Subscribe to Gizbot

ಏರ್‌ಟೆಲ್ ಆಫರ್: ರೂ 259 ಕ್ಕೆ 4ಜಿ ಡೇಟಾ, ಹೊಸ ಸ್ಮಾರ್ಟ್‌ಫೋನ್

Written By:

ರಿಲಾಯನ್ಸ್ ಜಿಯೋ ಭಾರತೀಯ ಟೆಲಿಕಾಮ್ ಕ್ಷೇತ್ರದಲ್ಲಿ ಹೊಸ ಘರ್ಜನೆಯನ್ನೇ ಮಾಡುತ್ತಿದೆ. ಇದಕ್ಕೆ ಸಮನಾಗಿ ಏರ್‌ಟೆಲ್, ವೊಡಾಫೋನ್, ಐಡಿಯಾ, ಏರ್‌ಸೆಲ್ ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದು ಹೊಸ ಹೊಸ ಪ್ಲಾನ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರಿಗೆ ಹೊಸ ಉತ್ಸಾಹವನ್ನು ತುಂಬುತ್ತಿದೆ.

ಓದಿರಿ: ಜಿಯೋದ ಕುರಿತು ಇದೀಗ ಬಂದ ಲೇಟೆಸ್ಟ್ ಸುದ್ದಿ!!!

ಪ್ರಸ್ತುತ ಏರ್‌ಟೆಲ್ ಹೊಸದಾದ ಆಫರ್ ಒಂದನ್ನು ತರುತ್ತಿದ್ದು 10 ಜಿಬಿ 4ಜಿ ಡೇಟಾವನ್ನು ರೂ 259 ಕ್ಕೆ ಇದು ನೀಡುತ್ತಿದೆ. ಈ ಪ್ಲಾನ್ ಹೇಗಿದೆ ಏನಾದರೂ ತೊಡಕುಗಳಿವೆಯೇ? ಎಂಬುದನ್ನು ಇಂದಿಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ಏರ್‌ಟೆಲ್‌ನೊಂದಿಗೆ ಕೈಜೋಡಿಸಿದ ನೋಕಿಯಾ, ಜಿಯೋಗೆ ಕಾದಿದೆ ಸಂಕಷ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4ಜಿ ಡಿವೈಸ್‌ಗಳಿಗೆ ಮಾತ್ರ

4ಜಿ ಡಿವೈಸ್‌ಗಳಿಗೆ ಮಾತ್ರ

ಈ ಹೊಸ ಆಫರ್ ಕೇವಲ 4ಜಿ ಹ್ಯಾಂಡ್‌ಸೆಟ್‌ಗಳಿಗೆ ಮಾತ್ರ ದೊರೆಯುವಂತಹದ್ದಾಗಿದೆ. ಹೊಸ 4ಜಿ ಡಿವೈಸ್ ಅನ್ನು ಖರೀದಿಸುವ ಬಳಕೆದಾರರು ಈ ಆಫರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ರೂ 259 ರಿಚಾರ್ಜ್ ಮಾಡಿ ಮತ್ತು 1ಜಿಬಿ ಡೇಟಾ ಪಡೆದುಕೊಳ್ಳಿ

ರೂ 259 ರಿಚಾರ್ಜ್ ಮಾಡಿ ಮತ್ತು 1ಜಿಬಿ ಡೇಟಾ ಪಡೆದುಕೊಳ್ಳಿ

ಹೊಸ ಹ್ಯಾಂಡ್‌ಸೆಟ್ ಅನ್ನು ಪಡೆದುಕೊಂಡ ನಂತರ, ಮೊದಲಿಗೆ ನೀವು ರೂ 259 ಅನ್ನು ರಿಚಾರ್ಜ್ ಮಾಡಿಕೊಳ್ಳಬೇಕು ಇದು ಆನ್‌ಲೈನ್ ಪೋರ್ಟಲ್ ಅಥವಾ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ರೂ 259 ಪ್ಯಾಕ್ ನಿಮಗೆ 1ಜಿಬಿ ಡೇಟಾವನ್ನು ನೀಡಲಿದೆ

ರೂ 259 ಪ್ಯಾಕ್ ನಿಮಗೆ 1ಜಿಬಿ ಡೇಟಾವನ್ನು ನೀಡಲಿದೆ

ರೂ 259 ಕ್ಕೆ ರಿಚಾರ್ಜ್ ಮಾಡಿಕೊಳ್ಳುವುದು 1ಜಿಬಿ 4ಜಿ ಡೇಟಾವನ್ನು ನಿಮಗೆ ಒದಗಿಸಲಿದ್ದು ಇದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ ಮತ್ತು ಹೆಚ್ಚುವರಿ 9 ಜಿಬಿ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಈಗ, ಮೈ ಏರ್‌ಟೆಲ್ ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಇದರಿಂದ ನೀವು ಹೆಚ್ಚುವರಿ 9 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಅಪ್ಲಿಕೇಶನ್‌ಗೆ ಲಾಗಿನ್ ಆಗಿ ಮತ್ತು ಪಾಪ್ ಅಪ್ ಕ್ಲಿಕ್ಕಿಸಿ. 24 ರಿಂದ 48 ಗಂಟೆಯೊಳಗೆ ನಿಮಗೆ ಹೆಚ್ಚುವರಿ ಡೇಟಾ ದೊರೆಯುತ್ತದೆ

ಮೂರು ಬಾರಿ ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ

ಮೂರು ಬಾರಿ ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ

ಹೊಸ 4ಜಿ ಹ್ಯಾಂಡ್‌ಸೆಟ್ ಅನ್ನು ಹೊಂದಿರುವ ಪ್ರತಿಯೊಬ್ಬ ಬಳಕೆದಾರರು ಈ ಆಫರ್ ಅನ್ನು ಮೂರು ಬಾರಿ ಪಡೆದುಕೊಳ್ಳಬಹುದಾಗಿದೆ, ಅಂದರೆ ನೀವು ರೂ 259 ಅನ್ನು ರಿಚಾರ್ಜ್ ಮಾಡಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ನಿಮಗೆ ಹೆಚ್ಚುವರಿ 9ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Airtel has come up with another offer where the company is offering 10GB of 4G data at just Rs. 259.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot