ಜಿಯೋ-ಏರ್‌ಟೆಲ್‌ ನಿಂದ ಸಾಧ್ಯವಿಲ್ಲ: BSNL ನಿಂದ LFMT ಸೇವೆ..! VoLTE ಗಿಂತಲೂ ಬೆಸ್ಟ್..!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ತನಗಳಿಗೆ ಸಾಕ್ಷಿಯಾಗಿರುವ ಜಿಯೋ, ಹೊಸ ಮಾದರಿಯಲ್ಲಿ ಸ್ಪರ್ಧೆಯನ್ನು ಹುಟ್ಟಿಹಾಕಿತ್ತು. ಜಿಯೋ ಸ್ಪರ್ಧೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡುತ್ತಿರುವ BSNL, ಹೊಸ ಮಾದರಿಯ ಸೇವೆಯೊಂದಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ ಎನ್ನಲಾಗಿದೆ. ಜಿಯೋ ನೀಡುತ್ತಿರುವ VoLTE ಸೇವೆಗೆ ಸೆಡ್ಡು ಹೊಡೆಯುವಂತೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

BSNL ನಿಂದ LFMT ಸೇವೆ..! VoLTE ಗಿಂತಲೂ ಬೆಸ್ಟ್..!

ಜಿಯೋ 3G/2G ಬಳಕೆದಾರರಿಗೆ 4G ಸೇವೆಯನ್ನು ಆಪ್ ಮೂಲಕ ಬಳಸಿಕೊಳ್ಳುವ ಅವಕಾಶ ಮಾಡಿಕೊಟ್ಟ ಮಾದರಿಯಲ್ಲಿಯೇ BSNL ಸಹ ತನ್ನ ದೂರವಾಣಿ ಸೇವೆಯನ್ನೇ ಪಡೆಯದ ಬಳಕೆದಾರರಿಗೆ ಆಪ್ ಮೂಲಕವೇ ವಿಡಿಯೋ ಮತ್ತು ಆಡಿಯೋ ಕಾಲ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ LFMT ಸೇವೆಯನ್ನು ಹೊಸದಾಗಿ ಆರಂಭಿಸಿದೆ.

ಓದಿರಿ: ದರ ಸಮರಕ್ಕೆ ಜಿಗಿದ ಟಾಟಾ ಡೊಕೊಮೊ: ಬಳಕೆದಾರರಿಗೆ ಭರ್ಜರಿ ಡೇಟಾ..!

ಏನೀದು LFMT:

ಏನೀದು LFMT:

ಲಿಮಿಟೆಡ್ ಫಿಕ್ಸೆಡ್ ಮೊಬೈಲ್ ಟೆಲಿಫೋನಿ LFMT ವಿಸ್ತೃತ ರೂಪವಾಗಿದ್ದು, ಇದರಲ್ಲಿ BSNL ಬಳಕೆದಾರರು ಆಪ್ ಮೂಲಕವೇ ವಾಯ್ಸ್ ಕರೆಗಳನ್ನು ಮತ್ತು ವಿಡಿಯೋ ಕರೆಗಳನ್ನು ಮಾಡುವ ಅವಕಾಶ ಮಾಡಿಕೊಟ್ಟಿದೆ. ಮೊದಲು ಕೇವಲ ವಾಯ್ಸ್ ಕರೆ ಮಾಡುವ ಅವಕಾಶ ನೀಡಲಾಗಿತ್ತು. ಸದ್ಯ ವಿಡಿಯೋ ಕರೆಗೂ ಅವಕಾಶ ಮಾಡಿಕೊಡಲಾಗಿದೆ.

ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ:

ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ:

ಈ ಸೇವೆಯನ್ನು BSNL ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ನೀಡಿದ್ದು, BSNL ಬ್ರಾಡ್ ಬ್ಯಾಂಡ್ ಕನೆಷನ್ ಹೊಂದಿದವರು, ಲ್ಯಾಂಡ್ ಲೈನ್ ಹೊಂದದೆ ಇರುವ ಸಂದರ್ಭದಲ್ಲಿ ಮೊಬೈಲ್ ಆಪ್ ಮೂಲಕವೇ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಬ್ರಾಂಡ್ ಬ್ಯಾಂಡ್ ನಲ್ಲಿ ಮಾತ್ರ:

ಬ್ರಾಂಡ್ ಬ್ಯಾಂಡ್ ನಲ್ಲಿ ಮಾತ್ರ:

LFMT ಸೇವೆಯನ್ನು ಪಡೆಯಲು BSNL ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆದಿರಬೇಕು ಮತ್ತು ಅದೇ ಬ್ರಾಡ್ ಬ್ಯಾಂಡಿನ ವೈ-ಫೈ ಮೂಲವೇ ಕೆನೆಷನ್ ಪಡೆದು ಆಪ್ ಮೂಲಕ ಕರೆ ಮಾಡಬಹುದಾಗಿದೆ.

ಹೆಚ್ಚು ದರವಿಲ್ಲ:

ಹೆಚ್ಚು ದರವಿಲ್ಲ:

LFMT ಸೇವೆಯನ್ನು ಬಳಸು BSNL ಯಾವುದೇ ಹೆಚ್ಚುವರಿ ದರವನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ಬಳಕೆದಾರರಿಗೆ ಬ್ರಾಡ್ ಬ್ಯಾಂಡ್ ಸೇವೆಯ ದರದಲ್ಲಿಯೇ ಕರೆ ಮಾಡುವ ವಿಡಿಯೋ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ಬೇರೆ ವಿಡಿಯೋ ಕಾಲ್‌ಗಳಿಗೆ ಹೊಡೆತ:

ಬೇರೆ ವಿಡಿಯೋ ಕಾಲ್‌ಗಳಿಗೆ ಹೊಡೆತ:

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ವಿಡಿಯೋ ಕಾಲಿಂಗ್ ಆಪ್‌ಗಳು ಕಾಣಿಸಿಕೊಂಡಿದ್ದು, ಇವುಗಳಿಗೆ LFMT ಸೇವೆಯೂ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ.

ರೂ.499ಕ್ಕೆ BSNL ಫೀಚರ್ ಫೋನ್ ಲಾಂಚ್..!

ರೂ.499ಕ್ಕೆ BSNL ಫೀಚರ್ ಫೋನ್ ಲಾಂಚ್..!

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಟೆಲಿಕಾಂ ಸೇವೆಯೊಂದಿಗೆ ಹೆಚ್ಚುವರಿ ಸೇವೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿತ್ತು. ಇದನ್ನೇ ಇತರೆ ಟೆಲಿಕಾಂ ಕಂಪನಿಗಳು ಫಾಲೋ ಮಾಡಲು ಶುರು ಮಾಡಿರುವುದು ತಿಳಿದಿರುವ ವಿಚಾರ. ಹೀಗೆಯೇ ಜಿಯೋ ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ತಮ್ಮದೇ ಫೋನ್‌ ಗಳನ್ನು ಲಾಂಚ್ ಮಾಡಲು ಮುಂದಾಗಿರುವುದನ್ನು ನಾವು ನೋಡಬಹುದಾಗಿದೆ.

ಮೊಬೈಲ್ ಮಾರುಕಟ್ಟೆ ತಲ್ಲಣ

ಮೊಬೈಲ್ ಮಾರುಕಟ್ಟೆ ತಲ್ಲಣ

ಸದ್ಯ ಸರಕಾರಿ ಸ್ವಾಮ್ಯದ BSNL ಹೊಸ ಬಳಕೆದಾರರನ್ನು ಸೆಳೆಯುವ ಸಲುವಾಗಿ ಮೊಬೈಲ್ ಫೋನ್ ತಯಾರಿಕ ಕಂಪನಿ ಡಿಟೆಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ರೂ.499ಕ್ಕೆ ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ನೊಂದಿಗೆ BSNL ಒಂದು ವರ್ಷದ ಆಫರ್ ವೊಂದನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ಮೊದಲ ಪಾಲುದಾರಿಕೆ:

ಮೊದಲ ಪಾಲುದಾರಿಕೆ:

ಮೊಬೈಲ್ ಫೋನ್ ತಯಾರಿಕ ಕಂಪನಿ ಡಿಟೆಲ್ ದೊಂದಿಗೆ BSNL ಮೊದಲ ಬಾರಿಗೆ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ಭಾರತ್ ಫೀಚರ್ ಫೋನ್ ಬಳಕೆದಾರರಿಗೆ BSNL ಉತ್ತಮ ಆಫರ್ ಗಳನ್ನು ನೀಡಿತ್ತು. ಈಗ ಇದೇ ಮಾದರಿಯಲ್ಲಿ ಡಿಟೆಲ್ D1 ಫೀಚರ್ ಫೋನ್ ಅನ್ನು ರೂ.499ಕ್ಕೆ ಮಾರಾಟ ಮಾಡುತ್ತಿದೆ.

