Subscribe to Gizbot

ಅಂತರ್ಜಾಲದ ವೇಗವನ್ನು ಪರೀಕ್ಷಿಸಲು ಇಲ್ಲಿವೆ 5 ಪ್ರಮುಖ ಟೂಲುಗಳು

ಡಾಟಾ ಟ್ರಾನ್ಸ್‍ಫರ್ ಕ್ಷೇತ್ರದಲ್ಲಿ ಬೆಳವಣಿಗೆ ಆದಂತೆ ಅತಿ ವೇಗದ ಅಂತರ್ಜಾಲ ಕೂಡ ಅವಶ್ಯವಾಗಿದೆ. ಕೇವಲ ಸಂಸ್ಢೆಗಳಿಗಲ್ಲದೆ ಮನೆಬಳಕೆಯ ಗ್ರಾಹಕರಿಗೂ ಕೂಡ.

ಅಂತರ್ಜಾಲದ ವೇಗವನ್ನು ಪರೀಕ್ಷಿಸಲು ಇಲ್ಲಿವೆ 5 ಪ್ರಮುಖ ಟೂಲುಗಳು

ನೆಟ್‍ವರ್ಕ್ ಕನೆಕ್ಷನ್ ಸರಿಯಾಗಿರುವುದು ತುಂಬಾ ಅವಶ್ಯಕ ನಿಮಗೆ ಮಾತು ಕೊಟ್ಟಂತೆ ಅದು ವೇಗವಾಗಿದೆಯೊ ಇಲ್ಲವೊ ಎಂದು ಪರೀಕ್ಷಿಸಲು. ಇದನ್ನು ಗಮನಿಸುತ್ತಾ ಇರಲು ನೆಟ್‍ವರ್ಕ್‍ನ ಬ್ಯಾಂಡ್‍ವಿಡ್ತ್ ನೋಡಲು ಸಾಕಷ್ಟು ಉಪಕರಣಗಳು(ಟೂಲ್ಸ್) ಲಭ್ಯವಿದೆ.

ಐಫೋನ್‌ನಲ್ಲಿ ಉತ್ತಮ ಮ್ಯೂಸಿಕ್‌ ಅನುಭವಕ್ಕಾಗಿ ಟಾಪ್‌ 5 ಆಪ್‌ಗಳು
ಇದು ನಿಮ್ಮ ಗಣಕಯಂತ್ರ ಮತ್ತು ಅಂತರ್ಜಾಲದ ಮಧ್ಯದ ವೇಗವನ್ನು ಅಳೆಯುತ್ತದೆ ಮತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. 2 ಆಧಾರದ ಮೇಲೆ ಈ ವೇಗದ ಪರೀಕ್ಷೆಯನ್ನು ಮಾಡಲಾಗುವುದು. ಡೌನ್ ಲೋಡ್ ವೇಗ (ಅಂತರ್ಜಾಲದಿಂದ ಗಣಕಯಂತ್ರಕ್ಕೆ ಡಾಟಾ ಕಳಿಸಿದ ವೇಗ) ಹಾಗು ಅಪ್ ಲೋಡ್ ವೇಗ(ಗಣಕಯಂತ್ರದಿಂದ ಅಂತರ್ಜಾಲಕ್ಕೆ ಡಾಟಾ ಕಳಿಸಿದ ವೇಗ).

ಇಂದು, ನಾವು 5 ಉನ್ನತ ಸೈಟ್ ನೊಂದಿಗೆ ಬಂದಿದ್ದೇವೆ, ಇವುಗಳಿಂದ ನೀವು ಅಂತರ್ಜಾಲದ ವೇಗವನ್ನು ಅಳೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಪೀಡ್.ಐ.ಒ

