ಬಿಎಸ್ಎನ್ಎಲ್‌ನ ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಬಿಡುಗಡೆ!..ಒಟ್ಟು 2TB ಡೇಟಾ!

|

ಇಂಟರ್ನೆಟ್ ಅಗತ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ಅತ್ಯುತ್ತಮವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಆಕರ್ಷಕ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಪರಿಚಯಿಸುತ್ತ ಸಾಗಿವೆ. ಅವುಗಳೊಂದಿಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್‌ ಟೆಲಿಕಾಂ ಸಹ ಅಧಿಕ ಡೇಟಾ ಒಳಗೊಂಡ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಬಿಡುಗಡೆ ಮಾಡುತ್ತಿದ್ದು, ಈಗ ಹೊಸದೊಂದು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಪರಿಚಯಿಸಿದೆ.

ಬಿಎಸ್ಎನ್ಎಲ್ ಟೆಲಿಕಾಂ

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಇದೀಗ 2,999ರೂ. ಬೆಲೆಯ ಹೈ ಎಂಡ್‌ ಭಾರತ್‌ ಫೈಬರ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಇಂಟರ್ನೆಟ್ 100 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರತಿ ತಿಂಗಳು ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರನ್ನು ಈ ಪ್ಲ್ಯಾನ್ ಆಕರ್ಷಿಸಲಿದೆ. ಏಕೆಂದರೇ ಈ ಪ್ಲ್ಯಾನಿನಲ್ಲಿ ಒಟ್ಟು 2TB ಡೇಟಾ ಪ್ರಯೋಜನ ದೊರೆಯುತ್ತದೆ.

ಭಾರತ್‌ ಫೈಬರ್

ಬಿಎಸ್‌ಎಬ್ಎಲ್ 2,999ರೂ. ಭಾರತ್‌ ಫೈಬರ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ 2TB ಡೇಟಾ (2000GB ) FUP ಮಿತಿಯನ್ನು ಪಡೆದಿದೆ. ದೇಶದ ಯಾವುದೇ ನೆಟವರ್ಕಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ 999ರೂ ಬೆಲೆಯ ಅಮೆಜಾನ್ ಪ್ರೈಮ್ ಚಂದಾದಾರತ್ವ ಪ್ರಯೋಜನವು ದೊರೆಯುತ್ತದೆ. ಪ್ಯಾನ್ ಇಂಡಿಯಾ ಮಾದರಿಯ ಸೌಲಭ್ಯಗಳಾಗಿವೆ.

ಫೈಬರ್ ಬ್ರಾಡ್‌ಬ್ಯಾಂಡ್‌

ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ನ ಇತರೆ ಪ್ಲ್ಯಾನ್‌ಗಳನ್ನು ನೋಡುವುದಾದರೇ, ಆರಂಭಿಕ ಪ್ಲ್ಯಾನ್ 849ರೂ. ಆಗಿದೆ. ಈ ಪ್ಲ್ಯಾನ್ 50 Mbps ವೇಗದಲ್ಲಿ 600GB ಡೇಟಾ ಸೌಲಭ್ಯವನ್ನು ಒದಗಿಸಲಿದೆ. ಆನಂತರ 1277ರೂ, ಪ್ಲ್ಯಾನ್ 100 Mbps ವೇಗದಲ್ಲಿ 750GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. ಈ ಎರಡು ಬ್ರಾಡ್‌ಪ್ಲ್ಯಾನ್‌ಗಳಲ್ಲಿ ಡೇಟಾ ವೇಗ ಮತ್ತು ಡೇಟಾ ಮಿತಿ ನಡುವೆ ಭಿನ್ನತೆ ಇದೆ.

ಫೈಬರ್‌ನ 2,499ರೂ

ಹಾಗೆಯೇ ಭಾರತ್ ಫೈಬರ್‌ನ 2,499ರೂ. ಪ್ಲ್ಯಾನ್ ಪ್ರತಿದಿನ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದ್ದು, ಅದೇ ರೀತಿ 4,499ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಪ್ರತಿದಿನ ಒಟ್ಟು 55GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಇನ್ನು 5,999ರೂ ಪ್ಲ್ಯಾನ್ ಪ್ರತಿದಿನ 80GB ಡೇಟಾ ಸೌಲಭ್ಯ ಪಡೆದಿದೆ ಹಾಗೂ 9999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಪ್ರತಿದಿನ ಒಟ್ಟು 120GB ಡೇಟಾ ಪ್ರಯೋಜನವನ್ನು ಒದಗಿಸಲಿದೆ.

Best Mobiles in India

English summary
BSNL Rs 2,999 Bharat Fibre plan comes with 2TB FUP limit per month

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X