ಡಿಟೆಲ್ D1 ಫೀಚರ್ ಫೋನ್:

ಡಿಟೆಲ್ D1 ಫೀಚರ್ ಫೋನ್:

ಮಾರುಕಟ್ಟೆಯಲ್ಲಿ ಡಿಟೆಲ್ D1 ಫೀಚರ್ ಫೋನ್ ರೂ.346ಕ್ಕೆ ಲಾಂಚ್ ಆಗಿದ್ದು, BSNL ಈ ಫೀಚರ್ ಫೋನ್ ಅನ್ನು ತನ್ನ ಒಂದು ವರ್ಷದ ಪ್ಲಾನ್‌ ನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ರೂ.499ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ರೂ.153 ಪ್ಲಾನ್ ಅನ್ನು ನೀಡಲಿದೆ.

BSNL ಪ್ಲಾನ್:

BSNL ಪ್ಲಾನ್:

ಡಿಟೆಲ್ D1 ಫೀಚರ್ ಫೋನ್ ಕೊಳ್ಳುವವರಿಗೆ BSNL ರೂ.499ಕ್ಕೆ ಮಾರಾಟವಾಗುತ್ತಿದ್ದು, ರೂ.103 ಟಾಕ್ ಟೈಮ್ ದೊರೆಯಲಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ BSN to BSNL 15 ಪೈಸೆ (ಪ್ರತಿ ನಿಮಿಷಕ್ಕೆ)ದರದಲ್ಲಿ ಕರೆ ಮಾಡಬಹುದಾಗಿದೆ. ಹಾಗೆಯೇ BSNL ನಿಂದ ಬೇರೆ ಕಂಪನಿಗಳಿಗೆ 40 ಪೈಸೆ (ಪ್ರತಿ ನಿಮಿಷಕ್ಕೆ)ದರದಲ್ಲಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಸಬ್‌ಕಾ ಸಥ್ ಸಬ್‌ಕಾ ವಿಕಾಸ್:

ಸಬ್‌ಕಾ ಸಥ್ ಸಬ್‌ಕಾ ವಿಕಾಸ್:

ಡಿಟೆಲ್ D1 ಫೀಚರ್ ಫೋನ್ ಬಿಡುಗಡೆ ಮಾಡಿರುವ BSNL ಪ್ರಧಾನಿ ಮೋದಿ ಅವರ ಹೇಳಿಕೆಯಾದ 'ಸಬ್‌ಕಾ ಸಥ್ ಸಬ್‌ಕಾ ವಿಕಾಸ್' ಅನ್ನು ಬಳಸಿಕೊಂಡಿದ್ದು, ಕಡಿಮೆ ಬೆಲೆಗೆ ಎಲ್ಲಿಗೂ ಟೆಲಿಕಾಂ ಸೇವೆಯೂ ದೊರೆಯಲಿ ಎಂಬುದೇ ಉದ್ದೇಶ ಎಂದಿದೆ.

How to Send a WhatsApp Message Without Saving the Contact in Your Phone - GIZBOT KANNADA
ಡಿಟೆಲ್ D1 ಫೀಚರ್ ಫೋನ್ ವಿಶೇಷತೆ:

ಡಿಟೆಲ್ D1 ಫೀಚರ್ ಫೋನ್ ವಿಶೇಷತೆ:

ಡಿಟೆಲ್ D1 ಫೀಚರ್ ಫೋನ್ ನಲ್ಲಿ 1.44 ಇಂಚಿನ ಮೊನೊಕ್ರೊಮ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, GSM 2G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದು ಒಂದೇ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ. ಜೊತೆಗೆ 650mAh ಬ್ಯಾಟರಿ ಮತ್ತು ಟಾರ್ಚ್ ಲೈಟ್ ಆಯ್ಕೆಯನ್ನು ಕಾಣಬಹುದಾಗಿದೆ.

IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್

IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್

ದೇಶದಲ್ಲಿ IPL ಹವಾ ಜೋರಾಗಿದೆ, ಇಂದು ರಾತ್ರಿಯಿಂದಲೇ IPL ಕಳೆಕಟ್ಟಲಿದ್ದು, ಕ್ರಿಕೆಟ್ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ತಯಾರಿಯನ್ನು ನಡೆಸಿದ್ದಾರೆ. ಈ ಬಾರಿ IPL ಪಂದ್ಯಾವಳಿಯೂ ಸಾಕಷ್ಟು ಕಳೆಕಟ್ಟಲಿದ್ದು, ಹೆಚ್ಚಿನ ಸ್ಮಾರ್ಟ್‌ಫೋನಿನಲ್ಲಿಯೇ IPL ನೋಡುವವರ ಸಂಖ್ಯೆಯೂ ಹೆಚ್ಚಾಗಲಿದೆ.

ಜಿಯೋ-ಏರ್‌ಟೆಲ್‌ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!

ಜಿಯೋ-ಏರ್‌ಟೆಲ್‌ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!

ಇದಕ್ಕೆ ಕಾರಣ ಜಿಯೋ ಎಂದರೆ ತಪ್ಪಾಗುವುದಿಲ್ಲ, IPL ನೋಡಲಿ ಎನ್ನುವ ಕಾರಣಕ್ಕೆ ಡೇಟಾ ಆಫರ್ ಕೊಟ್ಟಿತ್ತು. ಇದರ ಬೆನ್ನಲೇ ಏರ್‌ಟೆಲ್ ಉಚಿತವಾಗಿ ಹಾಟ್ ಸ್ಟಾರ್ ಸೇವೆಯನ್ನು ನೀಡಿತ್ತು. ಇದಾದ ಮೇಲೆ BSNL ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ.

BSNL ಆಫರ್:

BSNL ಆಫರ್:

ಏರ್‌ಟೆಲ್ ಮತ್ತು ಜಿಯೋ ಗಳು ತನ್ನ ಬಳಕೆದಾರರಿಗೆ ಇಷ್ಟು ದೊಡ್ಡ ಮಟ್ಟದ ಆಫರ್ ಗಳನ್ನು ನೀಡಿದ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ BSNL ಸಹ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದ್ದು, IPL ನೋಡುವ ಸಲುವಾಗಿಯೇ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಲಾಂಚ್ ಮಾಡಿದ್ದು, ಈ ಮೂಲಕ IPL ಕಿಚ್ಚಿಗೆ ಇನ್ನಷ್ಟು ಬೆಂಕಿ ಹಚ್ಚಲು ಮುಂದಾಗಿದೆ.

ರೂ.251 ಪ್ಲಾನ್:

ರೂ.251 ಪ್ಲಾನ್:

BNLS ತನ್ನ ಬಳಕೆದಾರರಿಗೆ IPL ನೋಡುವ ಸಲುವಾಗಿವೇ ರೂ.251 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 153GB ಡೇಟಾವನ್ನು ನೀಡಲು ಮುಂದಾಗಿದೆ. ಇದು ಜಿಯೋ ಆಫರ್ ಅನ್ನು ಮೀರಿಸುವಂತೆ ಇದೆ ಎನ್ನಲಾಗಿದೆ. ಈ ಆಫರ್ ನಲ್ಲಿ BSNL ಬಳಕೆದಾರರು ಪ್ರತಿ ನಿತ್ಯ 3GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಜಿಯೋ ಸಹ ಈ ಮಾದರಿಯ ಆಫರ್ ಅನ್ನು ನೀಡಲು ಸಾಧ್ಯವಾಗಿಲ್ಲ.

51 ದಿನ ವ್ಯಾಲಿಡಿಟಿ:

51 ದಿನ ವ್ಯಾಲಿಡಿಟಿ:

ಇದಲ್ಲದೇ ರೂ.251 ಪ್ಲಾನ್ ವ್ಯಾಲಿಡಿಟಿಯನ್ನು ವಿಸ್ತರಿಸಿರುವ BNSL, ತನ್ನ ಬಳಕೆದಾರರು IPL ಅನ್ನು ಆರಂಭದಿಂದ ಕೊನೆಯವರೆಗೂ ಪಂದ್ಯಾವಳಿಗಳನ್ನು ನೋಡಲಿ ಎನ್ನುವ ಕಾರಣಕ್ಕೆ ಏಪ್ರಿಲ್ 7 ರಿಂದ ಮೇ 27ರ ವೆರೆಗೆ ಒಟ್ಟು 51 ದಿನಗಳ ಕಾಲದ ವ್ಯಾಲಿಡಿಟಿಯನ್ನು ನೀಡಲಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ.

ಕರೆ ಲಾಭವಿಲ್ಲ:

ಕರೆ ಲಾಭವಿಲ್ಲ:

BSNL ಬಳಕೆದಾರರಿಗೆ ರೂ.251 ಪ್ಲಾನ್ ನಲ್ಲಿ ಕೇವಲ ಡೇಟಾವನ್ನು ಮಾತ್ರವೇ ಬಳಕೆ ನೀಡುತ್ತಿದ್ದು, ಯಾವುದೇ ಕರೆ ಮಾಡುವ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿಲ್ಲ. IPL ನೋಡುವವರಿಗೆ ಹೆಚ್ಚಿನ ಡೇಟಾವನ್ನು ಮಾತ್ರವೇ ನೀಡಲಿದೆ.

ಜಿಯೋ ಆಫರ್:

ಜಿಯೋ ಆಫರ್:

ಜಿಯೋ ಸಹ ತನ್ನ ಬಳಕೆದಾರರಿಗೆ IPL ನೋಡುವ ಸಲುವಾಗಿ ಡೇಟಾ ಆಫರ್ ಅನ್ನು ನೀಡಿದೆ. ಅಲ್ಲದೇ ಗೇಮ್ ಆಡುವ ಆಪ್ ವೊಂದನ್ನು ನೀಡಿದೆ ಜೊತೆಗೆ ಟಾಕ್ ಶೋವೊಂದನ್ನು ಆಯೋಜಿಸಿದೆ. ಒಟ್ಟಿನಲ್ಲಿ ಭರಪೂರ ಮನರಂಜನೆಯನ್ನು ನೀಡುತ್ತಿದೆ.

BSNL ನೀಡಿರುವ ಭರ್ಜರಿ IPL ಆಫರ್

BSNL ನೀಡಿರುವ ಭರ್ಜರಿ IPL ಆಫರ್

ದೇಶದಾದ್ಯಂತ ಕಿಚ್ಚುಹಚ್ಚಿಸಿರುವ ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಗಳಿಗೆ ಹೆಚ್ಚು ಡೇಟಾ ನೀಡುವಲ್ಲಿ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿಗೆ ಬಿದ್ದಿವೆ. ರಿಲಾಯನ್ಸ್ ಜಿಯೋ ಕೇವಲ 2.5 ರೂಪಾಯಿಗೆ 1 GB ಡೇಟಾ ಆಫರ್ ಪ್ರಕಟಿಸಿದ ನಂತರ ಇದೀಗ ಬಿಎಸ್‌ಎನ್‌ಎಲ್‌ ಕೂಡ ಭರ್ಜರಿ ಆಫರ್ ನೀಡಿದೆ.

51 ದಿನಗಳ ವ್ಯಾಲಿಡಿಟಿ

51 ದಿನಗಳ ವ್ಯಾಲಿಡಿಟಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ಗಾಗಿ ಕೇವಲ 258 ರೂಪಾಯಿಗಳಿಗೆ 51 ದಿನಗಳ ವ್ಯಾಲಿಡಿಟಿ ಹೊಂದಿರುವ ನೂತನ ಆಫರ್ ಅನ್ನು ಬಿಎಸ್‌ಎನ್‌ಎಲ್‌ ಬಿಡುಗಡೆ ಮಾಡಿದೆ. ಹಾಗಾಗಿ, ಬಿಎಸ್ಎನ್ಎಲ್ ಹೊಸ ಐಪಿಎಲ್ ಆಫರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಯಾವುವು ಎಂಬುದನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ರೂ. 258 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