ಸ್ಪೀಡ್.ಐ.ಒ

ನಿಮಗೆ ನಿಮ್ಮ ಬ್ಯಾಂಡ್‍ವಿಡ್ತ್ ನಲ್ಲೇನಾಗುತ್ತಿದೆ ಎಂದು ತಿಳಿಯುವ ಕುತೂಹಲವಿದ್ದರೆ ಸ್ಪೀಡ್.ಐ.ಒ ಸರಿಯಾದ ಪರಿಹಾರ. ಇದೊಂದು ಮಾಡರ್ನ್ ಡಿಎಸ್‍ಎಲ್ ಸ್ಪೀಡ್ ಟೆಸ್ಟ್ ಆಗಿದ್ದು ನಿಮ್ಮ ಬ್ರೊಡ್‍ಬ್ಯಾಂಡ್ ಅನ್ನು ಪರಿಶೀಲಿಸುತ್ತದೆ. ಈ ತಾಣ ನಿಮ್ಮ ಡೌನ್‍ಲೊಡ್, ಅಪ್‍ಲೊಡ್ ಮತ್ತು ಕನೆಕ್ಷನ್ ಸ್ಪೀಡ್ ಅನ್ನು ಪರೀಕ್ಷಿಸುತ್ತದೆ. ಇದು ನಿಮ್ಮ ಸದ್ಯದ ಅಂತರ್ಜಾಲ ವೇಗವನ್ನು ನಿಮ್ಮ ಹತ್ತಿರದ ಸರ್ವರ್ ನೊಂದಿಗೆ ಹೋಲಿಸುತ್ತದೆ. ಅದಲ್ಲದೆ ಇದೆಲ್ಲಾ ಪರೀಕ್ಷೆಯನ್ನು ನಿಮ್ಮ ಬ್ರೌಜರ್ ನಲ್ಲಿ ಮಾಡುತ್ತದೆ ಬೇರಾವುದೆ ಹೊರಗಿನ ತಂತ್ರಾಂಶ( ಎಕ್ಸ್ ಟರ್ನಲ್ ಸಾಫ್ಟ್ ವೇರ್) ಉಪಯೋಗಿಸದೆ.

ಬ್ಯಾಂಡ್‍ವಿಡ್ತ್ ಪ್ಲೇಸ್

ಬ್ಯಾಂಡ್‍ವಿಡ್ತ್ ಪ್ಲೇಸ್

ಇಲ್ಲಿ ನೀವು ಬ್ಯಾಂಡ್‍ವಿಡ್ತ್ ನ ಕಾರ್ಯಕ್ಷಮತೆಯನ್ನು ಅಳೆಯಬಹುದು ಮತ್ತು ಉತ್ತಮಗೊಳಿಸಬಹುದು. ಇದು ಹಗುರವಾಗಿರುವುದರಿಂದ ಇದನ್ನು ನೀವು ನಿಮ್ಮ ಲ್ಯಾಪ್‍ಟಾಪ್, ಸ್ಮಾರ್ಟ್‍ಫೋನ್, ಟಾಬ್ಲೆಟ್ ಗಳಲ್ಲಿಯೂ ಉಪಯೋಗಿಸಬಹುದು. ಇಲ್ಲಿ ಬಳಕೆದಾರರು ಸ್ಥಳ ಹಾಗು ಸರ್ವರ್ ಅನ್ನು ಆಯ್ಕೆ ಮಾಡಿ ಲೆಟೆನ್ಸಿ ಮತ್ತು ವೇಗದ ಮೇಲಾಗುತ್ತಿರುವ ಪರಿಣಾಮವನ್ನು ನೋಡಬಹುದು.

