ವಾಟ್ಸಾಪ್‌ನಲ್ಲೇ ದೂರು ಸಲ್ಲಿಸುವ ಸೌಲಭ್ಯ?: ಇನ್ಮುಂದೆ ಗ್ರಾಹಕರು ಮೋಸ ಹೋಗುವುದಿಲ್ಲ!

|

ವಾಟ್ಸಾಪ್‌ ಈಗಂತೂ ಎಲ್ಲಾ ವಿಭಾಗದಲ್ಲೂ ತನ್ನ ಪರಾಕ್ರಮ ಮೆರೆಯಲು ಮುಂದಾಗಿದೆ. ಇದರ ಭಾಗವಾಗಿಯೇ ಈಗಾಗಲೇ ಬ್ಯಾಂಕ್ ವ್ಯವಹಾರ, ಮೆಟ್ರೋ ಟ್ರೈನ್‌ ಟಿಕೆಟ್‌ ಬುಕ್‌ ಮಾಡುವುದು ಸೇರಿದಂತೆ ಪ್ರತಿ ವಿಭಾಗದಲ್ಲೂ ಕೂಡ ಸೇವೆ ನೀಡುತ್ತಾ ಬರುತ್ತಿದೆ. ಅದರಂತೆ ಇನ್ಮುಂದೆ ಗ್ರಾಹಕರು ಸುಲಭವಾಗಿ ಮಹತ್ವದ ಕೆಲಸವೊಂದನ್ನು ಮಾಡುವ ಮೂಲಕ ಮೋಸ ಮಾಡುವವರ ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಮಾಡಬಹುದು.

ಗ್ರಾಹಕರು

ಹೌದು, ಭಾರತದಲ್ಲಿನ ಗ್ರಾಹಕರು ಶೀಘ್ರದಲ್ಲೇ ದೋಷಪೂರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ವಾಟ್ಸಾಪ್‌ ಮೂಲಕವೇ ವರದಿ ಮಾಡಬಹುದು ಎನ್ನಲಾಗಿದೆ. ಈ ಹಿಂದೆ ಈ ರೀತಿಯ ವರದಿಗಳಿಗೆ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿತ್ತು. ಆದರೆ, ಮುಂದಿನ ದಿನಗಳಲ್ಲಿ ಈ ಕೆಲಸ ಬಹಳ ಸರಳವಾಗಿದೆ. ಹಾಗಿದ್ರೆ ವಾಟ್ಸಾಪ್‌ನಲ್ಲಿ ಹೇಗೆ ವರದಿ ಸಲ್ಲಿಸುವುದು?, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ವಾಟ್ಸಾಪ್‌ ಕೆಲಸ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಗ್ರಾಹಕರು

ಇನ್ಮುಂದೆ ಗ್ರಾಹಕರು ತಮ್ಮ ದೂರುಗಳನ್ನು ಸುಲಭವಾಗಿ ನೋಂದಾಯಿಸಲು ಮತ್ತು ಸಮಸ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಲು ವಾಟ್ಸಾಪ್‌ ಅನುಮತಿಸುತ್ತದೆ ಎಂದು ತಿಳಿದುಬಂದಿದೆ. ದೂರನ್ನು ದಾಖಲಿಸುವುದನ್ನು ಸುಲಭಗೊಳಿಸುವುದರ ಜೊತೆಗೆ ಗ್ರಾಹಕರಿಗೆ ತಮ್ಮ ದೂರಿನ ಸ್ಟೇಟಸ್‌ ಅನ್ನು ಸಹ ಟ್ರ್ಯಾಕ್ ಮಾಡಲು ಸಹಾಯಕವಾಗಿದ್ದು, ಯಾವುದೇ ಕರೆ ಮಾಡಿ ನಮ್ಮ ದೂರು ಏನಾಯ್ತು?, ಎಲ್ಲಿಯವರೆಗೆ ಬಂದು ಎಂದು ಕರೆ ಮಾಡಿ ಕೇಳುವ ತಾಪತ್ರಯ ತಪ್ಪಲಿದೆ.

ಪ್ರಸ್ತುತ ದೂರುಗಳು ಹೇಗೆ ದಾಖಲಾಗುತ್ತಿವೆ?

ಪ್ರಸ್ತುತ ದೂರುಗಳು ಹೇಗೆ ದಾಖಲಾಗುತ್ತಿವೆ?

ಸದ್ಯಕ್ಕೆ ಭಾರತದಲ್ಲಿ ಈ ಸೇವೆಯನ್ನು ಗ್ರಾಹಕರಿಗೆ ಉತ್ತಮವಾಗಿ ನೀಡಲಾಗುತ್ತಿದ್ದು, 1800-11-4000 ಅಥವಾ 1915 (ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ) ಅಥವಾ 8800001915 ಗೆ ಎಸ್‌ಎಮ್‌ಎಸ್‌ ಕಳುಹಿಸುವ ಮೂಲಕ ದೂರುಗಳನ್ನು ದಾಖಲು ಮಾಡಲಾಗುತ್ತದೆ. ಇದ್ಯಾವುದು ಬೇಡ ಎಂದರೆ https://consumerhelpline.gov.in ಮೂಲಕವೂ ದೂರು ದಾಖಲು ಮಾಡಬಹುದು. ಅಥವಾ NCH ಆಪ್‌ ಅಥವಾ Umang ಆಪ್‌ ಮೂಲಕವೂ ಈ ಕೆಲಸ ಮಾಡಬಹುದಾಗಿದೆ.

ಎಷ್ಟು ದೂರು ದಾಖಲಾಗುತ್ತಿವೆ?

ಎಷ್ಟು ದೂರು ದಾಖಲಾಗುತ್ತಿವೆ?

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು (700,000) ದೂರುಗಳನ್ನು ಸ್ವೀಕರಿಸುತ್ತಿದೆಯಂತೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಫೋನ್ ಸಹಾಯವಾಣಿ ಮೂಲಕ ಬರುತ್ತವೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಚಿವಾಲಯವು 10 ವಿವಿಧ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಸಹಾಯವಾಣಿಗಳನ್ನು ತೆರೆದಿದ್ದು, ಈ ಮೂಲಕ ಗ್ರಾಹಕರು ತಾವು ಮಾತನಾಡುವ ಭಾಷೆಯ ಮೂಲಕವೇ ಸುಲಭವಾಗಿ ದೂರು ನೀಡಬಹುದಾಗಿದೆ.

ದೂರು

ಸ್ವೀಕರಿಸಿದ ದೂರುಗಳಲ್ಲಿ 90 ಪ್ರತಿಶತವನ್ನು ಸಹಾಯವಾಣಿ ಮೂಲಕ ಯಶಸ್ವಿಯಾಗಿ ಪರಿಹರಿಸಲಾಗಿದ್ದು, ಉಳಿದ ದೂರುಗಳನ್ನು ಮುಂದಿನ ಕ್ರಮಕ್ಕಾಗಿ ಗ್ರಾಹಕ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಇದೀಗ ವಾಟ್ಸಾಪ್‌ನಲ್ಲೂ ಈ ಫೀಚರ್ಸ್‌ ಲಭ್ಯವಾಗುತ್ತಿದ್ದು, ಬಳಕೆದಾರರು ಇನ್ನಷ್ಟು ಸುಲಭವಾಗಿ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದಾಗಿದೆ.

ವ್ಯವಹಾರಗಳ

ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ನಿರ್ಧಾರ ಮಾಡಿದ್ದು, ಇನ್ಮುಂದೆ ನಿಮಗೇನಾದರೂ ಕೆಟ್ಟ ಉತ್ಪನ್ನಗಳು ಮತ್ತು ಸೇವೆಗಳನ್ನು ಯಾರಾದರೂ ನೀಡಿದರೆ ತಕ್ಷಣವೇ ವರದಿ ಮಾಡಿ. ಹಾಗೆಯೆ ಅಗತ್ಯ ಇರುವ ಸಹಾಯವನ್ನು ಸಹ ಪಡೆದುಕೊಳ್ಳಿ.

ಏಪ್ರಿಲ್

ಕೇಂದ್ರ ಸರ್ಕಾರವು ಏಪ್ರಿಲ್ 2023 ರಿಂದ ಗ್ರಾಹಕರ ದೂರುಗಳ ಇ-ಫೈಲಿಂಗ್ ಅನ್ನು ಕಡ್ಡಾಯಗೊಳಿಸಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಈ ಕ್ರಮವು ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಜನರು ದೈಹಿಕವಾಗಿ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಗ್ರಾಹಕ ಆಯೋಗಗಳು ಅಥವಾ ನ್ಯಾಯಾಲಯಗಳ ಮುಂದೆ ದೂರುಗಳನ್ನು ಸಲ್ಲಿಸಬಹುದು. ಅದರಲ್ಲೂ ಗ್ರಾಹಕರ ದೂರುಗಳಿಗಾಗಿ ಎಲೆಕ್ಟ್ರಾನಿಕ್ ಫೈಲಿಂಗ್ (ಇ-ಫೈಲಿಂಗ್) ಆಯ್ಕೆಯನ್ನು ಸೆಪ್ಟೆಂಬರ್ 7, 2020 ರಂದು ಪರಿಚಯಿಸಲಾಗಿತ್ತಾದರೂ ಕಡ್ಡಾಯವಾಗಿರಲಿಲ್ಲ.

Best Mobiles in India

English summary
Consumers will soon be able to register complaints through WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X