ಬರುತ್ತದೆ. ಎಂಟಿಎನ್ಎಲ್ ರೋಮಿಂಗ್ ಪ್ರದೇಶಗಳಾದ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ. ಇನ್ನು ಬಿಎಸ್‌ಎನ್‌ಎಲ್‌ ಆಕರ್ಷಕ ಪ್ರೈಸ್‌ನಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿದೆ ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಯೋಜನೆಯು 300 ನಿಮಿಷಗಳ ಆಫ್-ನೆಟ್ ವಾಯ್ಸ್ ಕರೆಗಳೊಂದಿಗೆ ಬಿಎಸ್ಎನ್ಎಲ್ ಅನಿಯಮಿತ ಆನ್-ನೆಟ್ ವಾಯ್ಸ್ ಕರೆ ನೀಡುತ್ತಿದೆ. ಹಾಗೆಯೇ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ 75GB ವರೆಗೆ ಡೇಟಾ ರೋಲ್‌ಓವರ್‌ನೊಂದಿಗೆ 25GB ಹೈಸ್ಪೀಡ್ ಡೇಟಾವನ್ನು ನೀಡುತ್ತದೆ.

399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 70GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ 210GB ವರೆಗೂ ಡೇಟಾ ರೋಲ್‌ ಓವರ್ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಯಾವುದೇ ನೆಟ್‌ವರ್ಕ್‌ಗೂ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ, ಪ್ರತಿದಿನ 100ಎಸ್‌ಎಮ್‌ಎಸ್‌ಗಳ ಪ್ರಯೋಜನಗಳನ್ನು ಈ ಯೋಜನೆಯು ಒಳಗೊಂಡಿದೆ.

798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

798ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಈ ಪೋಸ್ಟ್‌ಪೇಯ್ಡ್ ಯೋಜನೆಯು 50GB ಹೈಸ್ಪೀಡ್ ಡೇಟಾವನ್ನು ಡಾಟಾ ರೋಲ್‌ಓವರ್‌ನೊಂದಿಗೆ 150GB ವರೆಗೆ ಅನುಮತಿಸುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಬಳಕೆದಾರರಿಗೆ ಪ್ರತಿ GBಗೆ 10.24 ರೂ.ಶುಲ್ಕ ವಿಧಿಸುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯು ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ.

Most Read Articles
Best Mobiles in India

English summary
confirmed that the BSNL FRC 47 will be available for new users in Chennai and Tamil Nadu telecom circles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X