ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಗುಡ್‌ನ್ಯೂಸ್‌!..5 ನಿಮಿಷದ ಕರೆಗೆ 6 ಪೈಸೆ ಸಿಗಲಿದೆ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಈಗಾಗಲೇ ಸಾಕಷ್ಟು ಬದಲಾವಣೆಗಳು ನಡೆದಿವೆ. ಜನಪ್ರಿಯ ಖಾಸಗಿ ಟೆಲಿಕಾಂ ಸಂಸ್ಥೆ ಜಿಯೋ ಇತ್ತೀಚಿಗೆ ಇತರೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ ಆರು ಪೈಸೆ ನಿಗದಿ ಮಾಡಿದೆ. ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ಸಂಸ್ಥೆಯು ಇದೀಗ ಗ್ರಾಹಕರಿಗೆ ಆರು ಪೈಸೆ ನೀಡುವುದಾಗಿ ತಿಳಿಸಿದ್ದು, ಈ ಮೂಲಕ ಜಿಯೋಗೆ ಭರ್ಜರಿ ಟಾಂಗ್‌ ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ವೈರ್‌ಲೈನ್(landline), ಬ್ರಾಡ್‌ಬ್ಯಾಂಡ್ ಮತ್ತು ಎಫ್‌ಟಿಟಿಎಚ್ (FTTH) ಗ್ರಾಹಕರು ಐದು ನಿಮಿಷಗಳ ವಾಯಿಸ್‌ ಕರೆ ಮಾಡುವಿಕೆಗೆ ಪ್ರತಿಯಾಗಿ ಆರು ಪೈಸೆಗಳನ್ನು ಅವರಿಗೆ ನೀಡುವುದಾಗಿ ಹೇಳಿದೆ. ಹಣವನ್ನು ಕ್ಯಾಶ್‌ಬ್ಯಾಕ್ ರೂಪದಲ್ಲಿ ಗ್ರಾಹಕರ ಖಾತೆಗೆ ಕ್ರೆಡಿಟ್ ಮಾಡುವುದಾಗಿ ಬಿಎಸ್‌ಎನ್‌ಎಲ್‌ ತಿಳಿಸಿದೆ. ಸಂಸ್ಥೆಯ ಈ ಕ್ರಮ ಗ್ರಾಹಕರಿಗೆ ಭಾರಿ ಖುಷಿ ಅನಿಸಿದೆ.

ಹೊರಹೋಗುವ ಕರೆ

ಇತ್ತೀಚಿಗೆ ಜಿಯೋ ಹೊರಹೋಗುವ ಕರೆಗಳಿಗೆ ಶುಲ್ಕ ನಿಗದಿ ಮಾಡಿದ್ದು, ಆದ್ರೆ ಬಿಎಸ್‌ಎನ್‌ಎಲ್‌ ಐದು ನಿಮಿಷಕ್ಕೆ ಆರು ಪೈಸೆ ನೀಡುವ ಆಫರ್‌ ಖಾಸಗಿ ನೆಟವರ್ಕನ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಿವೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಿಎಸ್‌ಎನ್‌ಎಲ್‌ ಹಲವು ಅತ್ಯುತ್ತಮ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವುಗಳು ಹೆಚ್ಚಿನ ಡೇಟಾ, ಉಚಿತ ಕರೆ ಮತ್ತು ಉಚಿತ ಎಸ್‌ಎಮ್‌ಎಸ್‌ ಸೇರಿದಂತೆ ಬೆಸ್ಟ್‌ ವ್ಯಾಲಿಡಿಟಿ ಅವಧಿಯನ್ನು ಹೊಂದಿವೆ.

108ರೂ.ಗಳ

ಬಿಎಸ್‌ಎನ್‌ಎಲ್‌ನ ಹೊಸದಾಗಿ 108ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಪರಿಚಯಿಸಿದ್ದು, ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಸೌಲಭ್ಯ, ಉಚಿತ ಅನಿಯಮಿತ (ಪ್ರತಿದಿನ 250 ನಿಮಿಷಗಳು) ಕರೆಗಳ ಪ್ರಯೋಜನ, 28 ದಿನಗಳಿಗೆ 500 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನೆಗಳು ದೊರೆಯಲಿವೆ. ಹಾಗೆಯೇ ದೆಹಲಿ ಮತ್ತು ಮುಂಬೈ ಸರ್ಕಲ್ ವ್ಯಾಪ್ತಿಯ MTNL ನೆಟವರ್ಕ್‌ಗಳಿಗೂ ಉಚಿತ ಕರೆಗಳು ಸಿಗಲಿವೆ.

MTNL

ಬಿಎಸ್‌ಎನ್‌ಎಲ್‌ ಮತ್ತು ಎಮ್‌ಟಿಎನ್‌ಎಲ್‌ ಟೆಲಿಕಾಂ ನೆಟವರ್ಕಗಳೆರಡು ಅಧಿಕೃತವಾಗಿ ವಿಲಿನವಾಗಲಿವೆ. ಅದಕ್ಕಾಗಿ ಬಿಎಸ್‌ಎನ್‌ಎಲ್‌ನ ತನ್ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಾದ 429ರೂ, ಪ್ಲ್ಯಾನ್ 485ರೂ, ಪ್ಲ್ಯಾನ್ ಮತ್ತು 666ರೂ,ಪ್ಲ್ಯಾನ್‌ಗಳಲ್ಲಿ MTNL ನೆಟವರ್ಕ್‌ಗಳಿಗೂ ಉಚಿತ ವಾಯಿಸ್‌ ಕರೆ ಮಾಡುವ ಪ್ರಯೋಜನ ಲಭ್ಯ ಮಾಡಿದೆ. ನಂತರ ಇನ್ನುಳಿದ ಇತರೆ ಬಿಎಸ್‌ಎನ್‌ಎಲ್‌ನ ಪ್ರೀಪೇಡ್‌ ಪ್ಲ್ಯಾನ್‌ಗಳು ಸಹ MTNL ನೆಟವರ್ಕ್‌ಗೆ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒದಗಿಸುವ ಸಾಧ್ಯತೆಗಳಿವೆ.

Best Mobiles in India

English summary
BSNL will credit six paise as cashback for its wireline, broadband and FTTH customers consuming five minutes of voice calling. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X