ಭಾರತದ ಪಂಚಾಯತ್‌ಗಳಿಗೆ ಬಿಎಸ್‌ಎನ್‌ಎಲ್‌ನಿಂದ ಹೈ ಸ್ಪೀಡ್ ಇಂಟರ್ನೆಟ್

  By Shwetha
  |

  ಹೆಚ್ಚಿನ ಇಂಟರ್ನೆಟ್ ವೇಗದೊಂದಿಗೆ 1 ಲಕ್ಷದಷ್ಟು ಹಳ್ಳಿ ಪಂಚಾಯತ್‌ಗಳಿಗೆ ವೈಫೈ ಆಧಾರಿತ ನೆಟ್‌ವರ್ಕ್ ಅನ್ನು ಒದಗಿಸುವ ಬಿಎಸ್‌ಎನ್‌ಎಲ್ ಯೋಜನೆ ಇನ್ನೇನು ಜಾರಿಗೊಳ್ಳಲಿದ್ದು ಪಂಚಾಯರ್‌ಗಳು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಳ್ಳುವ ಯೋಜನೆ ಜಾರಿಗೊಳ್ಳುವುದು ದೃಢವಾಗಿದೆ.

  ಓದಿರಿ: ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಟಿವಿ ಸೇವೆ ಆರಂಭಿಸಿದ ದೂರದರ್ಶನ

  ಹೆಚ್ಚು ಪ್ರಮಾಣದ ದೈಹಿಕ ಲೇಬರ್‌ಗಾಗಿ ಫೈಬರ್ ನೆಟ್‌ವರ್ಕ್ ಅನ್ನು ಜಾರಿಗೊಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ವೈಫೈ ನೆಟ್‌ವರ್ಕ್ ಬಳಸಿಕೊಂಡು ಹಳ್ಳಿ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ ಸಂಪರ್ಕವನ್ನು ಒದಗಿಸುವ ಟೆಸ್ಟಿಂಗ್ ಅನ್ನು ನಾವು ನಡೆಸುತ್ತಿದ್ದೇವೆ. ಇದರ ಮೂಲಕ ಒಂದು ವರ್ಷದೊಳಗೆ ಒಂದು ಲಕ್ಷದಷ್ಟು ವಿಲೇಜ್ ಪಂಚಾಯತ್‌ಗಳನ್ನು ನಾವು ಸಂಪರ್ಕಿಸುತ್ತೇವೆ ಎಂಬುದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ನಿರ್ವಹಣಾಧಿಕಾರಿ ಅನುಪಮ್ ಶ್ರೀವಾಸ್ತವ್ ಮಾತಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ರಾಜ್ಯದ ಆಡಳಿತದಲ್ಲಿರುವ ಸಂಸ್ಥೆಯು ರಾಜಸ್ಥಾನದ ಮೂರು ಹಳ್ಳಿಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಟೆಲಿಕಾಮ್ ವಿಭಾಗಕ್ಕೆ ಈ ಯೋಜನೆಯ ಕುರಿತಾದ ವಿವರಗಳನ್ನು ನಾವು ಬರೆದಿದ್ದು ಅದರ ಬೆಂಬಲಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂಬುದು ಒಮ್ಮೆ ಅನುಮೋದನೆ ದೊರೆತ ನಂತರ ವಾಣಿಜ್ಯ ಅಭಿವೃದ್ಧಿಯನ್ನು ನಾವು ಪ್ರಾರಂಭಿಸುತ್ತೇವೆ ಎಂಬುದು ಶ್ರೀವಾಸ್ತವ್ ಮಾತಾಗಿದೆ.

  #2

  ಯೋಜನೆ ಅಡಿಯಲ್ಲಿ ಆರು ಕಿಲೋಮೀಟರ್‌ಗಳವರೆಗೆ ವೈರ್‌ಲೆಸ್ ನೆಟ್‌ವರ್ಕ್ ಅನ್ನು ಅಳವಡಿಸಲಿದ್ದೇವೆ ಅಂತೆಯೇ ಮೂರು ಹಳ್ಳಿಗಳಲ್ಲಿ ವೈಫೈ ಟವರ್‌ಗಳನ್ನು ಅಳವಡಿಸಲಾಗುತ್ತಿದೆ. ಕರೇಂದಾ, ಫಾಸ್ಲಾ ಮತ್ತು ಬಾದ್ರಿ ಆ ಹಳ್ಳಿಗಳಾಗಿವೆ. ಬಿವಾಡಿಯಲ್ಲಿ ಬಿಎಸ್‌ಎನ್‌ಎಲ್ ವಿನಿಯಮವಿದೆ. 500 ಟೆಸ್ಟ್ ಸಂಪರ್ಕಗಳನ್ನು ಹೆಚ್ಚಿನ ಬಳಕೆದಾರರಿಗೆ ಒದಗಿಸಲಾಗಿದೆ ಶಾಲೆಗಳೂ ಇದರಲ್ಲಿ ಸೇರಿದೆ.

