Subscribe to Gizbot

BSNL ನೊಂದಿಗೆ ಒಪ್ಪಂದ ಮಾಡಿಕೊಂಡ 'ಜಿಯೋ-ಏರ್‌ಟೆಲ್‌'

Written By:

ಸರ್ಕಾರಿ ಸ್ವಾಮ್ಯದ BSNL ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ತನ್ನ ಆದಾಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಬಳಕೆ ಮಾಡಿಕೊಳ್ಳದ ಫೈಬರ್ ಬ್ರಾಡ್ ಬ್ಯಾಂಡ್ ಅನ್ನು ಖಾಸಗಿ ಕಂಪನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋವನ್ನು ಆಯ್ಕೆ ಮಾಡಿಕೊಂಡಿದೆ.

BSNL ನೊಂದಿಗೆ ಒಪ್ಪಂದ ಮಾಡಿಕೊಂಡ 'ಜಿಯೋ-ಏರ್‌ಟೆಲ್‌'

ಓದಿರಿ: ವಾಟ್ಸ್‌ಆಪ್‌ನಿಂದ ನೀವು ನಿರೀಕ್ಷಿಸದ ಮತ್ತೊಂದು ಆಚ್ಚರಿಯ ಆಯ್ಕೆ

ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆ ನಿರ್ಮಾಣವಾಗಿದ್ದು, ಜಿಯೋ ಸಹ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುವ ಆಲೋಚನೆಯಲ್ಲಿದೆ ಈ ಹಿನ್ನಲೆಯಲ್ಲಿ ತಾನು ಸಹ ಲಾಭ ಮಾಡಿಕೊಳ್ಳುವ ದೃಷ್ಠಿಯಿಂದ BSNL ಈ ಕ್ರಮಕ್ಕೆ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.3000 ಕೋಟಿ ಆದಾಯ:

ರೂ.3000 ಕೋಟಿ ಆದಾಯ:

ಸರ್ಕಾರಿ ಸ್ವಾಮ್ಯದ BSNL ಬಳಕೆ ಮಾಡಿಕೊಳ್ಳದ ಫೈಬರ್ ಅನ್ನು ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ನೊಂದಿಗೆ ಹಂಚಿಕೆ ಮಾಡಿಕೊಳ್ಳುವುದರಿಂದ ಸುಮಾರು ರೂ.3000 ಕೋಟಿ ಆದಾಯವನ್ನು ಗಳಿಸಿಕೊಳ್ಳಲಿದೆ ಎನ್ನಲಾಗಿದೆ.

BSNL ಫೈಬರ್ ಸೇವೆಯನ್ನು ಕೇಳಿದ ಜಿಯೋ :

BSNL ಫೈಬರ್ ಸೇವೆಯನ್ನು ಕೇಳಿದ ಜಿಯೋ :

ಈಗಾಗಲೇ ದೇಶದಲ್ಲಿ ಅತೀ ವೇಗದ ಇಂಟರ್‌ನೆಟ್‌ಅನ್ನು ಅತೀ ಕಡಿಮೆ ಬೆಲೆಗೆ ನೀಡಬೇಕು ಎನ್ನುವ ಆಲೋಚನೆಯೊಂದಿಗೆ ಯೋಜನೆ ರೂಪಿಸುತ್ತಿರುವ ಅಂಬಾನಿ ಮಾಲೀಕ್ವತದ ಜಿಯೋ, BSNL ಬಳಕೆ ಮಾಡಿಕೊಳ್ಳದ ಫೈಬರ್ ಸೇವೆಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿತ್ತು ಎನ್ನಲಾಗಿದೆ.

7 ಲಕ್ಷ ಕಿ.ಮೀ. ಫೈಬರ್ ಜಾಲ:

7 ಲಕ್ಷ ಕಿ.ಮೀ. ಫೈಬರ್ ಜಾಲ:

ಸದ್ಯ ದೇಶದ ಅತೀ ದೊಡ್ಡ ಫೈಬರ್ ಜಾಲವನ್ನು ಹೊಂದಿರುವುದು BSNL ಮಾತ್ರವೇ ಎನ್ನಲಾಗಿದೆ. ಇಡೀ ದೇಶದಲ್ಲಿ ಒಟ್ಟು 7 ಲಕ್ಷ ಕಿ.ಮೀ ನಷ್ಟು ಉದ್ದದ ಫೈಬರ್ ಜಾಲವನ್ನು BSNL ಹೊಂದಿದೆ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಈಗಾಗಲೇ ಒಪ್ಪಂದ ಪೂರ್ಣ:

ಈಗಾಗಲೇ ಒಪ್ಪಂದ ಪೂರ್ಣ:

ಮಾರುಕಟ್ಟೆಯಲ್ಲಿ ಎಷ್ಟು ಸದ್ದು ಮಾಡದಿದ್ದರೂ BSNL ತನ್ನ ಹಿಡಿತದಲ್ಲಿ ಹಲವಾರು ಸೇವೆಯನ್ನು ಹೊಂದಿದ್ದು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಜನ ಸಾಮಾನ್ಯರಿಗೆ ತಲುಪಿಸಲು ಶಕ್ತವಾಗುತ್ತಿಲ್ಲ. ಹಾಗಾಗಿ ಈ ಸೇವೆಗಳನ್ನು ಖಾಸಗಿ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತಿದೆ. ಈಗಾಗಲೇ ಈ ಒಪ್ಪಂದವು ಪೂರ್ಣಗೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
State-run telecom operator BSNL is looking to increase its revenue by Rs. 3,000 crores in 2017-18 by sharing its dark or unused fibre to private telecom operators such as Bharti Airtel and Reliance Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot