BSNL ಗ್ರಾಹಕರೇ ನಿಮಗೆ ಬೇಸರವಾಗಬಹುದು!.. ಇನ್ಮುಂದೆ ಈ ರೀಚಾರ್ಜ್‌ ಯೋಜನೆ ಲಭ್ಯವಿಲ್ಲ!

|

ಹೊಸ ವರ್ಷಕ್ಕೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ವಿವಿಧ ರೀಚಾರ್ಜ್‌ ಆಫರ್‌ಗಳನ್ನು ನೀಡಿರುವುದು ಒಂದು ಕಡೆಯಾದರೆ 5G ಸೇವೆಗಂತೂ ಭಾರತೀಯರು ಕಾತುರದಿಂದ ಕಾಯುತ್ತಿರುವುದು ಮತ್ತೊಂದು ವಿಷಯ. ಈ ಎಲ್ಲಾ ಬೆಳವಣಿಗೆ ನಡುವೆ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರು ಬೇಸರವಾಗುವ ಕೆಲಸವೊಂದನ್ನು ಮಾಡಿದೆ. ಬಿಎಸ್‌ಎಸ್‌ಎನ್‌ ಗ್ರಾಹಕರಿಗೆ ಅಗ್ಗದ ದರದಲ್ಲಿ ಹೆಚ್ಚಿನ ಸೌಲಭ್ಯ ಇರುವ ರೀಚಾರ್ಜ್‌ ಪ್ಲ್ಯಾನ್‌ ನೀಡುತ್ತಿತ್ತು. ಆದರೆ, ಇನ್ಮುಂದೆ ಗ್ರಾಹಕರು ಅಗ್ಗದ ಈ ಮೂರು ರೀಚಾರ್ಜ್‌ ಯೋಜನೆಯಿಂದ ವಂಚಿತರಾಗಲಿದ್ದಾರೆ.

ವರ್ಷ

ಹೌದು, ಹೊಸ ವರ್ಷದಲ್ಲಿ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ. ಅದರಂತೆ ಪ್ರಮುಖ ಮೂರು ರೀಚಾರ್ಜ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಬಿಎಸ್‌ಎನ್‌ಎಲ್‌ ಇದ್ದಕ್ಕಿದ್ದಂತೆ ನಿಲ್ಲಿಸಿದೆ. ಹಾಗೆಯೇ ಈ ಯೋಜನೆಗಳನ್ನು 1 ಜನವರಿ 2023 ರಿಂದ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ರವಾನೆ ಮಾಡಿದೆ. ಹಾಗಿದ್ರೆ ಬಿಎಸ್‌ಎನ್‌ಎಲ್ ಯಾಕೆ ಈ ನಿರ್ಧಾರ ಮಾಡಿದೆ?, ಇದರ ಬದಲಿಯಾಗಿ ಬೇರೆ ರೀಚಾರ್ಜ್‌ ಪ್ಲ್ಯಾನ್ ಏನಾದರೂ ನೀಡುತ್ತದೆಯೇ ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಯಾವ ರೀಚಾರ್ಜ್‌ ಪ್ಲ್ಯಾನ್‌ ಕೈಬಿಡಲಾಗಿದೆ?

ಯಾವ ರೀಚಾರ್ಜ್‌ ಪ್ಲ್ಯಾನ್‌ ಕೈಬಿಡಲಾಗಿದೆ?

ಬಿಎಸ್‌ಎನ್‌ಎಲ್‌ನ ಅಗ್ಗದ ದರದ ಬ್ರಾಡ್‌ಬ್ಯಾಂಡ್ ರೀಚಾರ್ಜ್‌ ಪ್ಲ್ಯಾನ್‌ಗಳಾದ 275 ರೂ. ನ ಎರಡು ರೀಚಾರ್ಜ್‌ ಯೋಜನೆ ಹಗೂ 775 ರೂ. ನ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಕೈಬಿಡಲಾಗಿದೆ. ಇವು ಸೀಮಿತ ಅವಧಿಯ ಕೊಡುಗೆಯಾಗಿವೆ ಎಂದು ತಿಳಿಸುವ ಮೂಲಕ ಕಳೆದ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಗ್ರಾಹಕರಿಗೆ ಪರಿಚಯಿಸಲಾಗಿತ್ತು. ಆದರೆ, ಜನವರಿ 1, 2023 ರಿಂದ ಈ ರೀಚಾರ್ಜ್‌ ಪ್ಲ್ಯಾನ್‌ ಲಭ್ಯವಿರುವುದಿಲ್ಲ.

ಬಿಎಸ್‌ಎನ್‌ಎಲ್‌ನ 275 ರೂ. ಯೋಜನೆ

ಬಿಎಸ್‌ಎನ್‌ಎಲ್‌ನ 275 ರೂ. ಯೋಜನೆ

ಬಿಎಸ್‌ಎನ್‌ಎಲ್‌ನ 275 ರೂ. ನಲ್ಲಿ ಎರಡು ರೀತಿಯ ಪ್ಲ್ಯಾನ್‌ಗಳಿದ್ದು, ಇದರಲ್ಲಿ ಬಳಕೆದಾರರು ಒಟ್ಟಾರೆ ಒಂದು ತಿಂಗಳಲ್ಲಿ 3.3 TB ಡೇಟಾವನ್ನು ನೀಡಲಾಗುತ್ತಿತ್ತು. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು 60Mbps ವೇಗದಲ್ಲಿ ಒದಗಿಸಲಾಗುತ್ತಿತ್ತು. ಆದರೆ, ಈ ಎರಡೂ ಯೋಜನೆಗಳಲ್ಲಿ ಯಾವುದೇ ಓಟಿಟಿ ಪ್ರಯೋಜನವನ್ನು ನೀಡಲಾಗುತ್ತಿರಲಿಲ್ಲ. ಆದರೂ ಸಹ ಈ ಪ್ಲ್ಯಾನ್‌ಗಳು ಹೆಚ್ಚು ಜನಪ್ರಿಯಗೊಂಡಿದ್ದವು.

775 ರೂ. ಗಳ ಪ್ಲ್ಯಾನ್‌

775 ರೂ. ಗಳ ಪ್ಲ್ಯಾನ್‌

775 ರೂ. ಗಳ ಮತ್ತೊಂದು ಪ್ಲ್ಯಾನ್‌ ಸಹ ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಈ ಯೋಜನೆಯಲ್ಲಿ 3300GB (3.3TB) ಡೇಟಾವನ್ನು 100Mbps ವೇಗದಲ್ಲಿ ನೀಡಲಾಗುತ್ತಿತ್ತು. ಹಾಗೆಯೇ ಓಟಿಟಿ ಪ್ರಯೋಜನ ಮತ್ತು 75 ದಿನಗಳ ಮಾನ್ಯತೆ ಇದರಲ್ಲಿತ್ತು. ಆದರೆ, ಈ ಅಗ್ಗದ ಪ್ಲ್ಯಾನ್‌ಗಳು ಇನ್ಮುಂದೆ ಲಭ್ಯವಾಗದೆ ಇರುವುದು ಹಲವಾರು ಗ್ರಾಹಕರಿಗೆ ಶಾಕಿಂಗ್‌ ವಿಷಯವಾಗಿದೆ.

ಬ್ರಾಡ್‌ಬ್ಯಾಂಡ್

ಇನ್ನು ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಬಗ್ಗೆ ಹೇಳುವುದಾದರೆ 1 ತಿಂಗಳು, 6 ತಿಂಗಳು, 12 ತಿಂಗಳು ಮತ್ತು 24 ತಿಂಗಳುಗಳ ಮಾನ್ಯತೆಯನ್ನು ನೀಡಲಿದ್ದು, ಇದರಲ್ಲಿ ಎಂಟ್ರಿ ಪ್ಲ್ಯಾನ್‌ ಬೆಲೆ 329 ರೂ. ಗಳಿಂದ ಆರಂಭವಾಗಲಿದ್ದು, 1000GB ಡೇಟಾವನ್ನು 20Mbps ವೇಗದಲ್ಲಿ ನೀಡಲಾಗುತ್ತದೆ. ಹಾಗೆಯೇ, ಸ್ಥಳೀಯ ಮತ್ತು ಎಸ್‌ಟಿಡಿ ಸಂಖ್ಯೆಗಳಲ್ಲಿ ಉಚಿತ ಅನಿಯಮಿತ ಕರೆ ಸೌಲಭ್ಯ ಸಹ ನೀಡಲಾಗುತ್ತದೆ.

ರೀಚಾರ್ಜ್‌

ಇನ್ನು ಸಾಮಾನ್ಯ ರೀಚಾರ್ಜ್‌ ಪ್ಲ್ಯಾನ್‌ಗಳಾದ 399 ರೂ. ಯೋಜನೆಯಲ್ಲಿ 1000GB ಡೇಟಾವನ್ನು 30Mbps ವೇಗದಲ್ಲಿ ನೀಡಲಾಗುತ್ತದೆ. ಹಾಗೆಯೇ 449 ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 30Mbps ವೇಗದ ನೆಟ್‌ ಸಿಗಲಿದೆ. ಜೊತೆಗೆ ಈ ಯೋಜನೆಯಲ್ಲಿ 3300GB ಡೇಟಾ ಲಭ್ಯವಿದೆ. ಇನ್ನು ಮತ್ತೊಂದು ಪ್ಲ್ಯಾನ್‌ ಆದ 449ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ 3300GB ಡೇಟಾ ಆಯ್ಕೆ ನೀಡಲಾಗಿದ್ದು, 40Mbps ನಲ್ಲಿನ ವೇಗದಲ್ಲಿ ಇಂಟರ್ನೆಟ್‌ ಬಳಕೆ ಮಾಡಬಹುದು. ಹಾಗೆಯೇ ಈ ಪ್ಲ್ಯಾನ್‌ ಆರು ತಿಂಗಳ ಮಾನ್ಯತೆ ಹೊಂದಿದೆ.

Best Mobiles in India

English summary
BSNL removes three affordable broadband plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X