  #3

  ಡೊಮೆಸ್ಟಿಕ್ ಟೆಲಿಕಾಮ್ ಇಕ್ವಿಪ್‌ಮೆಂಟ್ ತಯಾರಕ ಸಂಸ್ಥೆಯಾದ ವಿಹಾನ್ ನೆಟ್‌ವರ್ಕ್ಸ್ ಬಿಎಸ್‌ಎನ್‌ಎಲ್‌ಗಾಗಿ ಪೈಲೆಟ್ ಪ್ರಾಜೆಕ್ಟ್ ಅನ್ನು ಅಳವಡಿಸುತ್ತಿದೆ. ನ್ಯಾಶನಲ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ ಅಳವಡಿಕೆಗಾಗಿ ಸರಕಾರವು ಸಾಧ್ಯವಾದಷ್ಟು ಉತ್ತಮ ತಂತ್ರಜ್ಞಾನ ಆಯ್ಕೆಗಳನ್ನು ಅಳವಡಿಸುತ್ತಿದೆ.

  #4

  ಈ ವೈಫೈ ಆಧಾರಿತ ತಂತ್ರಜ್ಞಾನದೊಂದಿಗೆ ಹಳ್ಳಿಗಳಲ್ಲಿ ಬ್ರ್ಯಾಡ್‌ಬ್ಯಾಂಡ್ ಅನ್ನು ಒದಗಿಸುವ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ. ಸಂಪರ್ಕ ಇಲ್ಲದೆಡೆಗಳಲ್ಲಿ ಇದು ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಎಂಬುದಾಗಿ ವಿಹಾನ್ ನೆಟ್‌ವರ್ಕ್ಸ್ ಅಧ್ಯಕ್ಷರಾದ ರಾಜೀವ್ ಮೆಹರೋತ್ರಾ ತಿಳಿಸಿದ್ದಾರೆ.

  #5

  2.5 ಲಕ್ಷ ಗ್ರಾಮ ಪಂಚಾಯತ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾ ಪ್ರತಿ ಸೆಕೆಂಡ್‌ಗೆ ಕನಿಷ್ಟ ಪಕ್ಷ 100 ಮೆಗಾಬೈಟ್ ಒದಗಿಸುವ ಮೂಲಕ ಎನ್‌ಒಎಫ್‌ಎನ್ ಯೋಜನೆಗೆ ರೂ 20,100 ಕೋಟಿಯನ್ನು 2011 ರಲ್ಲಿ ಹೂಡಿಕೆ ಮಾಡಿದೆ.

  #6

  ಈ ಯೋಜನೆಯನ್ನು ವಿಶೇಷ ಅಧಿಕಾರದ ಹಿನ್ನಲೆಯಲ್ಲಿ ಟೆಲಿಕಾಮ್ ಮಿನಿಸ್ಟ್ರಿ ನಿರ್ವಹಿಸುತ್ತಿದ್ದು ಮೂರು ಸಾರ್ವಜನಿಕ ವಿಭಾಗಗಳಾದ ಬಿಎಸ್ಎನ್‌ಎಲ್, ರೈಲ್‌ಟೆಲ್ ಮತ್ತು ಪವರ್ ಗ್ರಿಡ್‌ಗೆ ಹಂಚಿದೆ.

  #7

  2013 ರ ಅಂತಿಮ ಗಡುವನ್ನು ಈ ಯೋಜನೆಗೆ ನೀಡಲಾಗಿತ್ತು. ಆದರೆ ಇನ್ನೂ ವಿಳಂಬವಾಗಿದೆ. ಎನ್‌ಡಿಎ ಸರಕಾರ ಮೇ 2014 ರಲ್ಲಿ 50,000 ಜಿಪಿಎಸ್ ಅನ್ನು ಮಾರ್ಚ್ 2015 ಕ್ಕೆ ತಲುಪುವ ಗುರಿಯನ್ನು ಹೊಂದಿತ್ತು, ನಂತರ 2016 ಮಾರ್ಚ್‌ಗೆ 1 ಲಕ್ಷ ತಲುಪುವ ಉದ್ದೇಶ ಸರಕಾರದ್ದಾಗಿತ್ತು.

  #8

  ಇನ್ನು ಉಳಿದ 1 ಲಕ್ಷವನ್ನು ಡಿಸೆಂಬರ್ 2016 ಕ್ಕೆ ತಲುಪುವುದು ಸರಕಾರದ ಯೋಜನೆಯಾಗಿತ್ತು. ಆದರೆ ಇದೀಗ 2018 ಅನ್ನು ತನ್ನ ಯೋಜನೆಯನ್ನು ಮುಗಿಸುವ ಗಡುವಾಗಿ ಸರಕಾರ ಇರಿಸಿಕೊಂಡಿದ್ದು ಅಂತೂ ಈ ವರ್ಷದ ಕೊನೆಯಲ್ಲಿ 1 ಲಕ್ಷ ಪಂಚಾಯತ್‌ಗಳನ್ನು ಬ್ರ್ಯಾಡ್‌ಬ್ಯಾಂಡ್‌ನೊಂದಿಗೆ ತಲುಪುವ ಗುರಿ ಇದರದ್ದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  As the government's rural broadband project is facing long delays, telecom PSU BSNL is testing an alternative WiFi-based network to connect about 1 lakh village panchayats in a year with high-speed Internet.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more