ಹೆಚ್ಚು ಹಣ ನೀಡಿ ಹೊಸ ಫೋನ್‌ ಖರೀದಿ ಮಾಡ್ತಾ ಇದ್ದೀರಾ?..ಇಲ್ಲಿ ಗಮನಿಸಿ!

|

ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಅವರ ಅಗತ್ಯಕ್ಕೆ ಅನುಗುಣವಾಗಿ ನೂತನ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ. ಕೆಲವರು ಬಜೆಟ್‌ ದರದ ಫೋನ್‌ಗಳನ್ನು ಖರೀದಿಸಿದರೆ, ಮತ್ತೆ ಕೆಲವರು ಹೈ ಎಂಡ್‌ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಮುಂದಾಗುತ್ತಾರೆ. ಅದು ಸುಮಾರು 50,000ರೂ. ಅಧಿಕ ಬೆಲೆಯ ಫೋನ್‌ಗಳಾಗಿರುತ್ತವೆ.

ಗ್ರಾಹಕರು

ಹೌದು, ಕೆಲವು ಬಳಕೆದಾರರು/ ಗ್ರಾಹಕರು ಹೊಸ ಫೋನ್‌ ಖರೀದಿ ಮಾಡುವಾಗ ದುಬಾರಿ ಬೆಲೆಯ ಫೋನ್‌ಗಳತ್ತ ಗಮನ ನೀಡುತ್ತಾರೆ. ಇನ್ನು ದುಬಾರಿ ಬೆಲೆಯ ಫೋನ್‌ಗಳು ವೇಗದ ಪ್ರೊಸೆಸರ್‌, ಹೈ ಎಂಡ್ ಕ್ಯಾಮೆರಾ ಸೆನ್ಸಾರ್, ಬಿಗ್ ಬ್ಯಾಟರಿ ಹಾಗೂ ಕೆಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದಿರುತ್ತವೆ. ನೀವೇನಾದರೂ ಈ ರೀತಿಯ ಸುಮಾರು 60,000ರೂ. ಗಳ ಆಸುಪಾಸಿನಲ್ಲಿ ಸ್ಮಾರ್ಟ್‌ಫೋನ್‌ ಖರೀದಿ ಮಾಡುತ್ತೀರಾ ಎಂದಾದರೆ, ಈ ಲೇಖನದಲ್ಲಿ ತಿಳಿಸಿರುವ ಕೆಲವು ಹೈ ಎಂಡ್‌ ಮಾದರಿಯ ಫೋನ್‌ಗಳ ಬಗ್ಗೆ ಗಮನಿಸಿ. ಮುಂದೆ ಓದಿರಿ.

ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌

ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌

ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌ 6.32 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಮೆಗಾಪಿಕ್ಸೆಲ್

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ. ಜೊತೆಗೆ ಕ್ಯಾಮೆರಾ ಮೂಲಕ ವೀಡಿಯೊ ರೆಕಾರ್ಡ್‌ ಮಾಡುವಾಗ ಬ್ಲರ್‌ ಎಫೆಕ್ಟ್‌ ನೀಡುವ 'ಸಿನಿಮ್ಯಾಟಿಕ್ ಬ್ಲರ್' ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ 4,335mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 30W ವೇಗದ ಚಾರ್ಜಿಂಗ್ ಮತ್ತು ವಾರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ವಿವೋ X80 ಸ್ಮಾರ್ಟ್‌ಫೋನ್‌

ವಿವೋ X80 ಸ್ಮಾರ್ಟ್‌ಫೋನ್‌

ವಿವೋ X80 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಸ್ಮಾರ್ಟ್‌ಫೋನ್

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ.

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 2,412x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬಲವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 10-ಬಿಟ್ ಕಲರ್‌, RGB ಬಣ್ಣದ ಹರವು ಮತ್ತು HDR10+ ಬೆಂಬಲಿಸಲಿದೆ. ಇದು 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಸಹ ನೀಡಲಿದೆ. ಈ ಫೋನ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ರನ್‌ ಆಗಲಿದೆ.

ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡ್ಯುಯಲ್ LED ಫ್ಲ್ಯಾಷ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಜೊತೆಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

Best Mobiles in India

English summary
Buying Expensive smartphone? here's few best phones. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X