Subscribe to Gizbot

ಲ್ಯಾಪ್‌ಟಾಪ್ ಕ್ಷೇತ್ರಕ್ಕೂ ಕಾಲಿಟ್ಟ ಚೀನಾ ಆಪಲ್ ಶ್ಯೋಮಿ

Written By:

ಚೀನಾದ ಆಪಲ್ ಖ್ಯಾತಿಯ ಶ್ಯೋಮಿ ಇದೀಗ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವುದರ ಮೂಲಕ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಬಜೆಟ್ ದರದ ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಭಾರತೀಯ ಬಳಕೆದಾರರ ಮನಗೆದ್ದು ಅವರ ಮನದಲ್ಲಿ ತನ್ನ ಛಾಪು ಮೂಡಿಸಿದ್ದ ಚೀನಾ ಉತ್ಪನ್ನ ಲ್ಯಾಪ್‌ಟಾಪ್ ಮೂಲಕ ಬಳಕೆದಾರರ ಮನದಲ್ಲಿ ನಿಚ್ಛಳವಾಗಿ ಉಳಿಯುವ ಯೋಜನೆಯನ್ನು ಹಾಕಿಕೊಂಡಿದೆ.

ಓದಿರಿ: ಶ್ಯೋಮಿ ಎಮ್ಐ 4 ಫೋನ್ ದರಕಡಿತ ಇದು ಶಾಶ್ವತ

ಆಪಲ್, ಲೆನೊವೊ ಮೊದಲಾದ ಫೋನ್ ಕಮ್ ಲ್ಯಾಪ್‌ಟಾಪ್ ಉತ್ಪನ್ನ ಕಂಪೆನಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲಿರುವ ಶ್ಯೋಮಿ ಅವುಗಳನ್ನು ಸೋಲಿಸುವಂತಹ ರೀತಿಯಲ್ಲಿ ತನ್ನ ಉದ್ಯಮವನ್ನು ಆರಂಭಿಸಬೇಕಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾ ಆಪಲ್ ಶ್ಯೋಮಿ

ಚೀನಾ ಆಪಲ್ ಶ್ಯೋಮಿ

ಅಗ್ಗದ ದರದಲ್ಲಿ ಸ್ಮಾರ್ಟ್‌ಪೋನ್ ತಯಾರಿಸುವ ಕಂಪನಿ ಶ್ಯೋಮಿ ಮುಂದಿನ ವರ್ಷದಲ್ಲಿ ಲ್ಯಾಪ್‌ಟಾಪ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ, ಮತ್ತು ಇದು ದುಬಾರಿ ಬೆಲೆಯ ಆಪಲ್ ಮತ್ತು ಲೆನೊವೊದ ವಿರುದ್ಧ ತನ್ನ ಹೋರಾಟ ಎಂಬುದಾಗಿ ಬಣ್ಣಿಸಿಕೊಂಡಿದೆ.

ಸ್ಯಾಮ್‌ಸಂಗ್‌ನಿಂದ ಮೆಮೊರಿ ಚಿಪ್

ಸ್ಯಾಮ್‌ಸಂಗ್‌ನಿಂದ ಮೆಮೊರಿ ಚಿಪ್

ಆಂಡ್ರಾಯ್ಡ್ ಫೋನ್ ತಯಾರಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ವತಿಯಿಂದ ಮೆಮೊರಿ ಚಿಪ್‌ಗಳನ್ನು ತನ್ನ ಲ್ಯಾಪ್‌ಟಾಪ್‌ಗಳಲ್ಲಿ ಅಳವಡಿಸಿಕೊಳ್ಳುವ ಮಾತುಕತೆಯನ್ನು ಸಂಸ್ಥೆ ನಡೆಸಿದ್ದು ಒಪ್ಪಂದ ಮುಗಿದ ನಂತರ ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಗುವುದು ಎಂದು ಶ್ಯೋಮಿ ಕಂಪೆನಿ ತಿಳಿಸಿದೆ.

ಕೈಗೆಟಕುವ ದರದಲ್ಲಿ ಡಿವೈಸ್ ಮಾರಾಟ

ಕೈಗೆಟಕುವ ದರದಲ್ಲಿ ಡಿವೈಸ್ ಮಾರಾಟ

ಕೇವಲ ಐದು ವರ್ಷದ ಹಿಂದೆ ಆರಂಭವಾದ ಶ್ಯೋಮಿ ಕಂಪೆನಿ ಕೈಗೆಟಕುವ ದರದಲ್ಲಿ ಡಿವೈಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಫೋನ್, ಪವರ್ ಬ್ಯಾಂಕ್ ಉದ್ಯಮದಲ್ಲಿ ಉತ್ತಮವಾದ ಸ್ಥಾನ ಗಿಟ್ಟಿಸಿಕೊಂಡಿದೆ.

ಕಂಪ್ಯೂಟರ್ ಉದ್ಯಮ

ಕಂಪ್ಯೂಟರ್ ಉದ್ಯಮ

ಇದೀಗ ಕಂಪ್ಯೂಟರ್ ಉದ್ಯಮಕ್ಕೂ ಕಾಲಿಡುತ್ತಿರುವ ಚೀನಾದ ಆಪಲ್ ಕಂಪ್ಯೂಟರ್ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳೆಂದೇ ಸ್ಥಾನ ಭದ್ರಪಡಿಸಿಕೊಂಡಿರುವ ಲೆನೊವೊ, ಹೆವ್ಲೆಟ್-ಪ್ಯಾಕರ್ಡ್ ಮತ್ತು ಆಪಲ್ ಇವುಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲಿರುವುದು ನಿಚ್ಚಳವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮಾರಾಟ ಹೆಚ್ಚಳ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮಾರಾಟ ಹೆಚ್ಚಳ

ತನ್ನ ಉತ್ಪಾದನೆಯ ಗ್ಯಾಲಕ್ಸಿ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಶ್ಯೋಮಿ ಇದಕ್ಕಾಗಿ ಕಡಿಮೆ ಮಾಡಿದ್ದು ಮತ್ತು ಇದರಿಂದ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಸ್ಮಾರ್ಟಪೋನ್‌ನ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ. ಆದರೆ ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಸ್ಯಾಮ್‌ಸಂಗ್ ಅಥವ ಶ್ಯೋಮಿ ಸಂಸ್ಥೆ ನಿರಾಕರಿಸಿದೆ.

ಹಾಂಗ್ ಕಾಂಗ್ ಮಾರುಕಟ್ಟೆ

ಹಾಂಗ್ ಕಾಂಗ್ ಮಾರುಕಟ್ಟೆ

ಹಾಂಗ್ ಕಾಂಗ್ ಮಾರುಕಟ್ಟೆಯಲ್ಲಿ 2.5%ರಷ್ಟು ಕುಸಿತಕಂಡಿರುವ ಲೆನೊವೊ ಕಂಪನಿ, ಕಳೆದ ಮೂರು ವರ್ಷದಲ್ಲಿ ಕನಿಷ್ಟ ಮಟ್ಟಕ್ಕೆ ಕುಸಿದಿದ್ದು, ಇದರಿಂದ ಸ್ಯಾಮ್‌ಸಂಗ್ ತನ್ನ ಮಾರುಕಟ್ಟೆಯನ್ನು 0.5% ವರೆಗೆ ಹೆಚ್ಚಿಸಿಕೊಂಡಿದೆ.

ಸ್ಮಾರ್ಟ್‌ಫೋನ್‌ಗಳಿಂದ ಯಶಸ್ಸು

ಸ್ಮಾರ್ಟ್‌ಫೋನ್‌ಗಳಿಂದ ಯಶಸ್ಸು

ಚೀನಾ ದೇಶದ ಬಿಲಿಯನೇರ್ ಜೂನ್ ಅವರು ಸ್ಥಾಪಿಸಿದ ಕಂಪನಿ ಶ್ಯೋಮಿ ಅತ್ಯಂತ ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿ ಬಿಡಿಭಾಗಗಳು ಮತ್ತು ಇಯರ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.

ಅಗ್ಗದ ಸ್ಮಾರ್ಟ್‌ಫೋನ್

ಅಗ್ಗದ ಸ್ಮಾರ್ಟ್‌ಫೋನ್

ವಿಶ್ವದಾದ್ಯಂತ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ 2013 ರಿಂದ 2015 ರ ಎರಡನೆ ತ್ರೈ ಮಾಸಿಕದವರೆಗೆ ತನ್ನದೇ ಆದ ಛಾಪನ್ನು ಸ್ಥಾಪಿಸುವಲ್ಲಿ ಶ್ಯೋಮಿ ಯಶಸ್ವಿಯಾಗಿದ್ದು ಇತ್ತೀಚೆಗೆ ಅಗ್ಗದ ದರದ ಸ್ಮಾರ್ಟ್‌ಪೋನ್ ಬಳಸುವ ದೇಶಗಳಾದ ಭಾರತ, ಬ್ರೆಜಿಲ್ ಇನ್ನಿತಿರ ರಾಷ್ಟ್ರಗಳಲ್ಲಿ ನಿಧಾನವಾಗಿ ತನ್ನ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುತ್ತಿದೆ.

ಕಂಪ್ಯೂಟರ್ ಕ್ಷೇತ್ರ

ಕಂಪ್ಯೂಟರ್ ಕ್ಷೇತ್ರ

ಇದೀಗ ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡುವ ಮೂಲಕ ಕಂಪ್ಯೂಟರ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ಈ ದೈತ್ಯ ಉದ್ಯಮ ರಂಗದಲ್ಲಿ ಹೊಸ ಹವಾ ಸೃಷ್ಟಿಸುವುದಂತೂ ನಿಜ.

ಶ್ಯೋಮಿ ಲ್ಯಾಪ್‌ಟಾಪ್‌

ಶ್ಯೋಮಿ ಲ್ಯಾಪ್‌ಟಾಪ್‌

ಶ್ಯೋಮಿ ಲ್ಯಾಪ್‌ಟಾಪ್‌ಗಳ ಎದುರುಗೊಳ್ಳುವಿಕೆಯನ್ನು ನೀವು ಕಾತರದಿಂದ ನಿರೀಕ್ಷಿಸುತ್ತಿದ್ದೀರಿ ಎಂದಾದಲ್ಲಿ ನಿಮಗೆ ನಿರಾಸೆಯಂತೂ ಖಂಡಿತ ಇಲ್ಲ.ಈ ಲ್ಯಾಪ್‌ಟಾಪ್ ಕೂಡ ಗ್ರಾಹಕರ ಮನದಾಸೆಯಂತೆ ಕೈಗೆಟಕುವ ಬೆಲೆಯಲ್ಲಿ ಬರುವುದಂತೂ ನಿಜ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see that China Apple Xiaomi staring its game through launching laptops. It is become big rival for apple, lenovo laptops and Xiaomi also prepare itself strongly to beat these competition.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot