ಬಿಎಸ್‌ಎನ್‌ಎಲ್‌ನಿಂದ ಅನಿಯಮಿತ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್!.ಆರಂಭಿಕ ಬೆಲೆ 555ರೂ!

|

ಭಾರತೀಯ ಬ್ರಾಡ್‌ಬ್ಯಾಂಡ್‌ ಕ್ಷೇತ್ರದಲ್ಲಿ ಭಾರಿ ಮಹತ್ತರ ಬದಲಾವಣೆಗಳು ನಡೆಯುತ್ತಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ಸಂಸ್ಥೆಯು ಸದ್ಯ ದೇಶದ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಮಿಂಚಿನ ಓಟದಲ್ಲಿ ಮುನ್ನುಗುತ್ತಿದೆ. ಈಗಾಗಲೇ ಕೆಲವು ಹೊಸ ಪ್ಲ್ಯಾನ್‌ಗಳಿಂದ ಖಾಸಗಿ ಬ್ರಾಡ್‌ಬ್ಯಾಂಡ್‌ ಕಂಪನಿಗಳನ್ನು ದಂಗು ಬಡಿಸಿರುವ 'ಬಿಎಸ್‌ಎನ್‌ಎಲ್' ಸಂಸ್ಥೆಯು ಇದೀಗ ಮತ್ತಷ್ಟು ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಈಗ ಕೆಲವು ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ಗಳು ದೈನಂದಿನ ಡೇಟಾ ಲಿಮಿಟ್ ಆಯ್ಕೆಯನ್ನು ಹೊಂದಿಲ್ಲ. ಗ್ರಾಹಕರು ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ಖಾಸಗಿ ಬ್ರಾಡ್‌ಬ್ಯಾಂಡ್‌ ಕಂಪನಿಗಳು FUP ಲಿಮಿಟ್ ಹೆರುವುದು ಬಹುತೇಕ ಕಡಿಮೆ. ಬಿಎಸ್‌ಎನ್‌ಎಲ್ ತನ್ನ ಕೆಲವು ಪ್ಲ್ಯಾನ್‌ಗಳಿಗೆ (FUP) ದಿನದ ಡೇಟಾ ಬಳಕೆಯ ಮಿತಿಯನ್ನು ಇರಿಸಿತ್ತು. ಆದ್ರೆ ಇದೀಗ ಕೆಲವು ನೂತನ ಪ್ಲ್ಯಾನಗಳಲ್ಲಿ ದೈನಂದಿನ ಡೇಟಾ ಮಿತಿಯಲ್ಲಿ ಬದಲಾವಣೆ ತಂದಿದೆ. ಹಾಗಾದರೇ ಬಿಎಸ್ಎನ್‌ಎಲ್‌ ಹೊಸ ಪ್ಲ್ಯಾನ್‌ ಕುರಿತು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌-555ರೂ.

ಬಿಎಸ್‌ಎನ್‌ಎಲ್‌-555ರೂ.

ಬಿಎಸ್‌ಎನ್‌ಎಲ್‌ ಸಂಸ್ಥೆಯ ಬೇಸಿಕ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಇದಾಗಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 100GB ಡೇಟಾ ಸಿಗಲಿದೆ. 20 Mbps ವೇಗದ ಸಾಮರ್ಥ್ಯದಲ್ಲಿರಲಿದ್ದು, ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ತಿಂಗಳ ಮಿತಿ 100GB ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್‌ ಕರೆಗಳು ಉಚಿತವಾಗಿದ್ದು, ಇತರೆ ನೆಟವರ್ಕ್‌ ಕರೆಗಳು 10:30 PM ಯಿಂದ 6:00 AM ವರೆಗೂ ಉಚಿತವಾಗಿರಲಿವೆ. ಭಾನುವಾರ ಅನಿಯಮಿತ ಕರೆ ಸೌಲಭ್ಯ ಲಭ್ಯ.

ಬಿಎಸ್‌ಎನ್‌ಎಲ್‌-749ರೂ.

ಬಿಎಸ್‌ಎನ್‌ಎಲ್‌-749ರೂ.

ಬಿಎಸ್‌ಎನ್‌ಎಲ್‌ ಸೂಪರ್‌ಸ್ಟಾರ್‌ ಪ್ಲ್ಯಾನ್‌ ಇದಾಗಿದ್ದು, ಒಂದು ತಿಂಗಳ ಅವಧಿಗೆ 300GB ಡೇಟಾ ಸಿಗಲಿದೆ. ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌-777ರೂ.

ಬಿಎಸ್‌ಎನ್‌ಎಲ್‌-777ರೂ.

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌-849ರೂ

ಬಿಎಸ್‌ಎನ್‌ಎಲ್‌-849ರೂ

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

Most Read Articles
Best Mobiles in India

English summary
While most plans in the BSNL broadband portfolio come with a daily data cap, there are some plans which come with no daily data limit. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X