ಬಿಎಸ್‌ಎನ್ಎಲ್ 4G ಸೇವೆ ಆರಂಭ!..ಅಗ್ಗದ ಎರಡು ಹೊಸ ಡಾಟಾ ಪ್ಲ್ಯಾನ್‌ಗಳು!

|

ಪ್ರಸ್ತುತ ಖಾಸಗಿ ಟೆಲಿಕಾಂ ಸಂಸ್ಥೆಗಳ ಪೈಪೋಟಿಯ ಓಟದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸ್ವಲ್ಪ ಹಿಂದೆಯೇ ಅನ್ನಬಹುದು. ಏಕೆಂದರೇ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಈಗಾಗಲೇ 4G ನೆಟವರ್ಕ ಸೇವೆಯನ್ನು ಒದಗಿಸುತ್ತಿವೆ. ಆದರೆ ಬಿಎಸ್‌ಎನ್ಎಲ್ ಇನ್ನು 3G ನೆಟವರ್ಕನಲ್ಲಿಯೇ ಇದೆ ಎನ್ನುವ ಮಾತುಗಳನ್ನು ಅನೇಕರು ಹೇಳುತ್ತಾರೆ. ಆದರೆ ಇದೀಗ ಬಿಎಸ್‌ಎನ್ಎಲ್ ಸಹ 4G ನೆಟವರ್ಕ ಆರಂಭಿಸಿದೆ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಈಗ 4G ನೆಟವರ್ಕ ಸೇವೆಯನ್ನು ಪ್ರಾರಂಭಿಸಿದ್ದು, ಗ್ರಾಹಕರಿಗೆ ಖುಷಿ ತಂದಿದೆ. 4G ನೆಟವರ್ಕ ಬಿಡುಗಡೆಯ ಜೊತೆಗೆ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ಗಳನ್ನು ಸಹ ಪರಿಚಯಿಸಿದೆ. ಪ್ರಾರಂಭಿಕ ಹಂತವಾಗಿ ಮೊದಲು 5 ಟೆಲಿಕಾಂ ಸರ್ಕಲ್‌ ವ್ಯಾಪ್ತಿಗಳಲ್ಲಿ ಮಾತ್ರ 4G ನೆಟವರ್ಕ ಸೇವೆಯನ್ನು ಶುರುಮಾಡಿದ್ದು, ಬರುವ ಮಾರ್ಚ 2020ರ ವೇಳೆಗೆ ದೇಶದ ಎಲ್ಲ ಭಾಗದಲ್ಲಿಯೂ 4G ಒದಗಿಸುವ ಸಾಧ್ಯತೆಗಳಿವೆ.

ಕೊಲ್ಕತ್ತಾದ

ಬಿಎಸ್‌ಎನ್ಎಲ್ ಸದ್ಯ ಕೊಲ್ಕತ್ತಾದ ಬಾರಾ ಬಜಾರ್, ಹೋಲಿ ಬ್ರಿಡ್ಜ್ ಸೇರಿದಂತೆ ಕೆಲವು ಭಾಗಗಳಲ್ಲಿ 4G ಸೇವೆ ಲೈವ್ ಆಗಿದೆ. ಇನ್ನಿಳಿದ ಏರಿಯಾಗಳಲ್ಲಿ 4G ಸೇವೆಯು ಇನ್ನು ಟೆಸ್ಟಿಂಗ್ ಹಂತದಲ್ಲಿದ್ದು, ಇದೇ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಲೈವ್ ಆಗಲಿದೆ. ಬಿಎಸ್‌ಎನ್ಎಲ್ ಗ್ರಾಹಕರು 4G ಸಿಮ್‌ಗೆ ಅಪ್‌ಗ್ರೇಡ್ ಆಗಬೇಕು. ಸದ್ಯ ಕೊಲ್ಕತ್ತಾದಲ್ಲಿ ಬಿಎಸ್‌ಎನ್ಎಲ್ 4G ಸೇವೆಯು 17.9 Mbps ವೇಗದಲ್ಲಿ ಕಂಡುಬಂದಿದೆ ಎಂದು ಕೆಲವು ಬಳಕೆದಾರರು ಮಾಹಿತಿ ಶೇರ್ ಮಾಡಿದ್ದಾರೆ.

4G ಸೇವೆ ಲೈವ್

4G ಸೇವೆ ಲೈವ್ ಆದ ಬೆನ್ನಲೇ ಬಿಎಸ್‌ಎನ್ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96ರೂ.ಗಳಾಗಿದ್ದು, ಇನ್ನೊಂದು ಪ್ಲ್ಯಾನ್ 236ರೂ. ಬೆಲೆಯನ್ನು ಹೊಂದಿದೆ. ಇನ್ನು 96ರೂ. ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದ್ದು, 236ರೂ. ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಈ ಎರಡು ಪ್ಲ್ಯಾನ್‌ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ.

ಕರ್ನಾಟಕ

ಹಾಗೆಯೇ ಕೇರಳ, ಕರ್ನಾಟಕ, ಚೆನೈ, ಮಧ್ಯಪ್ರದೇಶ, ಗುಜರಾತ, ಆಂಧ್ರಪ್ರದೇಶ ಮತ್ತು ತೆಲಗಾಣ ರಾಜ್ಯಗಳಲ್ಲಿಯೂ ಸಹ ಬಿಎಸ್‌ಎನ್ಎಲ್ 4G ನೆಟವರ್ಕ ಸೇವೆ ಪ್ರಾಯೋಗಿಕ ಹಂತದಲ್ಲಿದೆ. ಮುಂಬರುವ 2020ರ ಮಾರ್ಚ ವೇಳೆಗೆ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯೊಳಗೆ ಬಿಎಸ್‌ಎನ್‌ಎಲ್‌ 4G ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.

Best Mobiles in India

English summary
BSNL 4G is now available in Kolkata across different regions like Barabazar, Esplanade and 2nd Bridge. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X