BSNL ಗ್ರಾಹಕರಿಗೆ ಸಿಹಿಸುದ್ದಿ; ಒಂದೇ ರೀಚಾರ್ಜ್‌ನಲ್ಲಿ 9 ಓಟಿಟಿ ಲಭ್ಯ!

|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗಾಗಲೇ ಖಾಸಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದ್ದು, ಇದೀಗ ಮತ್ತೊಂದು ಹೊಸ ಯೋಜನೆ ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂ ಅಧಿಕ ಚಂದಾದಾರರನ್ನು ಆಕರ್ಷಿಸಲು ನೂತನವಾಗಿ ಓಟಿಟಿ ಪ್ರಯೋಜನ ಒಳಗೊಂಡ ಪ್ಲ್ಯಾನ್‌ ಅನ್ನು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ರೀಚಾರ್ಜ್‌ ಪ್ಯಾಕ್‌ ಜನಪ್ರಿಯ ಓಟಿಟಿ ಆಪ್‌ಗಳನ್ನು ಒಳಗೊಂಡಿದೆ.

BSNL ಗ್ರಾಹಕರಿಗೆ ಸಿಹಿಸುದ್ದಿ; ಒಂದೇ ರೀಚಾರ್ಜ್‌ನಲ್ಲಿ 9 ಓಟಿಟಿ ಲಭ್ಯ!

ಹೌದು, ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಯೋಜನೆಗಳೊಂದಿಗೆ ಮನರಂಜನೆಯ ವಿಷಯವನ್ನು ವೀಕ್ಷಿಸಲು ಬಯಸುವ ಗ್ರಾಹಕರಿಗೆ OTT (ಓವರ್-ದಿ-ಟಾಪ್) ಗುಚ್ಛವನ್ನು ನೀಡುತ್ತಿದೆ. OTT ಬಿಎಸ್‌ಎನ್‌ಎಲ್‌ 249ರೂ. ಗಳ (ಇದು ಮಾಸಿಕ ಶುಲ್ಕ) ಬೆಲೆಯಲ್ಲಿ 9 ಜನಪ್ರಿಯ ಓಟಿಟಿ ಸೌಲಭ್ಯವನ್ನು ಲಭ್ಯ ಮಾಡಿದೆ. ಇತ್ತೀಚಿಗೆ ಗ್ರಾಹಕರು ಹೆಚ್ಚಾಗಿ ಓಟಿಟಿ ಪ್ಲಾಟ್‌ಫಾರ್ಮ್ ಗಳತ್ತ ವಾಲುತ್ತಿರುವ ಕಾರಣ ಬಿಎಸ್‌ಎನ್‌ಎಲ್‌ ಈ ಯೋಜನೆ ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌ 249ರೂ. ಓಟಿಟಿ ಪ್ಲ್ಯಾನ್
ಬಿಎಸ್‌ಎನ್‌ಎಲ್‌ (BSNL) ತನ್ನ 249ರೂ. ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 9 ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತದೆ. ಅವುಗಳು ಕ್ರಮವಾಗಿ ಜೀ5, ಸೋನಿಲೈವ್, ವೋಟ್‌ ಸೆಲೆಕ್ಟ್‌, ಯುಪ್‌ ಟಿವಿ, ಆಹಾ, Lionsgate Play, ಹಂಗಾಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಇದರೊಂದಿಗೆ ಇನ್ನೊಂದು ಓಟಿಟಿ ಪ್ರಯೋಜನ ದೊರೆಯುತ್ತದೆ. ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಓಟಿಟಿ ಪ್ರಯೋಜನ ಬಯಸುವ ಬಳಕೆದಾರರು ಈ ಯೋಜನೆಯನ್ನು ಖರೀದಿಸಬಹುದು. ಕೆಲವು ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ.

BSNL ಗ್ರಾಹಕರಿಗೆ ಸಿಹಿಸುದ್ದಿ; ಒಂದೇ ರೀಚಾರ್ಜ್‌ನಲ್ಲಿ 9 ಓಟಿಟಿ ಲಭ್ಯ!

ಬಿಎಸ್‌ಎನ್‌ಎಲ್‌ 499ರೂ. ಫೈಬರ್ ಬೇಸಿಕ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಇದ್ರಲ್ಲಿ, ಬಳಕೆದಾರರು ಮೊದಲ ತಿಂಗಳ ಬಾಡಿಗೆಯಲ್ಲಿ 500ರೂ. ವರೆಗಿನ 90% ರಿಯಾಯಿತಿಯನ್ನು ಸಹ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ ಪ್ರಯೋಜನ
ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB (3,300 GB) ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

BSNL ಗ್ರಾಹಕರಿಗೆ ಸಿಹಿಸುದ್ದಿ; ಒಂದೇ ರೀಚಾರ್ಜ್‌ನಲ್ಲಿ 9 ಓಟಿಟಿ ಲಭ್ಯ!

ಬಿಎಸ್‌ಎನ್‌ಎಲ್‌ 799ರೂ. ಫೈಬರ್ ವ್ಯಾಲ್ಯೂ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್ 'ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 TB (3,300 GB) ಮಾಸಿಕ ಡೇಟಾದವರೆಗೆ 100 Mbps ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 TB ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 Mbps ವೇಗಕ್ಕೆ ಇಳಿಕೆ ಮಾಡಲಾಗುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಫೈಬರ್ ಪ್ರೀಮಿಯಂ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್ 'ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 2 TB (2000 GB) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾವನ್ನು ಸೇವಿಸಿದ ನಂತರ ವೇಗವು 2 Mbps ವೇಗಕ್ಕೆ ಇಳಿಕೆ ಮಾಡಲಾಗುತ್ತದೆ.

Best Mobiles in India

English summary
BSNL Rs 249 OTT plan offers ZEE5, SonyLIV, Voot Select, Yupp TV, aHa, Lionsgate Play, Hungama and more. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X