ಬಿಎಸ್‌ಎನ್‌ಎಲ್‌ನಿಂದ ಏಳು ತಿಂಗಳ ವ್ಯಾಲಿಡಿಟಿ ಪ್ಲ್ಯಾನ್‌ : 420GB ಡೇಟಾ ಉಚಿತ!

|

ಸದ್ಯ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲ ಫೈಟ್‌ ನೀಡುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸಂಸ್ಥೆಯು ಇತ್ತೀಚಿಗೆ 997ರೂ. ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಪರಿಚಯಿಸಿತ್ತು. ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ನೀಡಿ ಏರ್‌ಟೆಲ್‌, ವೊಡಾಫೋನ್ ಮತ್ತು ಜಿಯೋಗೆ ದಂಗುಬಡಿಸಿತ್ತು. ಆದ್ರೆ ಬಿಎಸ್‌ಎನ್ಎಲ್ ಇದೀಗ ಮತ್ತೊಂದು ಭರ್ಜರಿ ಪ್ರೀಪೇಡ್‌ ಪ್ಲ್ಯಾನ್‌ವೊಂದನ್ನು ಬಿಡುಗಡೆ ಮಾಡಿದೆ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಈಗ ಹೊಸದಾಗಿ 998ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ ಒಂದನ್ನು ಪರಿಚಯಿಸಿದೆ. ಈ ಪ್ಲ್ಯಾನ ಮೇಲ್ನೋಟಕ್ಕೆ ಬಿಎಸ್‌ಎನ್ಎಲ್‌ನ 997ರೂ. ಪ್ಲ್ಯಾನ್‌ನಂತೆ ಕಂಡರೂ, 998ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ 997ರೂ.ಗಳ ಪ್ಲ್ಯಾನ್‌ಗಿಂತ ಭಿನ್ನವಾಗಿದೆ. ಅಧಿಕ ಡೇಟಾ ಮತ್ತು ಹೆಚ್ಚಿನ ವ್ಯಾಲಿಡಿಟಿ ಅವಧಿಯ ಪ್ರಯೋಜನಗಳು ಈ ಹೊಸ ಪ್ರೀಪೇಡ್‌ ಪ್ಲ್ಯಾನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಹೊಸ 998ರೂ. ಪ್ಲ್ಯಾನ್‌ ಪ್ರಯೋಜನಗಳೆನು ಮತ್ತು ಇತರೆ ಆಕರ್ಷಕ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

998ರೂ. ಪ್ಲ್ಯಾನ್‌(STV )

998ರೂ. ಪ್ಲ್ಯಾನ್‌(STV )

ಬಿಎಸ್‌ಎನ್ಎಲ್ ಸಂಸ್ಥೆಯ 998ರೂ. ಪ್ಲ್ಯಾನ್‌ ಒಟ್ಟು 210 ದಿನಗಳ(ಏಳು ತಿಂಗಳು) ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಉಚಿತವಾಗಿ ಸಿಗಲಿದೆ. ಆದರೆ ಈ ಪ್ಲ್ಯಾನಿನಲ್ಲಿ ಕರೆಗಳು ಮತ್ತು ಎಸ್‌ಎಮ್ಎಸ್‌ಗಳು ಲಭ್ಯವಾಗುವುದಿಲ್ಲ. ಮುಖ್ಯವಾಗಿ ಇದು ಡೇಟಾ ಬಳಕೆಯ ಪ್ಲ್ಯಾನ್‌ ಆಗಿ ಗುರುತಿಸಿಕೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 420GB ಡೇಟಾ ಪ್ರಯೋಜನ ಸಿಗಲಿದೆ.

ಬಿಎಸ್‌ಎನ್‌ಎಲ್‌ 997ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ 997ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್ ಹೊಸದಾಗಿ 997ರೂ. ಪ್ರೀಪೇಡ್‌ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನವು ಲಭ್ಯವಾಗಲಿದೆ. ಪ್ರೀಪೇಡ್‌ ಪ್ಲ್ಯಾನ್‌ ಸದ್ಯ ಕೇರಳ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ಹಂತದಲ್ಲಿ ಸಂಸ್ಥೆಯು ಈ ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಇತರೆ ಟೆಲಿಕಾಂ ಸರ್ಕಲ್‌ ವ್ಯಾಪ್ತಿಗಳಲ್ಲಿ ವಿಸ್ತರಿಸುವ ಸಾಧ್ಯತೆಗಳಿವೆ

ಏರ್‌ಟೆಲ್‌ ಮತ್ತು ವೊಡಾಫೋನ್ ಪೈಪೋಟಿ

ಏರ್‌ಟೆಲ್‌ ಮತ್ತು ವೊಡಾಫೋನ್ ಪೈಪೋಟಿ

ಏರ್‌ಟೆಲ್‌ನ 998ರೂ.ಪ್ಲ್ಯಾನಿನಲ್ಲಿ ಒಟ್ಟು 336 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು, 300ಎಸ್‌ಎಮ್‌ಎಸ್‌ ಮತ್ತು 12GB ಡೇಟಾ ಪ್ರಯೋಜನ ಹೊಂದಿದೆ. ಹಾಗೆಯೇ ವೊಡಾಫೋನ್ 999ರೂ. ಪ್ಲ್ಯಾನ್‌ ಸಹ ಏರ್‌ಟೆಲ್‌ನ ಪ್ಲ್ಯಾನಿನಂತೆಯೇ ಪ್ರಯೋಜನಗಳನ್ನು ಹೊಂದಿದ್ದು, ಆದ್ರೆ ವ್ಯಾಲಿಡಿಟಿಯು 365ದಿನಗಳಾಗಿವೆ. ಆದ್ರೆ ಬಿಎಸ್‌ಎನ್‌ಎಲ್‌ 997ರೂ,ಪ್ಲ್ಯಾನ್‌ ಅನಿಯಮಿತ ಕರೆಗಳು ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಮತ್ತು ಪ್ರತಿದಿನ 3GB ಡೇಟಾ ಪ್ರಯೋಜನ ಹೊಂದಿದೆ.

ಬಿಎಸ್‌ಎನ್‌ಎಲ್ 1699ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್ 1699ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ. ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್‌ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್‌ ಎನಿಸಲಿದೆ.

Most Read Articles
Best Mobiles in India

English summary
BSNL has now launched a new Rs 998 prepaid recharge plan in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X