ರೂ. 258 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

1. ಬಿಎಸ್ಎನ್ಎಲ್ ನೀಡಿರುವ ನೂತನ ರೂ. 258 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಐಪಿಎಲ್ 2018 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಜೊತೆಗೆ ದೈನಂದಿನ 3 ಜಿಬಿ ಡೇಟಾವನ್ನು ನೀಡಿದೆ. ಒಟ್ಟು 51 ದಿನಗಳ ಕಾಲ ಒಟ್ಟು 153 ಜಿಬಿಯ ಡೇಟಾವನ್ನು ಬಿಎಸ್ಎನ್ಎಲ್ ಒದಗಿಸುತ್ತಿದೆ.

ಎಪ್ರಿಲ್ 30, 2018 ರವರೆಗೆ ಮಾತ್ರ

ಎಪ್ರಿಲ್ 30, 2018 ರವರೆಗೆ ಮಾತ್ರ

ಬಿಎಸ್ಎನ್ಎಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶೇಷ ಕೊಡುಗೆ ಎಪ್ರಿಲ್ 30, 2018 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ, ಇದು ಐಪಿಎಲ್ 11 ರ ಕೊನೆಯ ದಿನವಾಗಿದೆ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ಬಿಎಸ್ಎನ್ಎಲ್ ರೂ. 258 ಯೋಜನೆಯನ್ನು ಸೀಮಿತ ಅವಧಿಯ ಕೊಡುಗೆಯಾಗಿದೆ, ಇದು ಚಂದಾದಾರರಿಗೆ ನೇರ ಐಪಿಎಲ್ ಪಂದ್ಯಗಳನ್ನು ಅತ್ಯಂತ ಆರ್ಥಿಕ ಮಟ್ಟದಲ್ಲಿ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ ಎಂದು ಬಿಎಸ್ಎನ್ಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲಾ ಪ್ರಿಪೇಯ್ಡ್ ಚಂದಾದಾರರಿಗೆ

ಎಲ್ಲಾ ಪ್ರಿಪೇಯ್ಡ್ ಚಂದಾದಾರರಿಗೆ

ದೇಶದಾದ್ಯಂತ ಬಿಎಸ್ಎನ್ಎಲ್‌ನ ಎಲ್ಲಾ ಪ್ರಿಪೇಯ್ಡ್ ಚಂದಾದಾರರಿಗೆ ಈ ನೂತನ 248 ರೂಪಾಯಿಗಳ ಬಿಎಸ್ಎನ್ಎಲ್ ಯೋಜನೆ ಲಭ್ಯವಿದೆ.

ಏರ್‌ಟೆಲ್-ಜಿಯೋಗೆ ಸೆಡ್ಡು:

ಏರ್‌ಟೆಲ್-ಜಿಯೋಗೆ ಸೆಡ್ಡು:

ಟೆಲಿಕಾಂ ವಲಯದಲ್ಲಿ ಖಾಸಗಿ ಮಾಲೀಕತ್ವದ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ BSNL, ತನ್ನ ಬಳಕೆದಾರರಿಗೆ ಹೊಸ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ತನ್ನ ಕೊಡುಗೆಯನ್ನು ಈ ಮೂಲಕ ನೀಡುತ್ತಿದೆ. ಜಿಯೋ-ಏರ್‌ಟೆಲ್ ಆಫರ್‌ಗಳಿಗೆ ಸೆಡ್ಡು ಹೊಡೆಯುವಂತಿದೆ BSNL ನೀಡಿರುವ ಹೊಸ ಆಫರ್.

BSNL ಕೊಟ್ಟ ಬಂಪರ್ ಆಫರ್ ಇದು..!

BSNL ಕೊಟ್ಟ ಬಂಪರ್ ಆಫರ್ ಇದು..!

ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ಆಕರ್ಷಕ ಆಫರ್ ನೀಡುತ್ತಿರುವ ಸಂದರ್ಭದಲ್ಲಿ BSNL, ಪೋಸ್ಟ್‌ಪೇಯ್ಡ್ ಬಳಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಆಫರ್ ವೊಂದನ್ನು ನೀಡಿದೆ. ಸದ್ಯ ಏರ್‌ಟೆಲ್ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ನೀಡುವ ಆಫರ್ ಅನ್ನು ಮೀರಿಸುವಂತೆ ಇದೆ BSNL ನೀಡಿರುವ ರೂ.499 ಪ್ಲಾನ್.

BNSL ಪೋಸ್ಟ್‌ಪೇಯ್ಡ್:

BNSL ಪೋಸ್ಟ್‌ಪೇಯ್ಡ್:

ಪೋಸ್ಟ್‌ಪೇಯ್ಡ್‌ ಬಳಕೆದಾರರು ನೆಟ್‌ವರ್ಕ್‌ ಬಿಟ್ಟು ಹೋಗುವದಿಲ್ಲ ಎನ್ನುವುದನ್ನು ತಿಳಿದಿರುವ ಟೆಲಿಕಾಂ ಕಂಪನಿಗಳು ಹೆಚ್ಚಾಗಿ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಆಫರ್‌ಗಳನ್ನು ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ರೂ.499 ಪ್ಲಾನ್‌ ಘೋಷಣೆಯನ್ನು ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚು ಡೇಟಾ- ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಹೆಚ್ಚುವರಿ ಡೇಟಾ ಆಫರ್:

ಹೆಚ್ಚುವರಿ ಡೇಟಾ ಆಫರ್:

BSNL ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡಿರುವ ಬೆಸ್ಟ್‌ ಆಫರ್ ಇದಾಗಿದ್ದು, ಇದರಲ್ಲಿ ಪ್ರತಿ ತಿಂಗಳು 45GB ಡೇಟಾವನ್ನು ಹೆಚ್ಚಿನ ವೇಗದಲ್ಲಿ ನೀಡಲಿದೆ. ಬೇರೆ ಯಾವುದೇ ನೆಟ್‌ವರ್ಕ್‌ಗಳು ಇಷ್ಟು ಪ್ರಮಾಣದ ಡೇಟಾವನ್ನು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿಲ್ಲ ಎನ್ನಬಹುದು.

ಕರೆ ಮಾಡಲು ಯಾವುದೇ ಮಿತಿಗಳಿಲ್ಲ:

ಕರೆ ಮಾಡಲು ಯಾವುದೇ ಮಿತಿಗಳಿಲ್ಲ:

BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿರುವ ಈ ಹೊಸ ಆಫರ್ ನಲ್ಲಿ ಕರೆ ಮಾಡಲು ಯಾವುದೇ ಮಿತಿಗಳನ್ನು ನೀಡಿಲ್ಲ. ಬದಲಾಗಿ ಬಳಕೆದಾರರು ಯಾವುದೇ ಮಿತಿ ಇಲ್ಲದೇ ಕರೆಗಳನ್ನು ಉಚಿತವಾಗಿ ಮಾಡಬಹುದಾಗಿದೆ. ಅಲ್ಲದೇ ರೋಮಿಂಗ್ ಕರೆಗಳು ಸಹ ಉಚಿತವಾಗಿದೆ ಎನ್ನಲಾಗಿದೆ.

ಉಚಿತ SMS

ಉಚಿತ SMS

ಇದಲ್ಲದೇ ರೂ.499 ರಿಚಾರ್ಜ್ ಮಾಡಿಸಿಕೊಳ್ಳುವ BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಪ್ರತಿ ನಿತ್ಯ 100 SMS ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಬೆಸ್ಟ್ ಆಫರ್:

ಬೆಸ್ಟ್ ಆಫರ್:

BSNL ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡುತ್ತಿರುವ ಬೆಸ್ಟ್‌ ಆಫರ್ ಇದಾಗಿದೆ. ಇದರಲ್ಲಿ ಬಳೆಕದಾರರು ಹೆಚ್ಚು ಡೇಟಾವನ್ನು ಪಡೆಯುವ ಮತ್ತು ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಉತ್ತಮ ಆಫರ್‌ಗಾಗಿ ಬೇರೆ ನೆಟ್‌ವರ್ಕ್‌ಗಳನ್ನು ಹುಡುಕುವುದು ತಪ್ಪಲಿದೆ.

Best Mobiles in India

English summary
BSNL Launches Video Calling Facility for the LFMT Service. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X