ಬಿಎಸ್‌ಎನ್‌ಎಲ್‌, ಜಿಯೋ, ಏರ್‌ಟೆಲ್‌ನ ಹೊಸ ಪ್ಲ್ಯಾನ್‌ಗಳ ಮಾಹಿತಿ!

|

ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆಗಳು ಈ ವರ್ಷ ಹಲವು ಹೊಸ ಯೋಜನೆಗಳು ಪರಿಚಯಿಸಿವೆ. ಬಹುತೇಕ ನೂತನ ಯೋಜನೆಗಳು ಉಚಿತ ವಾಯಿಸ್‌ ಕರೆಯೊಂದಿಗೆ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯದ ಪ್ರಯೋಜನಗಳನ್ನು ಪಡೆದಿವೆ. ಪ್ರಸ್ತುತ ಜುಲೈ ತಿಂಗಳಿನಲ್ಲಿಯೂ ಈ ಟೆಲಿಕಾಂಗಳು ಕೆಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ.

ಬಿಎಸ್‌ಎನ್‌ಎಲ್‌

ಹೌದು, ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಹಾಗೂ ವೊಡಾಫೋನ್ - ಐಡಿಯಾ ಟೆಲಿಕಾಂ ಕಂಪನಿಗಳು ಈ ತಿಂಗಳಿನಲ್ಲಿ ನೂತನ ಪ್ರೀಪೇಯ್ಡ್‌ ಯೋಜನೆಗಳನ್ನು ಬಿಡುಗಡೆ ಮಾಡಿವೆ. ಹೊಸ ಯೋಜನೆಗಳು ಸಹ ಪ್ರತಿದಿನ ಡೇಟಾ ಸೌಲಭ್ಯದ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಒಳಗೊಂಡಿವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಡಿಯೊ ಸ್ಟ್ರೀಮಿಂಗ್ ಹಾಗೂ ಮನರಂಜನೆಯ ಸೌಲಭ್ಯ ಪಡೆದಿವೆ. ಹಾಗಾದರೇ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಸಂಸ್ಥೆಗಳ ಹೊಸ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 151ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 151ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 251ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 251ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ ಸಹ (STV DATA251) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 599ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಈ ಹೊಸ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450GB ಡೇಟಾ ಪ್ರಯೋಜನ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 94ರೂ. ಮತ್ತು 95ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 94ರೂ. ಮತ್ತು 95ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 94ರೂ ಪ್ರಿಪೇಯ್ಡ್ ಯೋಜನೆ 60 ಸೆಕೆಂಡುಗಳ ಪಲ್ಸ್‌ ರೇಟ್‌ನಲ್ಲಿ ಲಭ್ಯವಿದ್ದರೆ, 95ರೂ ಯೋಜನೆಯು ಒಂದು ಸೆಕೆಂಡಿನ ಪಲ್ಸ್‌ ರೇಟ್‌ ಅನ್ನು ಒಳಗೊಂಡಿದೆ. ಸದ್ಯ ಬಿಎಸ್ಎನ್ಎಲ್ ಚೆನ್ನೈ ವಿಭಾಗದಲ್ಲಿ ರೂ. 94 ‘ಅಡ್ವಾನ್ಸ್‌ ಫಾರ್‌ ಮಿನಿಟ್' ಮತ್ತು ರೂ 95 ‘ಅಡ್ವಾನ್ಸ್ ಪರ್ ಸೆಕೆಂಡ್' ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು 100 ನಿಮಿಷಗಳ ವಾಯ್ಸ್‌ ಕಾಲ್‌, 90 ದಿನಗಳವರೆಗೆ ಲಭ್ಯವಿರಲಿದೆ ಮತ್ತು 3GB ಹೈಸ್ಪೀಡ್ ಡೇಟಾವನ್ನು ಒಳಗೊಂಡಿದೆ.

ಜಿಯೋ 249ರೂ. ಪ್ಲ್ಯಾನ್

ಜಿಯೋ 249ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 1,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಏರ್‌ಟೆಲ್‌ 289ರೂ. ಪ್ಲ್ಯಾನ್

ಏರ್‌ಟೆಲ್‌ 289ರೂ. ಪ್ಲ್ಯಾನ್

ಏರ್‌ಟೆಲ್‌ನ ಇತ್ತೀಚಿನ 289ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ, ನ್ಯಾಶನಲ್, ಲೋಕಲ್ ಕರೆಗಳ ಸೌಲಭ್ಯ ಲಭ್ಯ. ಹಾಗೂ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗುವುದು. ಇದರೊಂದಿಗೆ zee 5 ಚಂದಾದಾರಿಕೆ ಸೌಲಭ್ಯವು ಸಹ ದೊರೆಯುವುದು.

Best Mobiles in India

English summary
Here is a list of all new plans that Airtel, Jio and BSNL introduced in July 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X