ಟೆಸ್ಟ್‍ಮೈ.ನೆಟ್

ಟೆಸ್ಟ್‍ಮೈ.ನೆಟ್

ಉತ್ತರ ಅಮೇರಿಕಾ, ಯೂರೋಪ್, ಆಸ್ಟ್ರೇಲಿಯಾ ಮತ್ತು ಏಷಿಯಾ ದಲ್ಲಿ ಕೆಲ ಅದ್ಭುತವಾದ ಪರೀಕ್ಷಿಸುವ ಸರ್ವರ್ ಗಳನ್ನು ಟೆಸ್ಟ್‍ಮೈ.ನೆಟ್ ಹೊಂದಿದೆ. ಮೂರನೇ ವ್ಯಕ್ತಿಯಾಗಿರುವ ಈ ಟೂಲ್ ಬ್ಯಾಂಡ್‍ವಿಡ್ತ್ ವೇಗ ಹೇಳುವುದರಲ್ಲಿ ಪರಿಣಿತಿಯನ್ನು ಪಡೆದಿರುವುದಲ್ಲದೆ ಟ್ರಾನ್ಸ್‍ಫರ್ ರೇಟ್, ಕರಾರುವಕ್ಕಾದ ಫಲಿತಾಂಶ ವನ್ನು ಕೂಡ ನಿಮಗೆ ನೀಡುತ್ತದೆ.

ಸ್ಪೀಕ್‍ಈಜಿ.ನೆಟ್

ಸ್ಪೀಕ್‍ಈಜಿ.ನೆಟ್

ಉಚಿತವಾದ ಈ ಅಂತರ್ಜಾಲ ಟೂಲ್ ಕಳೆದೆಲ್ಲಾ ವರ್ಷಗಳಿಂದ ಸ್ನೇಹಪರವಾಗಿದೆ. ಬೇರೆಲ್ಲಾ ಟೂಲ್ ಗಳಂತೆ ಇದು ಕೂಡ ಅಂತರ್ಜಾಲ ವೇಗ ಪರೀಕ್ಷಿಸುತ್ತದೆ 3 ಭಾಗಗಳಲ್ಲಿ - ಡೌನ್‍ಲೋಡ್, ಅಪ್‍ಲೋಡ್ ಮತ್ತು ಅಟೊಮೆಟಿಕ್ ಸ್ಪೀಡ್ ಟೆಸ್ಟ್.

ನೆಟ್‍ವೊರ್‍ಕ್ಸ್

ನೆಟ್‍ವೊರ್‍ಕ್ಸ್

ನೆಟ್‍ವೊರ್‍ಕ್ಸ್ ಅನ್ನು ಆಸ್ಟ್ರೇಲಿಯಾ ದ ಸೊಫ್ಟ್‍ಪರ್ಫೆಕ್ಟ್ ಎನ್ನುವ ಸಂಸ್ಥೆಯು ಬಳಕೆದಾದರರಿಗೆ ಸುಲಭವಾಗಿರಲು, ಸ್ನೇಹಪರವಾಗಿರಲು ತಯಾರಿಸಿತು. ಈ ಟೂಲ್ ಬಳಕೆದಾರರಿಗೆ ಬ್ಯಾಂಡ್‍ವಿಡ್ತ್ ಬಳಕೆಯನ್ನು ಮಾಪಿಸಲು ಮತ್ತು ಬ್ಯಾಂಡ್‍ವಿಡ್ತ್ ನಲ್ಲಿ ಎಲ್ಲಿ ಸಮಸ್ಯೆಯಾಗುತ್ತಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ.
ಉಪಯೋಗಿಸಿದ ಬ್ಯಾಂಡ್ ವಿಡ್ತ್ ನ ಡಾಟಾ ಮತ್ತು ಅಂತರ್ಜಾಲ ವೇಗ ಮಾಪನದ ಫಲಿತಾಂಶವನ್ನು ಸಂಗ್ರಹಿಸಬೇಕೆಂದಿದ್ದರೆ ಈ ಟೂಲ್ ಅತ್ತ್ಯುತ್ತಮ ಆಯ್ಕೆ. ಫಲಿತಾಂಶವನ್ನು ಬೇರೆ ಬೇರೆ ಫಾರ್ಮೆಟ್ ಗಳಿಗೆ ಪರಿವರ್ತಿಸಬಹುದು - ಎಚ್ ಟಿಎಮ್‍ಎಲ್, ಎಮ್‍ಎಸ್ ವರ್ಡ್ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
With a remarkable growth in data transfer field, the high-speed internet has become reality, not only for the organizations but for the homegrown consumers as well.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot