ಮಕ್ಕಳ ದಿನಾಚರಣೆಯಂದು ಗಮನ ಸೆಳೆದ 'ಡೂಡಲ್' ರಚಿಸಿದ್ದು ಮುಂಬೈ ಬಾಲಕಿ!

|

ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಗೂಗಲ್‌ ಅರ್ಪಿಸಿರುವ ವಿಶೇಷ ಡೂಡಲ್ ಭಾರತೀಯರ ಗಮನ ಸೆಳೆಯುತ್ತಿದೆ. ಆದರೆ, ಇದಕ್ಕಿಂತಲೂ ಮತ್ತೊಂದು ಕುತೋಹಲ ವಿಷಯ ಏನೆಂದರೆ, ಗೂಗಲ್ ಬಳಸಿಕೊಂಡಿರುವ ಡೂಡಲ್ ಮುಂಬೈನ ಶಾಲಾ ವಿಧ್ಯಾರ್ಥಿಯಿಂದ ರಚಿತವಾಗಿದೆ. ಮುಂಬೈನ ಪಿಂಗಾಲ ರಾಹುಲ್‌ ಮೋರೆಯ ಚಿತ್ರ ಈಗ ಗೂಗಲ್‌ ಡೂಡಲ್ ಆಗಿ ಮಿಂಚುತ್ತಿದೆ.

ಹೌದು, 'ನನ್ನ ಮೇಲೆ ಪ್ರಭಾವ ಬೀರಿದ್ದು' ಎಂಬ ವಿಷಯದ ಮೇಲೆ ಗೂಗಲ್ ಆಯೋಜಿಸಿದ್ದ ಡೂಡಲ್ ಸ್ಪರ್ಧೆಯಲ್ಲಿ ಈ ಚಿತ್ರವನ್ನು ಆಯ್ದುಕೊಳ್ಳಲಾಗಿದ್ದು, ಮಕ್ಕಳಲ್ಲಿ ಉತ್ತೇಜನ ತುಂಬುವ ಉದ್ದೇಶದಿಂದ ಇದನ್ನು ಆಯ್ಕೆ ಮಾಡಲಾಗಿದೆ. ಬಾಹ್ಯಾಕಾಶ ಪರಿಶೋಧನೆ ಧ್ಯೇಯವನ್ನಿಟ್ಟುಕೊಂಡು ಈ ಡೂಡಲ್ ರಚಿಸಿದ್ದಾಗಿ ವಿಧ್ಯಾರ್ಥಿ ಪಿಂಗಾಲ ರಾಹುಲ್‌ ಮೋರೆ ಕೂಡ ಹೇಳಿದ್ದಾಳೆ.

ಮಕ್ಕಳ ದಿನಾಚರಣೆಯಂದು ಗಮನ ಸೆಳೆದ 'ಡೂಡಲ್' ರಚಿಸಿದ್ದು ಮುಂಬೈ ಬಾಲಕಿ!

'ನಿಮಗೆ ಸ್ಫೂರ್ತಿ ಏನು' ಎಂಬುದು ಈ ವರ್ಷದ ಮಕ್ಕಳ ದಿನಾಚರಣೆಯ ಡೂಡಲ್ ಧ್ಯೇಯವಾಕ್ಯವಾಗಿದ್ದು, ಡೂಡಲ್‌ನಲ್ಲಿ ಹೆಣ್ಣುಮಗುವೊಂದು ಟೆಲಿಸ್ಕೋಪ್ ಮೂಲಕ ಬಾಹ್ಯಾಕಾಶವನ್ನು ನೋಡುತ್ತಿದ್ದಾಳೆ. ಗ್ಯಾಲಾಕ್ಸಿಗಳು, ಗ್ರಹಗಳು, ಅಂತರಿಕ್ಷದಲ್ಲಾಗುವ ವಿಸ್ಮಯಗಳು, ಖಗೋಳ ವಿಜ್ಞಾನದಲ್ಲಿ ಇನ್ನಷ್ಟು ಪರಿಶೋಧನೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶ ಇದರಲ್ಲಿದೆ.

2018ರ ಡೂಡಲ್ 4 ಗೂಗಲ್‌ ಸ್ಪರ್ಧೆಯಲ್ಲಿ ಜಯಗಳಿಸಿದ್ದ ಪಿಂಗಾಲ ರಾಹುಲ್‌, ನಾನು ನನ್ನ ಡೂಡಲ್‌ನಲ್ಲಿ ನನ್ನ ಮೇಲೆ ಪ್ರಭಾವ ಬೀರಿದ್ದನ್ನು ಪ್ರತಿಬಿಂಬಿಸಿದ್ದೇನೆ. ನಾನು ನಿಜಕ್ಕೂ ಬಾಹ್ಯಾಕಾಶ ಸಂಶೋಧನೆಯಿದ ಪ್ರಭಾವಿತಗೊಂಡಿದ್ದೆ. ಹೀಗಾಗಿ ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಬಹಳಷ್ಟು ಇದೆ ಎಂದು ರಾಹುಲ್‌ ಮೋರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.

ಮಕ್ಕಳ ದಿನಾಚರಣೆಯಂದು ಗಮನ ಸೆಳೆದ 'ಡೂಡಲ್' ರಚಿಸಿದ್ದು ಮುಂಬೈ ಬಾಲಕಿ!

ಮಕ್ಕಳ ಬಗ್ಗೆ ಅಪಾರ ಒಲವಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಜನ್ಮದಿನವನ್ನು 'ಮಕ್ಕಳ ದಿನಾಚರಣೆ'ಯೆಂದು ಆಚರಿಸಲು ನೆಹರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು. 1951ರ ನವೆಂಬರ್ 14ರಿಂದ ಭಾರತದಲ್ಲಿ 'ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗಿದೆ.

ಓದಿರಿ: ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!!..ಏಕೆ ಗೊತ್ತಾ!?

Best Mobiles in India

English summary
Google on Wednesday ringed in Children's Day celebrations by dedicating a special doodle on the occasion.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X