Subscribe to Gizbot

ಭರ್ಜರಿ ಪ್ಲಾನ್ ಹಾಕಿ ಅಮೆಜಾನ್ ಗೆ 52 ಲಕ್ಷ ರೂ. ಟೋಪಿ ಹಾಕಿದ ದೆಹಲಿ ಯುವಕ

Written By:

ದಿನೇ ದಿನೇ ಆನ್‌ಲೈನ್ ವಹಿವಾಟು ಜೋರಾಗಿ ನಡೆಯುತ್ತಿದ್ದು, ಇದನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಪ್ರತಿಷ್ಠಿತ ಅಮೆಜಾನ್ ಶಾಪಿಂಗ್ ತಾಣಕ್ಕೆ ಸುಮಾರು 52 ಲಕ್ಷ ರೂ. ವಂಚನೆ ಮಾಡಿದ್ದಾನೆ ಎನ್ನಲಾಗಿದ್ದು, ಇತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಭರ್ಜರಿ ಪ್ಲಾನ್ ಹಾಕಿ ಅಮೆಜಾನ್ ಗೆ 52 ಲಕ್ಷ ರೂ. ಟೋಪಿ ಹಾಕಿದ ದೆಹಲಿ ಯುವಕ

ಓದಿರಿ: ಮುಗಿತು ಜಿಯೋ ಫೋನ್ ಕತೆ: ರೂ.1,399ಕ್ಕೆ ಏರ್‌ಟೆಲ್ ಸ್ಮಾರ್ಟ್‌ಫೋನ್‌ ಬಿಡುಗಡೆ..!

ಅಮೆಜಾನ್ ನಲ್ಲಿ ಮೊಬೈಲ್ ಬುಕ್ ಮಾಡಿ, ಫೋನ್ ಬಂದಿಲ್ಲ ಎಂದು ಹೇಳಿ ಸುಮಾರು 52 ಲಕ್ಷ ರೂ. ವಂಚಿಸಿದ್ದಾನೆ 21 ವರ್ಷದ ಶಿವಂ ಚೋಪ್ರಾ. ಇತ ಇದುವರೆಗೂ ದುಬಾರಿ ಬೆಲೆಯ 225 ಮೊಬೈಲ್ ಗಳನ್ನು ಬುಕ್ ಮಾಡಿ, 166 ಬಾರಿ ಆನ್‌ಲೈನ್ ಶಾಪಿಂಗ್ ತಾಣದಿಂದ ಹಣವನ್ನು ವಾಪಸ್ಸು. ಬುಕ್ ಮಾಡಿಕೊಂಡಿರುವ ಎಲ್ಲ ಮೊಬೈಲ್ ಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
141 ಸಿಮ್ ಕಾರ್ಡ್:

141 ಸಿಮ್ ಕಾರ್ಡ್:

ಒಟ್ಟು 141 ಸಿಮ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದ ಈತ, ಈ ನಂಬರ್ ಗಳಿಂದ 50ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದನು. ಎಲ್ಲ ಸಿಮ್ ಗಳಿಗೂ ನಕಲಿ ದಾಖಲೆಗಳನ್ನು ನೀಡಿದ್ದ. ನಕಲಿ ಸಿಮ್ ನಂಬರ್ ಮತ್ತು ಮೇಲ್ ಐಡಿಗಳಿಂದ ಆನ್‍ಲೈನ್ ಶಾಪಿಂಗ್ ಅಕೌಂಟ್ ಓಪನ್ ಮಾಡಿ, ಅವುಗಳ ಮೂಲಕವೇ ವ್ಯವಹಾರ ಮಾಡುತ್ತಿದ್ದ.

ಖಾಲಿ ಡಬ್ಬಾ ಎಂದು ಹಣ ವಸೂಲಿ:

ಖಾಲಿ ಡಬ್ಬಾ ಎಂದು ಹಣ ವಸೂಲಿ:

ಆನ್‌ಲೈನಿನಲ್ಲಿ ಮೊಬೈಲ್ ಬಂದ ಕೂಡಲೇ ಕಂಪನಿಗೆ ಕರೆ ಮಾಡಿ ಖಾಲಿ ಡಬ್ಬ ಮಾತ್ರ ಬಂದಿದೆ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಗ್ರಾಹಕರ ಹಿತಾಸಕ್ತಿಗಾಗಿ ಕಂಪನಿಯೂ ತನ್ನ ಖ್ಯಾತಿ ಚ್ಯುತಿ ಬಾರದಿರಲಿ ಎಂದು ಮೊಬೈಲ್ ಗೆ ನೀಡಿದ ಹಣದೊಂದಿಗೆ ಗಿಫ್ಟ್ ವೋಚರ್ ಸಹ ನೀಡುತ್ತಿದ್ದರು ಎನ್ನಲಾಗಿದೆ.

ಶುಭಂ ಎಂಬ ಹೆಸರು ಮುಳುವಾಯಿತು:

ಶುಭಂ ಎಂಬ ಹೆಸರು ಮುಳುವಾಯಿತು:

ಪ್ರತಿಬಾರಿಯೂ ಶಾಪಿಂಗ್ ಮಾಡುವಾಗ ಶುಭಂ ಎಂಬ ಹೆಸರನ್ನು ಹೇಳುತ್ತಿದ್ದನು. ಮೊಬೈಲ್‌ಗಳು ಪ್ರತಿಬಾರಿಯೂ ದೆಹಲಿಯ ತ್ರಿನಗರದಿಂದಲೇ ಬುಕ್ ಮಾಡಲಾಗುತ್ತಿತ್ತು ಹಾಗೂ ಮೂವರು ಡೆಲಿವರಿ ಬಾಯ್ ಗಳು ಈತನನ್ನು ಗುರುತಿಸಿದ್ದರು. ಇದರಿಂದ ಅನುಮಾನಗೊಂಡ ಕಂಪನಿ ದೆಹಲಿಯ ಶಾಲಿಮಾರ್ ಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಶುಭಂ ಎಂಬ ಹೆಸರು ಆತನಿಗೆ ಮುಳುವಾಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A 21-year-old man from New Delhi has been arrested by police after he conned e-commerce giants Amazon to the tune of Rs 50 lakh, between April and May this year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot