Subscribe to Gizbot

ನಿಮ್ಮ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಿ, ಸಂತೋಷವಾಗಿರಿ

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ತೆಗೆಯುವುದು ಮತ್ತು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ನಿಮ್ಮನ್ನು ಖುಷಿಯಾಗಿರಿಸಲಿದೆ, ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ. ಕ್ಯಾಲಿಪೋರ್ನಿಯಾ ಯೂನಿವರ್ಸಿಟಿಯು ಈ ಅಧ್ಯಯನವನ್ನು ಕೈಗೊಂಡಿದ್ದು, ಈ ರೀತಿಯ ನಿರ್ದಿಷ್ಟ ಚಿತ್ರಗಳನ್ನು ತೆಗೆಯುವುದು ಜನರ ಮೇಲೆ ಧನಾತ್ಮಕವಾಗಿ ಪರಿಣಾಮವನ್ನು ಬೀರಲಿದೆ ಎಂಬುದಾಗಿ ತಿಳಿಸಿದೆ.

ಓದಿರಿ: ವಾಟ್ಸಾಪ್‌ನಲ್ಲಿ ಸ್ಮಾರ್ಟ್ ಆಗಿ ಚಾಟ್‌ ಮಾಡಲು 10 ಟಿಪ್ಸ್‌ಗಳು

ತಮ್ಮೊಂದಿಗೆ ಸಂಪರ್ಕದಲ್ಲಿರುವವರೊಂದಿಗೆ ಧನಾತ್ಮಕವಾಗಿ ಬೆರೆತುಕೊಳ್ಳಲು ಸ್ಮಾರ್ಟ್‌ಫೋನ್ ಮೂಲಕ ತೆಗೆದ ಚಿತ್ರವು ಸಹಕಾರಿಯಾಗಲಿದ್ದು ಇದನ್ನು ಹಂಚಿಕೊಳ್ಳುವುದರಿಂದ ಈ ಸಂತಸ ವೃದ್ಧಿಯಾಗಲಿದೆ. ಎಂಬುದಾಗಿ ಮುಖ್ಯ ಲೇಖಕ ಯೂ ಚೆನ್ ತಿಳಿಸಿದ್ದಾರೆ. ಸಂಶೋಧಕರು ತಮ್ಮ ಸಂಶೋಧನೆಗಾಗಿ 41 ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ ಮತ್ತು ಈ ಅಧ್ಯಯನವು ನಾಲ್ಕು ವಾರಗಳ ಕಾಲ ನಡೆದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಶೋಧನೆಯಲ್ಲಿ ಪಾಲ್ಗೊಂಡವರು

ಸಂಶೋಧನೆಯಲ್ಲಿ ಪಾಲ್ಗೊಂಡವರು

ಈ ಸಂಶೋಧನೆಯಲ್ಲಿ 28 ಮಹಿಳೆಯರು ಮತ್ತು 13 ಪುರುಷರು ಪಾಲ್ಗೊಂಡಿದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅವರಲ್ಲಿ ಕೇಳಿಕೊಳ್ಳಲಾಗಿದೆ.

ಡೌನ್‌ಲೋಡ್

ಡೌನ್‌ಲೋಡ್

ಈ ಸರ್ವೇ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸಂಶೋಧಕರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು, ಅವರ ಮೂಡ್ ಕುರಿತು ಅಧ್ಯಯನವನ್ನು ಪ್ರಥಮ ವಾರದಲ್ಲಿ ನಡೆಸಿದ್ದಾರೆ.

ಭಾವನಾತ್ಮಕ ಸ್ಥಿತಿ

ಭಾವನಾತ್ಮಕ ಸ್ಥಿತಿ

ಬೇರೆ ಬೇರೆ ಫೋಟೋಗಳನ್ನು ತೆಗೆಯಲು ಭಾಗವಹಿಸುವವರು ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡಿದ್ದು, ತಮ್ಮ ಭಾವನಾತ್ಮಕ ಸ್ಥಿತಿಗಳನ್ನು ರೆಕಾರ್ಡ್ ಮಾಡಿ ಮೂರು ವಾರದ "ಇಂಟರ್‌ವೆನ್ಶನ್" ಫೇಸ್ ಎಂಬುದಾಗಿ ದಾಖಲಿಸಿದ್ದಾರೆ.

ಮೂರು ಬಾರಿ ವರದಿ

ಮೂರು ಬಾರಿ ವರದಿ

ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಳಸಿಕೊಂಡು ದಿನದಲ್ಲಿ ಮೂರು ಬಾರಿ ತಮ್ಮ ಮೂಡ್‌ಗಳನ್ನು ವರದಿ ಮಾಡಿದ್ದಾರೆ. ದಿನದಲ್ಲಿ ಕೋರ್ಸ್ ನಡೆಯುತ್ತಿರುವಾಗ ತಮ್ಮ ಭಾವನೆಗಳಿಗೆ ಪರಿಣಾಮ ಬೀರುವ ನಿರ್ದಿಷ್ಟ ಈವೆಂಟ್‌ಗಳ ವಿವರಗಳನ್ನು ನೀಡುವಲ್ಲಿ ಅವರಲ್ಲಿ ಕೇಳಲಾಗಿದೆ.

ಹಾವ ಭಾವಗಳಿಂದ ಬಳಕೆದಾರರ ಮೂಡ್

ಹಾವ ಭಾವಗಳಿಂದ ಬಳಕೆದಾರರ ಮೂಡ್

ನಗುವುದು ಹೇಗೆ ಮೊದಲಾದ ಹಾವ ಭಾವಗಳಿಂದ ಬಳಕೆದಾರರ ಮೂಡ್ ಅನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಇದಕ್ಕಾಗಿ ಮೂರು ರೀತಿಯ ಫೋಟೋಗಳನ್ನು ಅವರು ಉಪಯೋಗಿಸಿಕೊಂಡಿದ್ದಾರೆ.

ನಗುತ್ತಿರುವಾಗ ತೆಗೆದ ಸೆಲ್ಫಿ

ನಗುತ್ತಿರುವಾಗ ತೆಗೆದ ಸೆಲ್ಫಿ

ನಗುತ್ತಿರುವಾಗ ತೆಗೆದ ಸೆಲ್ಫಿ. ಇನ್ನೊಂದು ಫೋಟೋ ತೆಗೆಯುವವರನ್ನು ಸಂತಸವಾಗಿರಿಸಿದ ಚಿತ್ರ. ಮೂರನೆಯ ಚಿತ್ರವು ಇನ್ನೊಬ್ಬರ ಮುಖದಲ್ಲಿ ನಗುವನ್ನು ತರಬಹುದೆಂದು ಫೋಟೋಗ್ರಾಫರ್ ನಂಬಿದ ಚಿತ್ರ ಹೀಗೆ ಇದನ್ನು ಸಂಶೋಧಕರು ವಿಭಜನೆ ಮಾಡಿಕೊಂಡಿದ್ದಾರೆ.

2,900 ಮೂಡ್ ಮೆಶರ್‌ಮೆಂಟ್‌

2,900 ಮೂಡ್ ಮೆಶರ್‌ಮೆಂಟ್‌

ಸಂಶೋಧಕರು ಹತ್ತಿರ ಹತ್ತಿರ 2,900 ಮೂಡ್ ಮೆಶರ್‌ಮೆಂಟ್‌ಗಳನ್ನು ತೆಗೆದಿದ್ದು ಈ ಮೂರು ಗುಂಪುಗಳಲ್ಲಿ ಇದು ಧನಾತ್ಮಕ ಮೂಡ್‌ಗಳನ್ನು ಹೆಚ್ಚಿಸಿದೆ. ಕೆಲವು ಭಾಗವಹಿಸುವವರು ಹೆಚ್ಚು ಆತ್ಮವಿಶ್ವಾಸಿಗರು ಮತ್ತು ಆರಾಮದಾಯಕತೆಯನ್ನು ತಮ್ಮ ನಗುತ್ತಿರುವ ಫೋಟೋಗಳಲ್ಲಿ ಹೊಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Snapping selfies with your smartphone and sharing photos with friends can make you a happier person, according to a first-of-its-kind study.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot