ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!

|

ಆನ್‌ಲೈನ್‌ ಕೆಲಸಗಳಿಗೆ ಪ್ರಸ್ತುತ ಇಂಟರ್ನೆಟ್‌ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಐಟಿ ಮತ್ತು ನೆಟ್‌ವರ್ಕಿಂಗ್ ದಿಗ್ಗಜ 'ಸಿಸ್ಕೋ' ಕಂಪನಿಯು ಸರ್ಚ್ ಇಂಜಿನ್ ದೈತ್ಯ 'ಗೂಗಲ್' ಜೊತೆಗೂಡಿ ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಹೈ ಸ್ಪೀಡ್‌ ವೈ-ಫೈ ಸೌಲಭ್ಯವನ್ನು ಅಳವಡಿಸಲು ಮುಂದಾಗಿದೆ. ಈ ಯೋಜನೆಯು ಮೊದಲು ಬೆಂಗಳೂರಿನಿಂದಲೇ ಆರಂಭಿವಾಗಿದ್ದು, ಸಾರ್ವಜನಿಕರು ಉಚಿತವಾಗಿ ಇಂಟರ್ನೆಟ್‌ ಆಕ್ಸಸ್ ಮಾಡಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!

ಸಿಸ್ಕೋ ಸಂಸ್ಥೆಯು ಇದೀಗ ಮೊದಲ ಪೈಲಟ್ ಹಂತದಲ್ಲಿ ನಗರದ 35 ಸ್ಥಳಗಳಲ್ಲಿ ಈ ವ್ಯವೆಸ್ಥೆಯನ್ನು ಜಾರಿಮಾಡಿದ್ದು, ಈ ಯೋಜನೆಯು ಗೂಗಲ್‌ನ 'ಸ್ಟೇಷನ್ ಪಾಟ್ಲ್‌ಫಾರ್ಮ್'ನ ಮೂಲಕ ಸಾರ್ವಜನಿಕ ಸಮುದಾಯಗಳಿಗೆ ವೇಗದ ವೈ-ಫೈ ಸೌಲಭ್ಯ ದೊರೆಯುವಂತೆ ಮಾಡಲಿದೆ. ಮುಂಬರುವ ಸೆಪ್ಟಂಬರ್ ವೇಳೆಗೆ ಬೆಂಗಳೂರಿನಲ್ಲಿ 200 ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ಅಳವಡಿಸಲಿದ್ದು, ಎರಡನೇ ಹಂತದಲ್ಲಿ 300 ಸ್ಥಳಗಳಲ್ಲಿ ಸೌಲಭ್ಯ ಒದಗಿಸುವ ಯೋಜನೆಯಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!

ಭಾರತದಲ್ಲಿ ಇಂಟರ್ನೆಟ್ ಮೂಲಭೂತ ಹಕ್ಕುಗಳ ತರಹ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎನ್ನುವುದೇ ಈ ಉಚಿತ ವೈ ಫೈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಿಸ್ಕೋ ಸಂಸ್ಥೆಯು ತಿಳಿಸಿದೆ. ಹಾಗೆಯೇ ಸದ್ಯ ದೇಶದಲ್ಲಿ ಸುಮಾರು ಅರ್ಧ ಮಿಲಿಯನ್‌ನಷ್ಟು ಜನರು ಮಾತ್ರ ಆನ್‌ಲೈನ್‌ನಲ್ಲಿರುತ್ತಾರೆ, ಆದ್ರೆ ಸುಮಾರು 800 ಮಿಲಿಯನ್ ಜನರು ಇನ್ನೂ ಇಂಟರ್ನೆಟ್ ಸಂಪರ್ಕವನ್ನೇ ಪಡೆದುಕೊಂಡಿಲ್ಲ ಎನ್ನುವ ಅಂಶಗಳನ್ನು ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!

ಟ್ರಾಯ್‌ ವರದಿಯ ಪ್ರಕಾರ ವಿಶ್ವದಲ್ಲಿ ಪ್ರತಿ 150 ಜನರಿಗೆ ಒಂದು ವೈ ಫೈ ಹಾಟ್‌ಸ್ಪಾಟ್‌ ಅನುಪಾತವಿದೆ. ಅದೇ ಭಾರತದಲ್ಲಿ ಈ ಅನುಪಾತ ಸಾಧಿಸಲು ಇನ್ನೂ ಎಂಡು ಮಿಲಿಯನ್ ವೈ ಫೈ ಹಾಟ್‌ಸ್ಪಾಟ್‌ ಅಳವಡಿಸಬೇಕಿದೆ. ಆದ್ರೆ ಪ್ರಸ್ತುತ ಭಾರತದಲ್ಲಿರುವುದು 52,000 ವೈ ಫೈ ಹಾಟ್‌ಸ್ಪಾಟ್‌ಗಳು ಮಾತ್ರ ಎನ್ನಲಾಗಿದೆ. ವೇಗದ ವೈ ಫೈ ಇಂಟರ್ನೆಟ್‌ ವಾಣಿಜ್ಯ ಉದ್ದೇಶಕ್ಕೆ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಠಿಸಲು ನೆರವಾಗಲಿದೆ.

ವೇಗದ ವೈ ಫೈ ಇಂಟರ್ನೆಟ್ ಸೌಲಭ್ಯವು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಡಿಜಿಟಲೈಜೆಶನ್‌ಗೂ ಪೂರಕವಾಗಲಿದೆ. ಹಾಗೆಯೇ ಜಾಹಿರಾತು ವಲಯಕ್ಕೂ ಸಾಕಷ್ಟು ಹೊಸ ಅವಕಾಶಗಳನ್ನು ಮಾಡಿಕೊಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸಿಸ್ಕೋ ಮತ್ತು ಗೂಗಲ್ ಸಂಸ್ಥೆಗಳಿಗೂ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಲಿದೆ. ಎಂದು ಇಂಡಿಯಾ ಮತ್ತು ಸಾರ್ಕ್ ಸಿಸ್ಕೋ ಅಧ್ಯಕ್ಷ ಸಮೀರ್ ಗಾರ್ಡ್ ಹೇಳಿದ್ದಾರೆ.

Best Mobiles in India

English summary
The first pilot under the partnership has been rolled out at 35 locations in Bengaluru. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X