ಕೊರೊನಾ ಕವಚ್: ಸರ್ಕಾರದ ಹೊಸ ಲೊಕೇಶನ್ ಆಧಾರಿತ ಕೋವಿಡ್-19 ಟ್ರಾಕರ್‌ ಆಪ್!

|

ಜಗತ್ತನ್ನೇ ಭೀತಿ ಮುಳುಗಿಸಿರುವ ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕು ಭಾರತವನ್ನು ನಲುಗಿಸಿದೆ. ಕೊರೊನಾ ವೈರಸ್‌ ಹರಡದಂತೆ ನಿಯಂತ್ರಿಸಲು ಸರ್ಕಾರ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಆರೋಗ್ಯ ಇಲಾಖೆಯು ಸಹ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೊರೊನಾ ಕವಚ್ ಹೆಸರಿನ COVID-19 ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ತಂತ್ರಜ್ಞಾನ ಸಚಿವಾಲಯ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MHFW) ಸಹಯೋಗದೊಂದಿಗೆ ಕೊರೊನಾ ಕವಚ್ ಹೆಸರಿನ COVID-19 ಟ್ರ್ಯಾಕರ್ ಆಪ್‌ ಅಭಿವೃದ್ದಿ ಪಡಿಸಿದೆ. ಬಳಕೆದಾರರ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ಈ ಆಪ್‌ಗೆ ಲಾಗ್‌ ಇನ್ ಆಗುವ ವ್ಯವಸ್ಥೆ ಇದೆ. ಹಾಗೆಯೇ ಈ ಆಪ್ ಬಳಕೆದಾರರ ಲೊಕೇಶನ್ ಆಕ್ಸಸ್‌ ಬೇಡುತ್ತದೆ. ಅಂದಹಾಗೆ ಈ ಆಪ್ ಆಂಡ್ರಾಯ್ಡ್ ಓಎಸ್‌ನಲ್ಲಿ ಮಾತ್ರ ಲಭ್ಯ.

ಕೊರೊನಾ ಕವಚ್ ಆಪ್ ಕಾರ್ಯ ಹೇಗೆ

ಕೊರೊನಾ ಕವಚ್ ಆಪ್ ಕಾರ್ಯ ಹೇಗೆ

ಬಳಕೆದಾರರು ಈ ಆಪ್‌ಗೆ ಲಾಗ್‌ ಇನ್ ಆದ ಮೊದಲಿಗೆ ಆರು ಸರಳ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿರುತ್ತದೆ. ಅವುಗಳು ಕೊರೊನಾ ವೈರಸ್‌ ಕುರಿತಾಗಿರುತ್ತವೆ. ನಿಮಗೆ ಉಸಿರಾಟದ ತೊಂದರೇ ಇದೆಯಾ? ನೀವು ವಿದೇಶದಿಂದ ಬಂದಿರುವಿರಾ? ದೇಹದ ಉಷ್ಣಾಂಶ ಎಷ್ಟು? ಒಣ ಕೆಮ್ಮು ಅಥವಾ ಗಂಟಲು ನೋವು ಇದೆಯಾ? ವಿದೇಶದಿಂದ ಯಾರನ್ನಾದರು ಭೇಟಿ ಮಾಡಿರುವಿರಾ? ಈ ಪ್ರಶ್ನೆಗಳು ಇರುತ್ತವೆ.

ಬಳಕೆದಾರರ ವಿಂಗಡಣೆ

ಬಳಕೆದಾರರ ವಿಂಗಡಣೆ

ಆಪ್‌ ಲಾಗ್‌ ಇನ್ ಸಮಯದಲ್ಲಿ ಕೇಳಲಾದ ಪ್ರಶ್ನೆಗಳ ಅಧಾರದ ಮೇಲೆ ಬಳಕೆದಾರರನ್ನು ವಿಂಗಡಿಸುವ ವ್ಯವಸ್ಥೆ ಈ ಆಪ್‌ನಲ್ಲಿ ಮಾಡಲಾಗಿದೆ. ಎಲ್ಲ ಪ್ರಶ್ನೆ ಉತ್ತರಿಸಿದ ಬಳಿಕ ಹಸಿರು ಬಣ್ಣದ ಕೋಡ್ ಕಂಡರೇ ಎಲ್ಲ ಉತ್ತಮ ಎಂದರ್ಥ. ಅದೇ ಕಿತ್ತಳೆ ಬಣ್ಣದ ಕೋಡ್ ಕಂಡರೇ ವೈದ್ಯರನ್ನು ಸಂಪರ್ಕಿಸಲು ಸೂಚನೆ. ಇನ್ನು ಸಂಪರ್ಕ ತಡೆಗೆ ಹಳದಿ ಬಣ್ಣದ ಕೋಡ್ ಮತ್ತು ಸೋಂಕಿತರಿಗೆ ಕೆಂಪು ಬಣ್ಣದ ಕೋಡ್ ಸೂಚಿಸಲಾಗುತ್ತದೆ.

ಅಲರ್ಟ್ ಮಾಡುತ್ತೆ

ಅಲರ್ಟ್ ಮಾಡುತ್ತೆ

ಬಳಕೆದಾರರು ಪ್ರಶ್ನೆಗಳಿಗೆ ಮಾಹಿತಿ ನೀಡಿ. ಬಣ್ಣಗಳ ಸೂಚನೆ ಪಡೆದ ಬಳಿಕ ಕವಚ್ ಬಟನ್ ಅನ್ನು ಸಕ್ರಿಯ/ಆಕ್ಟಿವ್ ಮಾಡಿಕೊಳ್ಳುವುದು. ಆ ನಂತರ ಈ ಆಪ್ ನಿಮ್ಮನ್ನು ಟ್ರಾಕ್ ಮಾಡುತ್ತಲೇ ಇರುತ್ತದೆ. ಮನೆಯಿಂದ ಹೋರಗೆ ಹೋದಾಗ ನಿಮ್ಮ ಲೊಕೇಶನ್ ವ್ಯಾಪ್ತಿಯಲ್ಲಿ ಎಲ್ಲಾದರು ಸೋಂಕಿತರು ಅಥವಾ quarantine ವ್ಯಕ್ತಿಗಳು ಬಂದಿರುವ ವ್ಯಕ್ತಿಗಳು ಇದ್ದರೇ ಅಲರ್ಟ್ ಮಾಡುತ್ತದೆ ಎಂದು ಹೇಳಲಾಗಿದೆ.

ಅಪ್ಲಿಕೇಶನ್

ಕೊರೊನಾ ಕವಚ್ ಅಪ್ಲಿಕೇಶನ್ ಕಾರ್ಯವೈಖರಿ ಉತ್ತಮ ಅನಿಸುತ್ತದೆ. ಆದರೆ ಈ ಆಪ್‌ನಲ್ಲಿ ಲಾಗ್‌ ಇನ್ ಆಗಿರುವ ವ್ಯಕ್ತಿಗಳ ಆಧಾರದ ಮೇಲೆ ಮಾಹಿತಿ ನೀಡುತ್ತದೆ. ಹಾಗೂ ಲೊಕೇಶನ್ ಆನ್ ಇರಲೇಬೇಕು. ಇಂತ ಕೆಲ ಸಂದರ್ಭಗಳಲ್ಲಿ ಇದರ ಕಾರ್ಯವೈಖರಿ ಕಷ್ಟ ಸಾಧ್ಯ ಆಗಬಹುದು.

Best Mobiles in India

English summary
The Corona Kavach app is in beta phase right now and is only available for Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X