ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್‌ನಲ್ಲಿ 1.5GB ಉಚಿತ ಡೇಟಾ!

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಈಗ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ನೇರಾನೇರ ಪೈಪೋಟಿಗೆ ಇಳಿದ್ದಿದ್ದು, ಅದಕ್ಕಾಗಿ ಅತ್ಯುತ್ತಮ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡುತ್ತಿದೆ. ಇತ್ತೀಚಿಗೆ ಸಂಸ್ಥೆಯು ಭಾರತದ ವಿಂಗ್ ಕಮಾಂಡರ್ ಅಭಿನಂದನ ವರ್ಧಮಾನ್ ಅವರ ಹೆಸರಿನಲ್ಲಿ ಅಭಿನಂದನ 151ರೂ.ಗಳ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿತ್ತು. ಆದ್ರೆ ಈಗ ಈ ಪ್ಲ್ಯಾನ್‌ನಲ್ಲಿ ಬದಲಾವಣೆ ಮಾಡಿದೆ.

ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್‌ನಲ್ಲಿ 1.5GB ಉಚಿತ ಡೇಟಾ!

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಅಭಿನಂದನ 151ರೂ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಈಗ ಹೆಚ್ಚುವರಿಯಾಗಿ 500MB ಡೇಟಾವನ್ನು ನೀಡಲು ಮುಂದಾಗಿದೆ. ಈಗಾಗಲೇ ಜನಪ್ರಿಯವಾಗಿರುವ ಈ ಪ್ಲ್ಯಾನ್‌ ಗ್ರಾಹಕರಿಗೆ ಪ್ರತಿದಿನ 1GB ಡೇಟಾವನ್ನು ಲಭ್ಯವಾಗುತ್ತಿತ್ತು. ಈಗ ಹೆಚ್ಚುವರಿಯಾಗಿ 500MB ಸೇರುವುದರಿಂದ ಪ್ರತಿದಿನ ಒಟ್ಟು 1.5GB ಉಚಿತ ಡೇಟಾ ಪ್ರಯೋಜನವು ಗ್ರಾಹಕರಿಗೆ ದೊರೆಯಲಿದೆ.

ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್‌ನಲ್ಲಿ 1.5GB ಉಚಿತ ಡೇಟಾ!

ಹಾಗೆಯೇ ಈ ಪ್ಲ್ಯಾನ್‌ 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಅನಿಯಮಿತ ಉಚಿತ ವಾಯಿಸ್‌ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಹಾಗೂ ಪ್ರತಿದಿನ 1.5GB ಡೇಟಾದ ಪ್ರಯೋಜನವು ಲಭ್ಯವಾಗಲಿದೆ. ಹಾಗಾದರೇ ಬಿಎಸ್‌ಎನ್ಎಲ್ ಇತರೆ ಜನಪ್ರಿಯ ರೀಚಾರ್ಜ್‌ ಪ್ಲ್ಯಾನ್‌ಗಳು ಯಾವುವು ಮತ್ತು ಇದಕ್ಕೆ ಸಮನಾಗಿ ಜಿಯೋದ ಪ್ಲ್ಯಾನ್‌ ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಭರ್ಜರಿ ಬೆಲೆ ಇಳಿಕೆ ಕಂಡ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್!ಓದಿರಿ : ಭರ್ಜರಿ ಬೆಲೆ ಇಳಿಕೆ ಕಂಡ 'ವಿವೋ ವಿ15 ಪ್ರೊ' ಸ್ಮಾರ್ಟ್‌ಫೋನ್!

ಬಿಎಸ್‌ಎನ್ಎಲ್ 1188ರೂ ಪ್ಲ್ಯಾನ್‌

ಬಿಎಸ್‌ಎನ್ಎಲ್ 1188ರೂ ಪ್ಲ್ಯಾನ್‌

ಇತ್ತೀಚಿಗೆಷ್ಟೆ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ 1188ರೂ ಪ್ಲ್ಯಾನ್‌ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್‌, 345 ದಿನಗಳ ಬಿಗ್ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದರೊಂದಿಗೆ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್‌ ಕರೆಗಳು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1200 ಉಚಿತ ಎಸ್‌ಎಮ್‌ಎಸ್‌, ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್ 1699ರೂ ಪ್ಲ್ಯಾನ್‌

ಬಿಎಸ್‌ಎನ್‌ಎಲ್ 1699ರೂ ಪ್ಲ್ಯಾನ್‌

ಸಂಸ್ಥೆಯ 1699ರೂ ಪ್ಲ್ಯಾನ್‌ ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್‌ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್‌ ಎನಿಸಿದೆ.

ಓದಿರಿ : ಕಡಿಮೆ ಬೆಲೆಯಲ್ಲಿ 'ಸೌಂಡ್‌ಒನ್' ಇಯರ್‌ಬಡ್ಸ್‌ ಬಿಡುಗಡೆ!..ಸಖತ್‌ ಸೌಂಡ್‌! ಓದಿರಿ : ಕಡಿಮೆ ಬೆಲೆಯಲ್ಲಿ 'ಸೌಂಡ್‌ಒನ್' ಇಯರ್‌ಬಡ್ಸ್‌ ಬಿಡುಗಡೆ!..ಸಖತ್‌ ಸೌಂಡ್‌!

1399ರೂ ಮತ್ತು 1001ರೂ ಪ್ಲ್ಯಾನ್‌

1399ರೂ ಮತ್ತು 1001ರೂ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ 1399ರೂ ಮತ್ತು 1001ರೂ ಪ್ಲ್ಯಾನ್‌ಗಳು 270ದಿನಗಳ ವ್ಯಾಲಿಡಿಟಿ ವಾಯ್ದೆಯನ್ನು ಪಡೆದುಕೊಂಡಿವೆ. 1399ರೂ ಪ್ಲ್ಯಾನ್‌ ಅನಿಯಮಿತ ಕರೆಗಳು, ಪ್ರತಿದಿನ 50ಎಸ್ಎಮ್‌ಎಸ್‌, 1.5GB ಡೇಟಾ ಲಭ್ಯ. ಹಾಗೆಯೇ 1001ರೂ. ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ, ಪೂರ್ಣ ವ್ಯಾಲಿಡಿಟಿ ಅವಧಿಗೆ 9GB ಡೇಟಾ 750ಎಸ್‌ಎಮ್‌ಎಸ್‌ ಪ್ರಯೋಜನಗಳು ದೊರೆಯಲಿವೆ.

ಜಿಯೋ ಜೊತೆ ಪೈಪೋಟಿ

ಜಿಯೋ ಜೊತೆ ಪೈಪೋಟಿ

ಬಿಎಸ್‌ಎನ್ಎಲ್ 151ರೂ ಪ್ಲ್ಯಾನ್ ಬಹುತೇಕ ಜಿಯೋದ 149ರೂ ಪ್ಲ್ಯಾನ್‌ಗೆ ಸಾಮ್ಯತೆ ಹೊಂದಿದೆ. ಜಿಯೋ 149ರೂ ಪ್ಲ್ಯಾನ್‌ನಲ್ಲಿಯೂ ಅನಿಯಮಿತ ಕರೆಗಳು, ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನಗಳಿದ್ದು, 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಜಿಯೋದ ಈ ಪ್ಲ್ಯಾನಿಗೆ ಇದೀಗ ಬಿಎಸ್‌ಎನ್ಎಲ್ 151ರೂ. ಪ್ಲ್ಯಾನ್ ಪೈಪೋಟಿ ನೀಡಲಿದೆ.

ಓದಿರಿ : ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!ಓದಿರಿ : ವೊಡಾಫೋನ್ 255ರೂ. ಪ್ಲ್ಯಾನಿನಲ್ಲಿ ಹೊಸ ಮಾರ್ಪಾಡು‌!..70GB ಡೇಟಾ ಲಭ್ಯ!

Best Mobiles in India

English summary
After the revision of Rs 151 Prepaid Recharge, BSNL is now taking on Jio's Rs 149 recharge which also ships with 1.5GB daily data for 28 days. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X